Bengaluru
ವಿಶ್ವದಲ್ಲಿಯೇ ಅತಿ ಹೆಚ್ಚು ಶ್ರೀಮಂತರಿರುವ ನಗರಗಳ ಪಟ್ಟಿಯನ್ನು ಹೆನ್ಲೆ ಆಂಡ್ ಪಾರ್ಟರ್ನ್ಸ್ ಸಂಸ್ಥೆ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಬೆಂಗಳೂರು ಸಹ ಸ್ಥಾನ ಪಡೆದುಕೊಂಡಿದೆ. ವಿಶೇಷವೆಂದರೆ ಮುಂಬೈ ಗಿಂತಲೂ ಬೆಂಗಳೂರು ವೇಗವಾಗಿ ಬೆಳವಣಿಗೆ ಆಗುತ್ತಿದೆ ಎಂದು ವರದಿ ಹೇಳಿದೆ.
ವರದಿಯ ಪ್ರಕಾರ ಬೆಂಗಳೂರಿನಲ್ಲಿ 13,200 ಮಂದಿ ಶ್ರೀಮಂತರು (ಅತಿ ಹೆಚ್ಚು ಆಸ್ತಿ ಮೌಲ್ಯ) ಇದ್ದಾರೆ. ಅಲ್ಲದೆ ಮಿಲಿಯನೇರ್ ಗಳ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿದೆ ಬೆಂಗಳೂರಿನಲ್ಲಿ. ವರದಿ ಪ್ರಕಾರ ಬೆಂಗಳೂರಿನಲ್ಲಿ ಕನಿಷ್ಟ 10 ಲಕ್ಷಕ್ಕಿಂತಲೂ ಹೆಚ್ಚು ಮೌಲ್ಯ ಹೊಂದಿರುವ 13,200 ಮಂದಿ ಇದ್ದಾರೆ.
ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಅಮೆರಿಕದ ನ್ಯೂಯಾರ್ಕ್ ನಗರ. ಇಲ್ಲಿ 3.50 ಲಕ್ಷ ಮಿಲಿಯನೇರ್ ಗಳಿದ್ದಾರೆ. ಈ ನಗರದ ಸಂಪತ್ತು ಬರೋಬ್ಬರಿ 3 ಟ್ರಿಲಿಯನ್ ಡಾಲರ್. ಅಂದರೆ 250 ಲಕ್ಷ ಕೋಟಿಗೂ ಹೆಚ್ಚು. ಭಾರತದ ಒಟ್ಟು ಎಕಾನಮಿಯೇ 3.7 ಟ್ರಿಲಿಯನ್. ನ್ಯೂಯಾರ್ಕ್ ನಗರ ಒಂದರ ಎಕಾನಮಿಯೇ 3 ಟ್ರಿಲಿಯನ್.
ಈ ಪಟ್ಟಿಯಲ್ಲಿ ಅಮೆರಕದ ದಿ ಬೇ ಏರಿಯಾ ಟೆಕ್ ಹಬ್, ಲಾಸ್ ಏಂಜಲ್ಸ್ ಗಳು ಟಾಪ್ ಹತ್ತರ ಒಳಗಿವೆ. ನೆರೆಯ ಚೀನಾ ದೇಶದ ಮೂರು ನಗರಗಳು ಟಾಪ್ ಹತ್ತರ ಒಳಗಿದೆ. ಟೋಕಿಯೊ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. 9 ನೇ ಸ್ಥಾನದಲ್ಲಿ ಹಾಂಗ್ ಕಾಂಗ್ ಇದೆ. 10 ನೇ ಸ್ಥಾನದಲ್ಲಿ ಚೀನಾದ ರಾಜಧಾನಿ ಬೀಜಿಂಗ್ ಇದೆ.