IPL: ಗೆಲ್ಲದಿದ್ದರೂ ಅತಿ ಹೆಚ್ಚು ಲಾಭ ಗಳಿಸುವ ತಂಡ ಆರ್​ಸಿಬಿ, ತಂಡದ ಮೌಲ್ಯ ಎಷ್ಟು ಗೊತ್ತೆ?

0
205
IPL

IPL

ಮುಂಬೈ ಐದು ಬಾರಿ ಐಪಿಎಲ್ ಗೆದ್ದಿದೆ, ಚೆನ್ನೈ ಸೂಪರ್ ಕಿಂಗ್ಸ್ ಸಹ ಐದು ಬಾರಿ ಐಪಿಎಲ್ ಗೆದ್ದಿದೆ. ಕೆಕೆಆರ್ ಎರಡು ಬಾರಿ ಗೆದ್ದಿದೆ. ಇನ್ನೂ ಕೆಲವು ತಂಡಗಳು ಒಮ್ಮೊಮ್ಮೆ ಐಪಿಎಲ್ ಗೆದ್ದಿವೆ. ಆದರೆ ಆರ್​ಸಿಬಿ ಈವರೆಗೆ ಒಂದು ಬಾರಿಯೂ ಸಹ ಐಪಿಎಲ್ ಗೆದ್ದಿಲ್ಲ. ಪ್ರತಿ ಬಾರಿಯೂ ಆರ್​ಸಿಬಿ ಅಭಿಮಾನಿಗಳು, ‘ಈ ಸಲ ಕಪ್ ನಮ್ದೆ’ ಎನ್ನುತ್ತಲೇ ಇರುತ್ತಾರೆ ಆದರೆ ಈವರೆಗೆ ಒಂದು ಬಾರಿಯೂ ಗೆದ್ದಿಲ್ಲ. ಕಪ್ ಗೆದ್ದಿಲ್ಲವಾದರೂ ಹೆಚ್ಚು ಹಣ ಮಾಡಿರುವುದು ಆರ್​ಸಿಬಿ ತಂಡವೇ! ಸತತವಾಗಿ ಸೋತರೂ ಸಹ ಆರ್​ಸಿಬಿಯ ನೆಟ್​ ವರ್ತ್​ ಹೆಚ್ಚುತ್ತಲೇ ಹೋಗುತ್ತಿದೆ.

ಐಪಿಎಲ್​ನ ಇತರೆ ತಂಡಗಳಿಗೆ ಹೋಲಿಸಿದರೆ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆರ್​ಸಿಬಿ, ಐಪಿಎಲ್​ನ ಅತಿ ಹೆಚ್ಚು ಶ್ರೀಮಂತ ತಂಡ ಮಾತ್ರವಲ್ಲ ಅತಿ ಹೆಚ್ಚು ಲಾಭ ಗಳಿಸುತ್ತಿರುವ ತಂಡವೂ ಸಹ. ಆರ್​ಸಿಬಿಯ ಮೌಲ್ಯ 5.8 ಲಕ್ಷ ಕೋಟಿ ಮೌಲ್ಯವನ್ನು ಹೊಂದಿದೆ. ಮುಂಬೈ ಹಾಗೂ ಸಿಎಸ್​ಕೆ ತಂಡಗಳ ಮೌಲ್ಯ ಆರ್​ಸಿಬಿಗಿಂತಲೂ ಸ್ವಲ್ಪವಷ್ಟೆ ಹೆಚ್ಚಿದೆ.

ಆರ್​ಸಿಬಿ ತಂಡದ ಸೋಷಿಯಲ್ ಮೀಡಿಯಾ ಎಂಗೇಜ್​ಮೆಂಟ್​ಗೆ ಸರಿ ಸಾಟಿಯೇ ಇಲ್ಲ. ಅಭಿಮಾನಿಗಳೊಟ್ಟಿಗೆ ಆಪ್ತ ಬಂಧ ಹೊಂದಿದೆ ಆರ್​ಸಿಬಿ. ಅಂತರಾಷ್ಟ್ರೀಯ ಫುಟ್​ಬಾಲ್ ತಂಡಗಳಿಗಿರುವಷ್ಟೆ ಅಭಿಮಾನಿಗಳು ಆರ್​ಸಿಬಿಗೂ ಇದೆ. ಆರ್​ಸಿಬಿಯ ಪ್ರಾಕ್ಟಿಸ್ ನೋಡಲು ಸಹ ಜನ ಟಿಕೆಟ್ ಖರೀದಿಸಿ ಮೈದಾನಕ್ಕೆ ಬರುತ್ತಾರೆ. ಚಿನ್ನಸ್ವಾಮಿಯಲ್ಲಿ ನಡೆಯುವ ಆರ್​ಸಿಬಿ ಅನ್​ಬಾಕ್ಸಿಂಗ್​ ಇವೆಂಟ್​ಗಳು ಸಹ ಹೌಸ್​ಫುಲ್ ಆಗುತ್ತವೆ. ಆನ್​ಲೈನ್​ನಲ್ಲಿ ಸಹ ಹಣ ಕೊಟ್ಟು ನೋಡುತ್ತಾರೆ ಅಭಿಮಾನಿಗಳು. ಅಂದಹಾಗೆ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಸಹ ಆಟಗಾರರಿಗೆ ಅತಿ ಹೆಚ್ಚು ಹಣ ಕೊಟ್ಟಿರುವ ತಂಡವೆಂದರೆ ಅದು ಆರ್​ಸಿಬಿ. ಸುಮಾರು 710 ಕೋಟಿ ಹಣವನ್ನು ಆಟಗಾರರಿಗೆ ಹರಾಜಿನಲ್ಲಿ ನೀಡಿದೆ ಆರ್​ಸಿಬಿ.

Hotel: ಊಟಕ್ಕೆ ಉಪ್ಪಿನಕಾಯಿ ಕೊಡುವುದು ಮರೆತಿದ್ದಕ್ಕೆ 35 ಸಾವಿರ ನಷ್ಟ!

ಇನ್ನು ಆರ್​ಸಿಬಿ ಪಂದ್ಯಗಳಿದ್ದಾಗಲಂತೂ ಮೈದಾನ ಖಾಲಿ ಇರುವುದೇ ಇಲ್ಲ. ಪಂದ್ಯ ಬೆಂಗಳೂರಿನಲ್ಲೇ ಇರಲಿ ಅಥವಾ ಬೇರೆಡೆಯೇ ಇರಲಿ ಮೈದಾನಗಳು ಸದಾ ತುಂಬಿರುತ್ತವೆ. ವಿರಾಟ್ ಕೊಹ್ಲಿ ಸೇರಿದಂತೆ ಭಾರಿ ಬ್ರ್ಯಾಂಡ್ ಮೌಲ್ಯ ಹೊಂದಿರುವ ಆಟಗಾರರು ತಂಡದಲ್ಲಿರುವ ಕಾರಣ ಸಹಜವಾಗಿಯೇ ತಂಡದ ಮೌಲ್ಯ ಗಗನ ಮುಟ್ಟಿದೆ. ಒಂದೊಮ್ಮೆ ಒಂದು ಬಾರಿ ಕಪ್ ಗೆದ್ದರೆಂದರೆ ಆರ್​ಸಿಬಿ ಮೌಲ್ಯ ಗಗನವನ್ನು ಛೇದಿಸಿ ಮೇಲೆ ಹೋಗಿಬಿಡುತ್ತದೆ.

LEAVE A REPLY

Please enter your comment!
Please enter your name here