Site icon Samastha News

whatsapp: ತಿಂಗಳಲ್ಲಿ 71 ಲಕ್ಷ ಭಾರತೀಯ ವಾಟ್ಸ್ ಆಪ್ ಖಾತೆಗಳು ಬಂದ್, ಮುಂದೆ ಇನ್ನಷ್ಟು ಖಾತೆ ರದ್ದಾಗಲಿದೆ

whatsapp

whatsapp

ವಿಶ್ವದ ನಂಬರ್ 1 ಸಂಪರ್ಕ ಆಪ್ ಆಗಿರುವ ವಾಟ್ಸ್ ಆಪ್ ಭಾರತದಲ್ಲಿ ಕೇವಲ ಒಂದೇ ತಿಂಗಳಲ್ಲಿ 71 ಲಕ್ಷ ವಾಟ್ಸ್ ಆಪ್ ಖಾತೆಗಳನ್ನು ರದ್ದು ಮಾಡಿದೆ. ಅಲ್ಲದೆ ಮುಂದಿನ ದಿನಗಳನ್ನೂ ಇನ್ನಷ್ಟು ವಾಟ್ಸ್ ಆಪ್ ಖಾತೆಗಳನ್ನು ರದ್ದು ಮಾಡುವುದಾಗಿ ಹೇಳಿದೆ. ವಾಟ್ಸ್ ಆಪ್ ವಿಧಿಸೊರುವ ನಿಯಮಗಳನ್ನು ಪಾಲಿಸದ ಕಾರಣ 71 ಲಕ್ಷ ಖಾತೆಗಳನ್ನು ರದ್ದು ಮಾಡಲಾಗಿದೆ ಎಂದು ವಾಟ್ಸ್ ಆಪ್ ಹೇಳಿದೆ.

ಏಪ್ರಿಲ್ 1 ರಿಂದ ಏಪ್ರಿಲ್ 31 ರ ವರೆಗೆ 71 ಲಕ್ಷ ಭಾರತೀಯ ವಾಟ್ಸ್ ಆಪ್ ಖಾತೆಗಳು ರದ್ದಾಗಿವೆ. ವಾಟ್ಸ್ ಆಪ್ ಎಐ ತಂತ್ರಜ್ಞಾನದ ಮೂಲಕ ನಿಯಮಗಳನ್ನು ಪಾಲಿಸದ ಅಥವಾ ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಸಲಾಗುವ ಖಾತೆಗಳನ್ನು ರದ್ದು ಮಾಡಿದೆ.

ಸ್ಪ್ಯಾಮ್ ಮಾಡುವ, ಮೋಸ ಮಾಡಲು ಬಳಕೆಯಾಗುವ ತಪ್ಪು ಸಂದೇಶಗಳನ್ನು ಪಸರಿಸಲು ಸಹಾಯ ಮಾಡುವ, ಹಿಂಸಾತ್ಮಕ ಸಂದೇಶಗಳನ್ನು ಪಸರಿಸಲು ಸಹಾಯ ಮಾಡುವ ಖಾತೆಗಳನ್ನು ವಾಟ್ಸ್ ಆಪ್ ಬಂದ್ ಮಾಡಿದೆ. ಇದಲ್ಲದೆ ಸ್ಥಳೀಯ ಕಾನೂನುಗಳನ್ನು ಉಲ್ಲಂಘಿಸುವ ವಾಟ್ಸ್ ಆಪ್ ಖಾತೆಗಳು, ಬಳಕೆದಾರರು ಪದೇ ಪದೇ ರಿಪೋರ್ಟ್ ಮಾಡಿದ ಖಾತೆಗಳನ್ನು ವಾಟ್ಸ್ ಆಪ್ ಬ್ಯಾನ್ ಮಾಡಿದೆ.

Allu Arjun: ಅಲ್ಲು ಅರ್ಜುನ್- ಸುಕುಮಾರ್ ಮಧ್ಯೆ ಜಗಳ, ನಿಜಾಂಶವೇನು?

ಫೇಸ್ ಬುಕ್ ನಲ್ಲಿಯೂ ಸಹ ಇದೇ ರೀತಿಯ ಕಾರ್ಯಾಚರಣೆ ನಡೆಯುತ್ತಿದೆ. ಫೇಸ್ ಬುಕ್ ನಲ್ಲಿಯೂ ಸಹ ನಕಲಿ ಖಾತೆಗಳು,  ಹಿಂಸೆಗೆ ಪ್ರಚೊದನೆ ನೀಡುವ ಖಾತೆಗಳು, ದ್ವೇಷ ಹಬ್ಬಿಸಲು ಬಳಕೆಯಾಗುವ ಖಾತೆಗಳನ್ನು ಬ್ಯಾನ್ ಮಾಡಲಾಗುತ್ತಿದೆ. ವಾಟ್ಸ್ ಆಪ್ ಹಾಗೂ ಫೇಸ್ ಬುಕ್ ನ ಮಾಲೀಕತ್ವ ಹೊಂದಿರುವ ಮೆಟಾ ಸಂಸ್ಥೆ ಸುಳ್ಳು ಸುದ್ದಿ ಹರಡುವ, ಹಿಂಸೆ, ದ್ವೇಷಕ್ಕೆ ಪ್ರಚೋದನೆ ನೀಡುವ ಖಾತೆಗಳ ವಿರುದ್ಧ ಗಂಭಿಒರ ಕ್ರಮಕ್ಕೆ ಮುಂದಾಗಿದೆ.

Exit mobile version