Edible oil
ಅಡುಗೆ ತಯಾರಿಯಲ್ಲಿ ಉಪ್ಪು, ಖಾರದಷ್ಟೆ ಪ್ರಾಧಾನ್ಯತೆ ಅಡುಗೆ ಎಣ್ಣೆಗೂ ಇದೆ. ಎಣ್ಣೆ ಇಲ್ಲದೆ ಭಾರತದಲ್ಲಿ ಅಡುಗೆ ಮಾಡಲಾಗುವುದೇ ಇಲ್ಲ ಎಂಬಂಥಹಾ ಪರಿಸ್ಥಿತಿ ಇದೆ. ನಾವುಗಳು, ಈಗ ಅಥವಾ ಮುಂಚಿನಿಂದಲೂ ಅಡುಗೆ ಎಣ್ಣೆಗೆ ಕಡಲೆಕಾಯಿ ಎಣ್ಣೆ, ಸೂರ್ಯಕಾಂತಿ (ಸನ್ ಫ್ಲವರ್) ಎಣ್ಣೆಯನ್ನೇ ಬಳಸುತ್ತಾ ಬಂದಿದ್ದೇವೆ. ಅಡುಗೆ ಎಣ್ಣೆ ಹೇಗಿರಬೇಕು, ಅದು ಯಾವ ರೀತಿಯದ್ದಾಗಿರಬೇಕು ಎಂಬ ಬಗ್ಗೆ ನಮಗೆ ಮಾಹಿತಿ ಕಡಿಮೆ. ಅದಕ್ಕೆಂದೆ ಈ ಲೇಖನ.
ಬೀಜಗಳಿಂದ ತಯಾರಿಸಲಾದ ಅಡುಗೆ ಎಣ್ಣೆಯ ಬಳಕೆಯೇ ಬೇಡ ಎನ್ನುತ್ತದೆ ಆಯುರ್ವೇದ. ಬೀಜಗಳಿಂದ ತಯಾರಿಸಲಾದ ಎಣ್ಣೆಯನ್ನು ಸರಿಯಾಗಿ ಬಳಸದಿದ್ದಲ್ಲಿ ಕಾಲಾಂತರದಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಬಹುದು, ಆದರೆ ಭಾರತೀಯರು ಅಡುಗೆಯಲ್ಲಿ ಅತಿ ಹೆಚ್ಚು ಬಳಸುವುದು ಬೀಜಗಳಿಂದ ತಯಾರಿಸಲಾದ ಎಣ್ಣೆಯನ್ನೇ. ಕಡಲೆಕಾಯಿ ಎಣ್ಣೆ, ಸೂರ್ಯಕಾಂತಿ ಬೀಜದ ಎಣ್ಣೆ ಇತ್ಯಾದಿ.
ಬೀಜಗಳಿಂದ ತಯಾರಿಸಲಾದ ಎಣ್ಣೆಯ ಬದಲಿಗೆ ತುಪ್ಪ, ತೆಂಗಿನ ಕಾಯಿ ಎಣ್ಣೆ, ಆಲಿವ್ ಆಯಿಲ್ ಅನ್ನು ಬಳಸಿ ಅಡುಗೆ ಮಾಡಬಹುದು ಎನ್ನುತ್ತಾರೆ ತಜ್ಙರು. ಇವುಗಳಿಂದ ಅಡುಗೆ ಮಾಡುವುದರಿಂದ ರುಚಿ ಹೆಚ್ಚಾಗುವ ಜೊತೆಗೆ ಆರೋಗ್ಯ ಸಹ ಹೆಚ್ಚುತ್ತದೆ. ಸಾಂಬಾರ್, ಪಲ್ಯ ಇತ್ಯಾದಿಗಳಿಗೆ ಹೆಚ್ಚಿನ ಪ್ರಮಾಣದ ಎಣ್ಣೆ ಬಳಕೆ ಆಗುವುದಿಲ್ಲ ಹಾಗಾಗಿ ಅದರ ಬದಲು ತುಪ್ಪವನ್ನೇ ಬಳಸಿದಲ್ಲಿ ನಷ್ಟವೇನು ಆಗುವುದಿಲ್ಲ. ಇನ್ನು ತೆಂಗಿನ ಕಾಯಿ ಎಣ್ಣೆಯ ಬಳಕೆ ಕೇರಳ ಸೇರಿದಂತೆ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿಯೂ ಸಹ ಅಡುಗೆಯಲ್ಲಿ ಬಳಕೆಯಲ್ಲಿದೆ.
ಇನ್ನು ಆಲಿವ್ ಆಯಿಲ್ ಬಳಕೆಯಂತೂ ಹೆಚ್ಚು ಆರೋಗ್ಯಕಾರಿ. ವಿದೇಶಗಳಲ್ಲಿ ಅದರಲ್ಲಿಯೂ ಯುರೋಪಿಯನ್ ದೇಶಗಳಲ್ಲಿ ಆಲಿವ್ ಎಣ್ಣೆ ದಿನನಿತ್ಯದ ಬಳಕೆಯಲ್ಲಿದೆ. ಅಲಿವ್ ಎಣ್ಣೆ ತುಪ್ಪಕ್ಕಿಂತಲೂ ದುಬಾರಿಯೇನೋ ಹೌದು ಆದರೆ ತೆಂಗಿನ ಎಣ್ಣೆ, ತುಪ್ಪಕ್ಕಿಂತಲೂ ಹೆಚ್ಚು ಆರೋಗ್ಯಕಾರಿ ಎನ್ನಲಾಗುತ್ತದೆ.
Accident in Bengaluru: ಬೆಳ್ಳಂಬೆಳಿಗ್ಗೆ ಭೀಕರ ಅಪಘಾತ ರಾಜ್ಯದ 13 ಮಂದಿ ಸಾವು
ಒಂದೊಮ್ಮೆ, ತುಪ್ಪ, ತೆಂಗಿನ ಎಣ್ಣೆ, ಆಲಿವ್ ಆಯಿಲ್ ಬಳಸಲಾಗದೆ. ಕಡಲೆ ಅಥವಾ ಸೂರ್ಯಕಾಂತಿ ಎಣ್ಣೆಯನ್ನೇ ಬಳಸಬೇಕಾದ ಅನಿವಾರ್ಯತೆ ಇದೆಯೆಂದುಕೊಳ್ಳಿ, ಆಗ ಎಣ್ಣೆಯನ್ನು ಆರಿಸುವುದರಲ್ಲಿ ಹಾಗೂ ಬಳಸುವುದರಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಿರಿ. ಎಣ್ಣೆ ಖರೀದಿಸುವಾಗ ಸಾಧ್ಯವಾದಷ್ಟು ಕಡಿಮೆ ಫ್ಯಾಟ್ ಇರುವ ಎಣ್ಣೆಯನ್ನೇ ಆಯ್ಕೆ ಮಾಡಿ. ಅದನ್ನು ಬಳಸುವಾಗಲೂ ಸಹ ದೊಡ್ಡ ಉರಿಯಲ್ಲಿ ಎಣ್ಣೆಯನ್ನು ಕಾಯಿಸಬೇಡಿ. ಕಡಿಮೆ ಉರಿಯಲ್ಲಿಯೇ ಎಣ್ಣೆಯನ್ನು ಕಾಯಿಸಿ. ಒಮ್ಮೆ ಕಾಯಿಸಿದ ಎಣ್ಣೆಯನ್ನು ಮರುಬಳಕೆ ಮಾಡಬೇಡಿ.