Uttar Pradesh
ಬ್ಯಾಂಕ್ ಖಾತೆಯಲ್ಲಿ ಇರುವ ಹಣವನ್ನು ಸಹ ಆ ಫೀಸ್, ಈ ಫೀಸ್ ಎಂದು ಬ್ಯಾಂಕ್ ನವರು ಖಾಲಿ ಮಾಡುತ್ತಾರೆ. ಇಲ್ಲವಾದರೆ ಯುಪಿಐ ಬಂದ ಬಳಿಕ ಬಳಕೆದಾರರೆ ಸಣ್ಣ ಪುಟ್ಟದ್ದಕ್ಕೆಲ್ಲ ಹಣ ತೆತ್ತು ಖಾಲಿ ಮಾಡುತ್ತಿದ್ದಾರೆ. ಆದರೆ ಉತ್ತರ ಪ್ರದೇಶದ ಸಾಮಾನ್ಯ ವ್ಯಕ್ತಿಯೊಬ್ಬನ ಖಾತೆಗೆ ಒಮ್ಮೆಲೆ ಬರೋಬ್ಬರಿ 9900 ಕೋಟಿ ರೂಪಾಯಿಗಳು ಬಂದು ಬಿದ್ದಿದೆ. ತನ್ನ ಖಾತೆಗೆ ಇಷ್ಟು ಭಾರಿ ಮೊತ್ತದ ಹಣ ಬಂದಿದ್ದು ನೋಡಿ ಪಾಪ ಆ ವ್ಯಕ್ತಿಗೆ ಹೃದಯವೇ ಬಾಯಿಗೆ ಬಂದಂತಾಗಿದೆ.
ಉತ್ತರ ಪ್ರದೇಶದ ಬದೋನಿ ಜಿಲ್ಲೆಯ ಭಾನು ಪ್ರಕಾಶ್ ಎಂಬಾತ ಬರೋಡಾ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರು. ಅವರ ಖಾತೆಯಲ್ಲಿ ಒಂದು ರೂಪಾಯಿ ಸಹ ಹಣವಿರಲಿಲ್ಲ. ಆದರೆ ಒಮ್ಮೆಗೆ 9900 ಕೋಟಿ ರೂಪಾಯಿ ಖಾತೆಗೆ ಜಮೆ ಆಗಿಬಿಟ್ಟಿದೆ. ಇದನ್ನು ನೋಡಿದ ಭಾನು ಪ್ರಕಾಶ್ ಹೌಹಾರಿಬಿಟ್ಟಿದ್ದಾರೆ. ಒಂದು ದಿನ ಸುಮ್ಮನಿದ್ದ ಭಾನು ಪ್ರಕಾಶ್ ಆ ನಂತರ ಕೆಲವರ ಸಲಹೆ ಮೇರೆಗೆ ಬ್ಯಾಂಕ್ ಗೆ ಹೋಗಿ ಮಾಹಿತಿ ತಿಳಿಸಿದ್ದಾರೆ. ಆಗ ಎಚ್ಚೆತ್ತುಕೊಂಡ ಬ್ಯಾಂಕ್ ಸಿಬ್ಬಂದಿ ತಪ್ಪು ಎಲ್ಲಿ ಆಗಿದೆ ಎಂದು ಗಮನಿಸಿ ಸರಿಪಡಿಸಿದ್ದಾರೆ.
ಘಟನೆ ಬಗ್ಗೆ ವಿವರ ನೀಡಿರುವ ವಲಯ ಮ್ಯಾನೇಜರ್, ಭಾನು ಪ್ರಕಾಶ್ ಅವರದ್ದು ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಖಾತೆ ಆಗಿತ್ತು. ಅಲ್ಲದೆ ಆ ಖಾತೆಯಲ್ಲಿ ಯಾವುದೇ ವ್ಯವಹಾರ ನಡೆಯದ ಕಾರಣ ಅದು ನಾನ್ ಪರ್ಫಾರ್ಮಿಂಗ್ ಅಸೆಟ್ ಎಂದು ಗುರುತಿಸಲಾಗಿತ್ತು. ನಾನ್ ಪರ್ಫಾರ್ಮಿಂಗ್ ಅಸೆಟ್ ಅನ್ನು ಗುರುತಿಸುವ ಸಾಫ್ಟ್್ ವೇರ್್ನಲ್ಲಿ ಸಮಸ್ಯೆ ಆದ ಕಾರಣ ಆ ಖಾತೆಗೆ 9900 ಕೋಟಿ ರೂಪಾಯಿ ಹಣ ಜಮೆ ಆಗಿಬಿಟ್ಟಿತ್ತು. ಈಗ ಸಮಸ್ಯೆಯನ್ನು ಸರಿ ಪಡಿಸಲಾಗಿದ್ದು, ಜಮೆಯಾಗಿದ್ದ ಹಣವನ್ನು ಹಿಂಪಡೆಯಲಾಗಿದೆ. ಭಾನು ಅವರ ಖಾತೆಯನ್ನು ಮೊದಲಿನಂತೆ ಮಾಡಲಾಗಿದೆ ಎಂದಿದ್ದಾರೆ.
ಈ ರೋಗ ಲಕ್ಷಣಗಳು ಕಂಡು ಬಂದರೆ ನಿಮಗೆ ವಿಟಮಿನ್ ಡಿ ಕೊರತೆ ಇದೆ ಎಂದರ್ಥ
ಏನೇ ಆಗಲಿ, ಖಾತೆಯಲ್ಲಿ ಒಂದು ರೂಪಾಯಿ ಸಹ ಹಣ ಇಲ್ಲದಿದ್ದ ಭಾನು ಪ್ರಕಾಶ್, ಕನಿಷ್ಟ ಒಂದು ದಿನಕ್ಕಾದಲೂ ಸಾವಿರಾರು ಕೋಟಿಗಳ ಒಡೆಯ ಎನಿಸಿಕೊಂಡ. ಮಾತ್ರವಲ್ಲ ಒಂದು ದಿನದ ಮಟ್ಟಿಗೆ ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಹೀಗೆ ಬಂದು ಹಾಗೆ ಹೋಗಿಬಿಟ್ಟ.