CM Mamata Banerjee
ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡುವುದು, ಲಘುವಾಗಿ ನಡೆದುಕೊಳ್ಳುವುದು ಭಾರತೀಯ ಪುರುಷರಿಗೆ ರಕ್ತಗತವಾಗಿದೆ ಎನಿಸುತ್ತದೆ. ಇದೀಗ ಮಾಜಿ ಹೈಕೋರ್ಟ್ ನ್ಯಾಯಮೂರ್ತಿ, ಬಿಜೆಪಿ ಅಭ್ಯರ್ಥಿಯೊಬ್ಬ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬಗ್ಗೆ ಅತ್ಯಂತ ಹೀನವಾದ ಹೇಳಿಕೆ ನೀಡಿದ್ದಾನೆ. ಹೇಳಿಕೆ ನೀಡಿದ ವ್ಯಕ್ತಿಗೆ ಚುನಾವಣಾ ಆಯೋಗ ನೊಟೀಸ್ ನೀಡಿದೆ.
ಪಶ್ಚಿಮ ಬಂಗಾಳದ ತಮ್ಲುಕ್ ಕ್ಷೇತ್ರದ ಅಭ್ಯರ್ಥಿ, ಮಾಜಿ ನ್ಯಾಯಮೂರ್ತಿ ಆಗಿರುವ ಅಭಿಜಿತ್ ಗಂಗೂಲಿ ಮಮತಾ ಬ್ಯಾನರ್ಜಿ ಬಗ್ಗೆ ಹೀನ ಹೇಳಿಕೆಗಳನ್ನು ನೀಡಿದ್ದಾರೆ ಎನ್ನಲಾಗುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಒಂದು ಹರಿದಾಡುತ್ತಿದೆ. ಆದರೆ ಈ ವಿಡಿಯೋ ನಕಲಿ ಎಂದು ಬಿಜೆಪಿ ಹೇಳಿದೆ.
ವಿಡೊಯೋನಲ್ಲಿ ಮಾತನಾಡಿರುವ ಅಭಿಜಿತ್ ಗಂಗೂಲಿ, ‘ಮಮತಾ ಬ್ಯಾನರ್ಜಿ ನಿನ್ನ ರೇಟು ಎಷ್ಟು? ಎಂಟು ಲಕ್ಷವಾ, ಹಾಗಿದ್ದರೆ ನೀನು ಒಂದು ಕೆಲಸ ಮಾತ್ರ ನೀಡಬಲ್ಲೆ, 10 ಲಕ್ಷವಾ? 10 ಲಕ್ಷ ಹಣವಾದರೆ ಆ ಹಣದಲ್ಲಿ ರೇಷನ್ ಖರೀದಿಸಿ ವಿದೇಶಕ್ಕೆ ಕಳಿಸುತ್ತೀಯ. ರೇಖ ಪತ್ರ ಅನ್ನು 2000 ಕೊಟ್ಟು ಖರೀದಿಸಲಾಗಿದೆ ಎಂದು ಹೇಳುತ್ತೀರ? ಆಕೆ ಬಡವಿ ಎಂಬ ಕಾರಣಕ್ಕೆ ಈ ಮಾತುಗಳನ್ನು ಹೇಳುತ್ತಿದ್ದೀರ? ಎಂದಿದ್ದರು.
karnataka: ಭಾವುಕ ಕ್ಷಣಗಳ ಸೃಷ್ಟಿಸಿದ ನಿವೃತ್ತ ನೌಕರರ ಸನ್ಮಾನ
ಮಮದುವರೆದು, ‘ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆ ಬಗ್ಗೆ ಇಂಥಹಾ ಕೀಳು ಹೇಳಿಕೆ ನೀಡಲಹ ಹೇಗೆ ಸಾಧ್ಯ? ಮಮತಾ ಬ್ಯಾನರ್ಜಿ ಮಹಿಳೆಯೇ ಅಲ್ಲ ಎಂಬುದು ನನ್ನ ಅನುಮಾನ’ ಎಂದಿದ್ದರು ಅಭಿಜಿತ್. ಅಭಿಜಿತ್ ರ ಈ ಹೇಳಿಕೆಯನ್ನು ಟಿಎಂಸಿ ತೀವ್ರವಾಗಿ ಖಂಡಿಸಿದೆ. ಅಲ್ಲದೆ ಚುನಾವಣಾ ಆಯೋಗ ಸಹ ಅಭಿಜಿತ್ ಗಂಗೂಲಿಗೆ ಶೋಕಾಸ್ ನೊಟೀಸ್ ನೀಡಿದೆ.