Ethanol
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಲೋಕಸಭೆ ಅಧಿವೇಷನಕ್ಕೆ ಬರುವುದು ಟೊಯೊಟಾದ ವಾಹನದಲ್ಲಿ. ಇದರಲ್ಲೇನು ವಿಶೇಷ ಅನ್ನಬಹುದು, ವಿಶೇಷವೆಂದರೆ ಗಡ್ಕರಿ ಸಂಚರಿಸುವ ಟೊಯೊಟಾ ಕಾರು ಪೆಟ್ರೋಲ್, ಡೀಸೆಲ್ ಅಥವಾ ಬ್ಯಾಟರಿಯಿಂದ ಓಡುವುದಲ್ಲ. ಬದಲಿಗೆ ಅದು ಎಥೆನಾಲ್ ನಿಂದ ಓಡುವ ಕಾರು. ಇಂಧನ, ಬ್ಯಾಟರಿ ಚಾಲಿತ ವಾಹನಗಳಿಗಿಂತಲೂ ಅತ್ಯಂತ ಕಡಿಮೆ ಖರ್ಚಿನ ಹಾಗೂ ಹೆಚ್ಚು ಪರಿಸರ ಉಪಯೋಗಿ ವಾಹನ ಈ ಎಥೆನಾಲ್ ಚಾಲಿತ ವಾಹನ.
ವಿಶ್ವದಲ್ಲೆಲ್ಲ ಈಗ ಬ್ಯಾಟರಿ ಚಾಲಿತ ವಾಹನಗಳ ಭರಾಟೆ ನಡೆದಿದೆ. ಭಾರತದಲ್ಲಿ ಸಹ ಹಲವು ಕಾರು ಹಾಗೂ ಬೈಕ್ ನಿರ್ಮಾಣ ಸಂಸ್ಥೆಗಳು ಎಲೆಕ್ಟ್ರಿಕ್ ಬೈಕ್ ಹಾಗೂ ಕಾರು ನಿರ್ಮಾಣ ಮಾಡುತ್ತಿವೆ. ಆದರೆ ವಿದ್ಯುತ್ ಉತ್ಪಾದನೆಗೆ ಭಾರಿ ಪ್ರಮಾಣದ ಹಣ ಖರ್ಚಾಗುವ ಜೊತೆಗೆ ವಿದ್ಯುತ್ ಉತ್ಪಾದನೆ, ಬ್ಯಾಟರಿ ಉತ್ಪಾದನೆಯಿಂದ ಪರಿಸರಕ್ಕೆ ಸೇರುವ ತ್ಯಾಜ್ಯವನ್ನು ಗಮನದಲ್ಲಿಟ್ಟುಕೊಂಡರೆ ವಿದ್ಯುತ್ ಚಾಲಿತ ವಾಹನಗಳು ಪರಿಸರಕ್ಕೆ ಮಾರಕ ಎನ್ನಲಾಗುತ್ತದೆ. ಇದರ ಜೊತೆಗೆ ವಿದ್ಯುತ್ ಚಾಲಿತ ವಾಹನಗಳು ಬಹಳ ದುಬಾರಿ ಸಹ. ಆದರೆ ಎಥೆಲಾನ್ ಚಾಲಿಕ ವಾಹನಗಳಿಂದ ಪರಿಸರಕ್ಕೆ ಅತ್ಯಂತ ಕಡಿಮೆ ಹಾನಿ ಆಗುವ ಜೊತೆಗೆ ಬೆಲೆಯೂ ಸಹ ಕಡಿಮೆಯೇ ಹಾಗಾಗಿ ಸಚಿವ ನಿತಿನ್ ಗಡ್ಕರಿ ಎಥೆನಾಲ್ ಚಾಲಿತ ವಾಹನಗಳ ಕಡೆಗೆ ಹೆಚ್ಚು ಗಮನವಹಿಸಿದ್ದಾರೆ.
ಇತ್ತೀಚೆಗಷ್ಟೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಗಡ್ಕರಿ, ‘ಭಾರತದ ಕೆಲ ಕಾರು ತಯಾರಿಕಾ ಕಂಪೆನಿಗಳು ಶೀಘ್ರವೇ 100% ಎಥೆನಾಲ್ ಎಂಜಿನ್ ಕಾರುಗಳನ್ನು ತಯಾರಿಸಲಿವೆ. ಈಗಾಗಲೆ ಟೊಯೊಟಾ, ಅಹ್ಮದಾಬಾದ್, ಮಹಾರಾಷ್ಟ್ರಗಳಲ್ಲಿ ಎಂಜಿನ್ ನಿರ್ಮಾಣ ಘಟಕವನ್ನು ಸ್ಥಾಪಿಸಲು ಮುಂದಾಗಿದ್ದು ಇದಕ್ಕಾಗಿ 20 ಸಾವಿರ ಕೋಟಿ ಹಣವನ್ನು ಹೂಡಿಕೆ ಮಾಡುತ್ತಿವೆ. ಮಾರುತಿ, ಟಾಟಾ ಸಂಸ್ಥೆಗಳು ಸಹ ಎಥೆನಾಲ್ ಎಂಜಿನ್ ನಿರ್ಮಾಣ ಆರಂಭಿಸಲಿವೆ, ದ್ವಿಚಕ್ರ ವಾಹನ ನಿರ್ಮಾಣ ಮಾಡುವ ಟಿವಿಎಸ್, ಬಜಾಜ್ ಸಹ ಫ್ಲೆಕ್ಸ್ ಎಂಜಿನ್ ಗಳ ನಿರ್ಮಾಣ ಮಾಡಲಿದೆ ಎಂದಿದ್ದಾರೆ.
Car News: ಮಾರುತಿ ಎರ್ಟಿಗಾ ಅನ್ನು ಹಿಂದಿಕ್ಕುತ್ತದೆ ಈ ಕಾರು: ಬೆಲೆ ಒಂದೇ, ಸೌಲಭ್ಯ ಹೆಚ್ಚು
ಎಥೆನಾಲ್ ಅಥವಾ ಫ್ಲೆಕ್ಸ್ ಎಂಜಿನ್, ಕಬ್ಬು, ಮೊಲೆಸಸ್, ಕಾರ್ನ್ ತ್ಯಾಜ್ಯದಿಂದ ಹೊರತೆಗೆಯಲಾದ ಎಥೆನಾಲ್ ಅನ್ನು ಪೆಟ್ರೋಲ್ ಜೊತೆಗೆ ಬೆರೆಸಿ ಬಳಸಿ ವಾಹನಕ್ಕೆ ಶಕ್ತಿ ನೀಡುತ್ತದೆ. ಪೂರ್ಣ ಎಥೆನಾಲ್ ನಿಂದಲೇ ವಾಹನಗಳು ಓಡಬಲ್ಲವಾದರೂ ಪಿಕಪ್ ಹಾಗೂ ಹೆಚ್ಚಿನ ಶಕ್ತಿಗಾಗಿ ಎಥೆನಾಲ್ ಅನ್ನು ಇಂಧನದ ಜೊತೆಗೆ ಬೆರೆಸಲಾಗುತ್ತದೆ. ಒಂದು ಲೀಟರ್ ಎಥೆನಾಲ್ ಬೆಲೆ ಈಗ 53 ರೂಪಾಯಿಗಳಿವೆ. ಫ್ಲೆಕ್ಸ್ ಎಂಜಿನ್ ಗಳು ಚಾಲ್ತಿಗೆ ಬಂದರೆ ಎಥೆನಾಲ್ ಮಿಶ್ರಿತ ಇಂಧನ ಸುಮಾರು 80-90 ರೂಪಾಯಿಗೆ ಅಥವಾ ಅದಕ್ಕಿಂತಲೂ ಕಡಿಮೆ ಬೆಲೆಗೆ ದೊರಕಲಿದೆ.