Bengaluru Traffic
ವಿಶ್ವದಲ್ಲೇ ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ನಗರಗಳಲ್ಲಿ ಬೆಂಗಳೂರು ಸಹ ಒಂದು. ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ರಾಜ್ಯ ಸರ್ಕಾರಗಳು ಸಾವಿರಾರು ಅಲ್ಲ ಲಕ್ಷಾಂತರ ಕೋಟಿ ಹಣ ಖರ್ಚು ಮಾಡಿದೆ, ಮಾಡುತ್ತಲೇ ಇದೆ. ನಗರದಲ್ಲಿ ಎಲ್ಲಿ ನೋಡಿದರು ಫ್ಲೈ ಓವರ್ ಗಳನ್ನು ನಿರ್ಮಿಸಿದೆ. ಮೆಟ್ರೋ ಕಾಮಗಾರಿ ಚಾಲ್ತಿಯಲ್ಲಿದೆ. ಸುರಂಗ ಮಾರ್ಗಗಳ ನಿರ್ಮಾಣ ಮಾಡಿದೆ. ಇದೆಲ್ಲದರ ಜೊತೆಗೆ ಈಗ ಇನ್ನೂ 11 ಫ್ಲೈ ಓವರ್ ಸೇತುವೆಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ.
ಕನಕಪುರ ರಸ್ತೆ ಮೈಸೂರು ರಸ್ತೆ, ಓಲ್ಡ್ ಮಡ್ರಾಸ್ ರೋಡ್, ಹೊಸೂರು ರಸ್ತೆಗಳು ಸದಾ ಸಂಚಾರ ದಟ್ಟಣೆಯಿಂದ ಕೂಡಿರುತ್ತವೆ. ಈ ರಸ್ತೆಗಳ ದಟ್ಟಣೆ ಕಡಿಮೆ ಮಾಡಲೆಂದು 11 ಫ್ಲೈ ಓವರ್ ನಿರ್ಮಾಣ ಮಾಡಲು ಸರ್ಕಾರ ಯೋಜನೆ ಹಾಕಿದೆ. 3000 ಕೋಟಿ ಅನುದಾನವನ್ನು ಇದಕ್ಕಾಗಿ ಮೀಸಲಿಟ್ಟಿದ್ದು, ಕಾರ್ಯಸಾಧು ವರದಿಯನ್ನು (ಡಿಪಿಆರ್) ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
https://samasthanews.com/indian-origin-businessman-8300-crore-fraud-shaken-america/
ಟ್ರಾಫಿಕ್ ಸುಗಮಗೊಳಿಸಲು ಈಗಾಗಲೇ 9 ವಿವಿಧ ರಸ್ತೆ, ಮೇಲ್ಸೇತುವೆ, ನೆಲದಡಿ ರಸ್ತೆ ಯೋಜನೆಗಳಿಗೆ ಅಸ್ತು ಎಂದಿದೆ. ಇದರ ಜೊತೆಗೆ ಈಗ 11 ಹೊಸ ಮೇಲ್ಸೇತುವೆಗಳ ನಿರ್ಮಾಣಕ್ಕೂ ಯೋಜನೆ ಹಾಕಲಾಗಿದೆ. ವಯುಟ್ ಫೀಲ್ಡ್ ಮತ್ತು ಹೆಬ್ಬಾಳವನ್ನು ಬೆಸೆಯುವ ಅಂಡರ್ಗ್ರೌಂಡ್ ರಸ್ತೆ ನಿರ್ಮಾಣಕ್ಕೆ ಈಗಾಗಲೆ ಒಪ್ಪಿಗೆ ದೊರೆತಿದ್ದು ಪ್ರತಿ ಕಿ.ಮೀ ರಸ್ತೆ ನಿರ್ಮಾಣಕ್ಕೆ ಸರ್ಕಾರವು 450 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿದೆ. ಎರಡು ಬಾರಿ ಈಗಾಗಲೇ ಟೆಂಡರ್ ಕರೆಯಲಾಗಿದ್ದು ಆದರೆ ಯಾವುದನ್ನೂ ಅಂತಿಮಗೊಳಿಸಲಾಗಿಲ್ಲ.
ಈ ಹಿಂದಿನ ಬಿಜೆಪಿ ಸರ್ಕಾರವು 12 ಕಾರೊಡಾರ್ ಯೋಜನೆಗಳಿಗೆ ಅಸ್ತು ಎಂದಿತ್ತು, ಕರ್ನಾಟಕ ರಸ್ತೆ ನಿರ್ಮಾಣ ನಿಗಮವು ಇವುಗಳ ನಿರ್ಮಾಣ ಜವಾಬ್ದಾರಿ ಹೊತ್ತಿತ್ತು. ಆದರೆ ಆ ಬಳಿಕ ಅದನ್ನು ರದ್ದುಗೊಳಿಸಿ, 117 ಕಿ.ಮೀ ರಸ್ತೆಯ 9 ಕಾರೊರಿಡಾರ್ ಯೋಜನೆಗೆ ಅಸ್ತು ಎನ್ನಲಾಯ್ತು. ಈ ಯೋಜನೆಗೆ 273 ಕೋಟಿ ಹಣವನ್ನು ಬಿಬಿಎಂಪಿ ಕೊಡಬೇಕೆನ್ನುವುದು ನಿಶ್ಚಯವಾಗಿತ್ತು. ಆದರೆ ಈ ಯೋಜನೆ ತಡವಾಗಿದ್ದು ಇನ್ನು ಪ್ರಾರಂಭಗೊಂಡಿಲ್ಲ.