Temple Priest: ದೇವಸ್ಥಾನದಲ್ಲೇ ಕಿತ್ತಾಡಿಕೊಂಡ ಅರ್ಚಕರು: ವಿಡಿಯೋ ವೈರಲ್

0
166
Temple Priest

Temple Priest

ಜನ, ಶಾಂತಿ, ನೆಮ್ಮದಿ ಅರಸಿ ದೇವಾಲಯಕ್ಕೆ ಬರುತ್ತಾರೆ, ಆದರೆ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ದೇವಾಲಯದಲ್ಲಿಯೇ ರಣರಂಗವನ್ನು ಸೃಷ್ಟಿಸಿದ್ದಾರೆ ಅಲ್ಲಿನ ಅರ್ಚಕರು. ಆಗಿರುವುದಿಷ್ಟು ಭಕ್ತರಿಗೆ ತೀರ್ಥ ಕೊಡುವ ಹಕ್ಕಿಗಾಗಿ ಅರ್ಚಕರು ಪರಸ್ಪರ ಜಗಳ ಮಾಡಿಕೊಂಡಿದ್ದು. ದೇವಸ್ಥಾನದಲ್ಲಿಯೇ ವಾಗ್ವಾದ ನಡೆಸಿ, ಪ್ರತಿಭಟನೆಯನ್ನೂ ಮಾಡಿದ್ದಾರೆ. ಘಟನೆಯ ವಿಡಿಯೋ, ಚಿತ್ರಗಳು ಇದೀಗ ವೈರಲ್ ಆಗಿದೆ.

ಉತ್ತರ ಕನ್ನಡ ಜಿಲ್ಲೆ, ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ನಂದಿ ಮಂಟಪದಲ್ಲಿ ತೀರ್ಥ ನೀಡುವ ವಿಷಯಕ್ಕೆ ಎರಡು ಮನೆತನಗಳ ಅರ್ಚಕರ ನಡುವೆ ಗಲಾಟೆ ನಡೆದಿದ್ದು, ಮಧ್ಯಸ್ಥಿಕೆ ವಹಿಸಿದ ಆಯುಕ್ತೆ ಕಲ್ಯಾಣಿ ಕಾಂಬ್ಳೆ ಏಳು ದಿನಗಳ ವರೆಗೆ ಯಥಾಸ್ಥಿತಿ ಮುಂದುವರೆಸುವಂತೆ ಸೂಚನೆ ನೀಡಿದ್ದಾರೆ.

Bengaluru Police: ರಸ್ತೆಯಲ್ಲಿ ಜಗಳವಾದಾಗ ಏನು ಮಾಡಬೇಕು? ಬೆಂಗಳೂರು ಪೊಲೀಸರು ನೀಡಿದ್ದಾರೆ ಸೂಚನೆ

ಆಗಿರುವುದಿಷ್ಟು, ಮಹಾಬಲೇಶ್ವರ ದೇವಾಲಯದ ನಂದಿ ಮಂಟಪದಲ್ಲಿ ತೀರ್ಥ ನೀಡುವ ಹಕ್ಕಿಗಾಗಿ ಜಂಬೆ ಮನೆತನದ ಅರ್ಚಕರು ಹಾಗೂ ಗೋಪಿ ಮನೆತನದ ಅರ್ಚಕರ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು. ಎರಡೂ ಮನೆತನದವರು ತೀರ್ಥ ನೀಡುವ ಹಕ್ಕು ತಮ್ಮದೆಂದು ಪರಸ್ಪರ ಗಲಾಟೆಗಿಳಿದಿದ್ದರು. ಇದೇ ವಿಷಯವಾಗಿ ಗೋಪಿ ಮನೆತನದ ಅರ್ಚಕರು ದೇವಸ್ಥಾನದಲ್ಲೇ ಪ್ರತಿಭಟನೆ ಸಹ ನಡೆಸಿದರು. ಆಯುಕ್ತರ ಆದೇಶದಂತೆ ಈಗ ಜಂಬೆ ಮನೆತನದವರೇ ತೀರ್ಥ ನೀಡುತ್ತಿದ್ದಾರೆ. ಈ ಹಿಂದೆ ಕೂಡ ಇದೇ ದೇವಾಲಯದ ತೀರ್ಥ ನೀಡುವ ಹಕ್ಕು ಹಾಗೂ ಆರತಿ ತಟ್ಟೆ ಕಾಸಿನ ವಿಷಯವಾಗಿ ಅರ್ಚಕರು ನ್ಯಾಯಾಲಯದ ಮೆಟ್ಟಿಲೇರಿದ್ದರು.

LEAVE A REPLY

Please enter your comment!
Please enter your name here