Solar Energy
ಭಾರತ ವಿಶ್ವದ ಶಕ್ತಿಯುತ ರಾಷ್ಟ್ರವಾಗಿ ಬೆಳೆಯುವ ಹಾದಿಯಲ್ಲಿದೆ. ಅದರಲ್ಲೂ ಶಕ್ತಿ ಉತ್ಪಾದನಾ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವ ಹಾದಿಯಲ್ಲಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಹಾಗೂ ಕೆಲವು ರಾಜ್ಯ ಸರ್ಕಾರಗಳು ಸೌರ ಶಕ್ತಿ ಉತ್ಪಾದನೆಗೆ ಒತ್ತು ನೀಡುತ್ತಿವೆ. ಇದೀಗ ಭಾರತವು ಸೌರ ಶಕ್ತಿ ಉತ್ಪಾದನೆಯಲ್ಲಿ ಪ್ರಮುಖ ಹೆಜ್ಜೆ ಇರಿಸಿದ್ದು, ತಾಂತ್ರಿಕವಾಗಿ ಮುಂದುವರೆದ ರಾಷ್ಟ್ರವಾಗಿರುವ ಜಪಾನ್ ಅನ್ನು ಹಿಂದಿಕ್ಕಿದೆ.
ಗ್ಲೋಬಲ್ ಎಲೆಕ್ಟ್ರಿಸಿಟಿ ರಿವ್ಯೂ 2024 ರ ವರದಿ ಪ್ರಕಟವಾಗಿದ್ದು, ಭಾರತವು ಸೌರ ಶಕ್ತಿ ಉತ್ಪಾದನೆಯಲ್ಲಿ ಜಪಾನ್ ಅನ್ನು ಹಿಂದಿಕ್ಕಿ ಮುಂದೆ ಸಾಗಿದೆ. ಅತಿ ಹೆಚ್ಚು ಸೌರ ಶಕ್ತಿ ಉತ್ಪಾದಿಸುವ ವಿಶ್ವದ ಮೂರನೇ ರಾಷ್ಟ್ರವಾಗಿದೆ ಭಾರತ. ಗ್ಲೋಬಲ್ ಎಲೆಕ್ಟ್ರಿಸಿಟಿ ರಿವ್ಯೂ 2024 ರ ವರದಿಯಲ್ಲಿ 80 ದೇಶಗಳ ಪಟ್ಟಿ ಮಾಡಲಾಗಿದ್ದು, ಈ 80 ದೇಶಗಳು ವಿಶ್ವದಲ್ಲಿ ಉತಗಪಾದನೆಯಾಗುವ ಒಟ್ಟು ಸೌರ ಶಕ್ತಿಯ 92% ಸೌರ ಶಕ್ತಿಯನ್ನು ಉತ್ಪಾದನೆ ಮಾಡುತ್ತಿವೆ. ಪ್ರಸಕ್ತ ವರದಿಯು 215 ದೇಶಗಳ ಸೌರ ಶಕ್ತಿ ಉತ್ಪಾದನಾ ಸಾಮರ್ಥ್ಯದ ಮಾಹಿತಿಯನ್ನು ಒಳಗೊಂಡಿದೆ.
Bengaluru: ತಿಂಗಳಿಗೆ 5.4 ಕೋಟಿ ಗಳಿಸಿದ ಬೆಂಗಳೂರು ಕ್ಯಾಬ್ ಡ್ರೈವರ್ಗಳು
ಪ್ರಸ್ತುತ ಸೌರ ಶಕ್ತಿಯ ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತವು 2015 ರಲ್ಲಿ 9 ನೇ ಸ್ಥಾನದಲ್ಲಿತ್ತು. 2023 ರಲ್ಲಿ ಭಾರತವು, ವಿಶ್ವದೆಲ್ಲೆಡೆ ಉತ್ಪಾದಿಸಲಾದ ಸೌರ ಶಕ್ತಿಯ ಶೇ 5.8 ರಷ್ಟನ್ನು ಉತ್ಪಾದಿಸಿದೆ. ಅತಿ ಹೆಚ್ಚು ಸೌರ ಶಕ್ತಿ ಉತ್ಪಾದನೆ ಮಾಡು ದೇಶವಾಗಿ ಚೀನಾ ಮೊದಲ ಸ್ಥಾನದಲ್ಲಿದೆ. ಅಮೆರಿಕ ಎರಡನೇ ಸ್ಥಾನದಲ್ಲಿದೆ. ಬ್ರೆಜಿಲ್ ಸಹ ದೊಡ್ಡ ಪ್ರಮಾಣದ ಸೌರ ಶಕ್ತಿಯನ್ನು ಉತ್ಪಾದಿಸುತ್ತಿದೆ. ಮುಂದಿನ ದಿನಗಳಲ್ಲಿ ಭಾರತವು ಅಮೆರಿಕವನ್ನು ಹಿಂದಿಕ್ಕುವ ಸಾಧ್ಯತೆ ಇದೆ.