Health: ಪ್ರೋಟೀನ್ ಪೌಡರ್ ಸೇವನೆ ಅಪಾಯಕಾರಿ, ವೈದ್ಯಕೀಯ ಸಂಶೋಧನಾ ಸಂಸ್ಥೆ ಎಚ್ಚರಿಕೆ

0
198
Health

Health

ಯುವಕರಲ್ಲಿ ಫಿಟ್ ನೆಸ್ ಕುರಿತು ಕಾಳಜಿ ಹೆಚ್ಚಾಗಿದೆ. ಅದರಲ್ಲೂ ಜಿಮ್ ಮಾಡಿ ಕಟ್ಟುಮಸ್ತಾದ ದೇಹ ಪಡೆಯುವ, ಸಿಕ್ಸ್ ಪ್ಯಾಕ್ ಹೊಂದುವ ಆಸೆಯಿಂದ ಕೋಟ್ಯಂತರ ಯುವಕರು ಜಿಮ್ ಗಳಿಗೆ ಹೋಗುತ್ತಿದ್ದಾರೆ ಕಸರತ್ತು ಮಾಡುತ್ತಿದ್ದಾರೆ. ಜಿಮ್ ಮಾಡಿ ಬೇಗನೆ ದೇಹದಾರ್ಡ್ಯ ಪಡೆಯಲು ಯುವಕರು ಪ್ರೊಟೀನ್ ಪೌಡರ್ ಮೊರೆ ಹೋಗುತ್ತಿದ್ದಾರೆ. ಜಿಮ್ ಟ್ರೈನರ್ ಗಳು, ಸೆಲೆಬ್ರಿಟಿ ಜಿಮ್ಮರ್ ಗಳು ಸಹ ಪ್ರೊಟೀಮ್ ಪೌಡರ್ ಅನ್ನು ಸೇವಿಸುವಂತೆ ಪ್ರಚಾರ ಮಾಡುತ್ತಿದ್ದಾರೆ. ಆದರೆ ಇದೀಗ ದೇಶದ ಪ್ರಮುಖ ವೈದ್ಯಕೀಯ ಸಂಶೋಧನಾ ಸಂಸ್ಥೆಯೊಂದು ಪ್ರೊಟೀನ್ ಪೌಡರ್ ಸೇವನೆ ಹಾನಿಕಾರಕ ಎಂದಿದೆ.

ಭಾರತದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯಾದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಪ್ರೊಟೀನ್ ಪೌಡರ್ ಸೇವನೆಯಿಂದ ದೇಹದ ಮಾಸ್ ಹೆಚ್ಚುತ್ತದೆಯಾದರೂ ಅದರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ ಎಂದಿದೆ. ಈ ಬಗ್ಗೆ ಅಧ್ಯಯನ‌ ವರದಿಯನ್ನು ಪ್ರಕಟಿಸಿದೆ.

ಮೊಟ್ಟೆ, ಹಾಲು, ಸೋಯಾಬೀನ್, ಒಣ ಹಣ್ಣುಗಳು ಇನ್ನಿತರೆಗಳಿಂದ ಪ್ರೊಟೀನ್ ಪೌಡರ್ ಮಾಡಲಾಗಿರುತ್ತದೆಯಾದರೂ, ಅದರಲ್ಲಿ ಸಕ್ಕರೆ ಅಂಶ ಹೆಚ್ಚಿರುತ್ತದೆ‌. ಅಲ್ಲದೆ ನಾನ್ ಕ್ಯಾಲರಿಕ್ ಸ್ವೀಟರ್ನ್, ಕೃತಕ ಫ್ಲೇವರ್ ಗಳು ಅಡಕವಾಗಿರುತ್ತವೆ. ಇವುಗಳನ್ನು ಪ್ರತಿದಿನ ಸೇವಿಸಿದರೆ ಆರೋಗ್ಯಕ್ಕೆ ಸಮಸ್ಯೆ ಆಗಲಿದೆ ಎಂದಿದ್ದಾರೆ ಸಂಶೋಧಕರು.

Royal Enfield: ರಾಯಲ್ ಎನ್​ಫೀಲ್ಡ್ ಗೆ ಠಕ್ಕರ್ ಕೊಡುತ್ತಿದೆ ಈ ಬೈಕ್: ಅದೇ ಬೆಲೆ, ಹೆಚ್ಚು ಪವರ್

ಪ್ರೊಟೀನ್ ಪೌಡರ್ ಗಳು ಅತಿಯಾದ ಬ್ರಾಂಚ್ಡ್ ಚೈನ್ ಅಮೈನೋ ಆಸಿಡ್ಸ್ (BCAA) ಹೊಂದಿರುತ್ತವೆ ಇವುಗಳ ಅತಿಯಾದ ಸೇವನೆಯಿಂದ ನಾನ್ ಕಮ್ಯೂನಿಕೇಬಲ್ ಡಿಸೀಸ್ (NCD) ಬರುತ್ತದೆ. ಹಾಗಾಗಿ ಈ ಪ್ರೊಟೀನ್ ಪೌಡರ್ ಗಳ ಅತಿಯಾದ ಸೇವನೆ ಸರಿಯಲ್ಲ ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ.

ಅತಿಯಾದ ಪ್ರೊಟೀನ್ ಸೇವನೆ ಅದರಲ್ಲಿಯೂ ಪೌಡರ್ ಮಾದರಿಯಲ್ಲಿ ಪ್ರೊಟೀನ್ ಸೇವನೆ ಸೂಕ್ತವಲ್ಲ. ಒಂದು ಕೆಜಿಗೆ 1.6 ಗ್ರಾಂ ಮಾತ್ರವೇ ಒಂದು ದಿನಕ್ಕೆ ಪ್ರೊಟೀನ್ ಸೇವಿಸಬೇಕು. ಒಂದೊಮ್ಮೆ ವ್ಯಕ್ತಿ 100 ಕೆಜಿ ಇದ್ದರೆ ಆತ ದಿನಕ್ಕೆ  100 ಗ್ರಾಂಗಿಂತ ಸ್ವಲ್ಪವೇ ಹೆಚ್ಚು ಪ್ರೊಟೀನ್ ಸೇವನೆ ಮಾಡಿದರೂ ಸಾಕಾಗುತ್ತದೆ ಎಂದಿದ್ದಾರೆ ವೈದ್ಯಕೀಯ ಸಂಶೋಧಕರು. ಅತಿಯಾಗಿ ಪ್ರೊಟೀನ್ ಸೇವನೆ ಮಾಡಿದರೆ ಆರೋಗ್ಯದಲ್ಲಿ ವ್ಯತ್ಯಯವಾಗುತ್ತದೆ ಎಂದಿದ್ದಾರೆ ತಜ್ಙರು.

LEAVE A REPLY

Please enter your comment!
Please enter your name here