Bengaluru
ಕ್ಯಾಬ್ ಚಾಲಕರು ಬೆಂಗಳೂರಿನ ಅವಿಭಾಜ್ಯ ಅಂಗ. ಕ್ಯಾಬ್ ಚಾಲಕರು ಬೆಂಗಳೂರು ಸಾರಿಗೆ ವ್ಯವಸ್ಥೆಯ ಪ್ರಮುಖ ಭಾಗ. ಆದರೆ ಓಲಾ, ಊಬರ್ ಬಂದ ಬಳಿಕ ದಿನವಹಿ ಆದಾಯದಲ್ಲಿ ಕುಸಿತವಾಗಿದೆ ಎಂಬ ದೂರು ಕ್ಯಾಬ್ ಚಾಲಕರಿಂದ ಆಗಾಗ್ಗೆ ಕೇಳಿ ಬರುತ್ತಿತ್ತು. ಓಲಾ, ಊಬರ್ ನಂಥಹಾ ಅಗ್ರಿಗೇಟರ್ಗಳು ಕಮಿಷನ್ ವಿಧಾನದಲ್ಲಿ ಕೆಲಸ ಮಾಡುವ ಕಾರಣ ಪ್ರಯಾಣಿಕ ನೀಡುವ ಹಣದಲ್ಲಿ ಕಮಿಷನ್ ವಜಾ ಆಗಿ ಚಾಲಕರಿಗೆ ಹಣ ಬರುತ್ತಿತ್ತು. ಇದರಿಂದಾಗಿ ಹೆಚ್ಚಿನ ಹಣ ಕ್ಯಾಬ್ ಡ್ರೈವರ್ಗಳ ಕೈಗೆ ಸೇರುತ್ತಿರಲಿಲ್ಲ. ಆದರೆ ‘ನಮ್ಮ ಯಾತ್ರಿ’ ಹೆಸರಿನ ಕಮಿಷನ್ ರಹಿತ ಅಗ್ರಿಗೇಟರ್ನಿಂದ ಕ್ಯಾಬ್ ಡ್ರೈವರ್ಗಳು ಒಂದೇ ತಿಂಗಳಲ್ಲಿ ಭಾರಿ ಲಾಭ ಮಾಡಿದ್ದಾರಂತೆ.
ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿಯ ಪ್ರಕಾರ, ‘ನಮ್ಮ ಯಾತ್ರಿ’ ಅಪ್ಲಿಕೇಶನ್ ಲಾಂಚ್ ಆದ ಕೇವಲ ಒಂದು ತಿಂಗಳ ಅವಧಿಯಲ್ಲಿ ಬೆಂಗಳೂರಿನ ಕ್ಯಾಬ್ ಚಾಲಕರು 5.4 ಕೋಟಿ ಆದಾಯ ಗಳಿಸಿದ್ದಾರೆ. ‘ನಮ್ಮ ಯಾತ್ರೆ’ ಬಿಡುಗಡೆ ಮಾಡಿರುವ ಹೇಳಿಕೆಯಂತೆ ಈ ಹಿಂದೆ ಕ್ಯಾಬ್ ಡ್ರೈವರ್ಗಳು ಪ್ರತಿದಿನ ಗಳಿಸುತ್ತಿದ್ದ ಹಣಕ್ಕಿಂತ 800 ರೂಪಾಯಿ ಹೆಚ್ಚುವರಿಯಾಗಿ ಗಳಿಸುತ್ತಿದ್ದಾರೆ. ‘ನಮ್ಮ ಯಾತ್ರಿ’ ಶೂನ್ಯ ಕಮಿಷನ್ ವ್ಯವಸ್ಥೆ ಆಗಿರುವ ಕಾರಣ ಪ್ರಯಾಣಿಕ ಕೊಡುತ್ತಿರುವ ಹಣ ಪೂರ್ಣವಾಗಿ ಕ್ಯಾಬ್ ಚಾಲಕರ ಜೇಬು ಸೇರುತ್ತಿದೆ. ಹೀಗಾಗಿ ಅವರ ದಿನವಹಿ ಆದಾಯ ಸುಮಾರು 30% ಹೆಚ್ಚಾಗಿದೆ.
Hotel: ಊಟಕ್ಕೆ ಉಪ್ಪಿನಕಾಯಿ ಕೊಡುವುದು ಮರೆತಿದ್ದಕ್ಕೆ 35 ಸಾವಿರ ನಷ್ಟ!
ಕಳೆದ ಒಂದು ತಿಂಗಳಲ್ಲಿ 1.70 ಲಕ್ಷ ಟ್ರಿಪ್ಗಳನ್ನು ‘ನಮ್ಮ ಯಾತ್ರಿ’ ಮೂಲಕ ಬುಕ್ ಮಾಡಲಾಗಿದೆ. ಪ್ರತಿದಿನ ಬೆಂಗಳೂರಿನಲ್ಲಿ 6500 ರಿಂದ 7500 ಜನ ‘ನಮ್ಮ ಯಾತ್ರಿ’ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದಾರೆ. ‘ನಮ್ಮ ಯಾತ್ರಿ’ಯಲ್ಲಿ ಪ್ರಯಾಣಿಕ ಹಣ ಪಾವತಿ ಮಾಡಿದ ಕೂಡಲೇ ಆ ಹಣ ನೇರವಾಗಿ ಚಾಲಕನ ಖಾತೆ ಸೇರುತ್ತದೆ. ಹಿಂದೆ ಹೀಗಾಗುತ್ತಿರಲಿಲ್ಲ, ಪ್ರಯಾಣಿಕ ನೀಡಿದ ಹಣವನ್ನು ಅಗ್ರಿಗೇಟರ್ ಅಪ್ಲಿಕೇಶನ್ ನವರು ಇಟ್ಟುಕೊಂಡು ಬಳಿಕ ಅದರಲ್ಲಿ ತಮ್ಮ ಭಾಗ ತೆಗೆದುಕೊಂಡು ಉಳಿದಿದ್ದನ್ನು ಚಾಲಕನಿಗೆ ನೀಡುತ್ತಿದ್ದರು. ಸದ್ಯಕ್ಕೆ ‘ನಮ್ಮ ಯಾತ್ರಿ’ಯಲ್ಲಿ ನಾನ್ ಏಸಿ ಮಿನಿ ವಾಹನಗಳನ್ನು ಮಾತ್ರವೇ ಸಾರಿಗೆಗೆ ಬಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಏಸಿ ಕ್ಯಾಬ್ಗಳು, ಎಸ್ಯುವಿ, ಎಕ್ಸ್ಎಲ್ಗಳನ್ನು ಸಹ ಪರಿಚಯಿಸಲದ್ದೇವೆ ಎಂದು ‘ನಮ್ಮ ಯಾತ್ರಿ’ ಹೇಳಿದೆ.
Nice