Bengaluru Police: ರಸ್ತೆಯಲ್ಲಿ ಜಗಳವಾದಾಗ ಏನು ಮಾಡಬೇಕು? ಬೆಂಗಳೂರು ಪೊಲೀಸರು ನೀಡಿದ್ದಾರೆ ಸೂಚನೆ

0
156
Bengaluru Police

Bengaluru Police

ಬೆಂಗಳೂರಿನಲ್ಲಿ ಇತ್ತೀಚೆಗೆ ರೋಡ್ ರೇಜಿಂಗ್ (ರಸ್ತೆಯಲ್ಲಿ ಇತರೆ ವಾಹನ ಸವಾರರು ಜಗಳಕ್ಕೆ ಇಳಿಯುವುದು) ಘಟನೆಗಳು ಹೆಚ್ಚಾಗಿ ವರದಿಯಾಗುತ್ತಿವೆ. ಇತ್ತೀಚೆಗೆ ನಟಿ ಹರ್ಷಿಕಾ ಪೂಣಚ್ಚ ಹಾಗೂ ಅವರ ಪತಿ ಭುವನ್ ಸಹ ಇಂಥಹುದೇ ರೋಡ್ ರೇಜ್ ಘಟನೆಯಲ್ಲಿ ದುಷ್ಕರ್ಮಿಗಳಿಂದ ಸಮಸ್ಯೆ ಅನುಭವಿಸಿದರು. ಇಂಥಹಾ ಹಲವು ಘಟನೆಗಳು ಬೆಂಗಳೂರಿನಲ್ಲಿ ಇತ್ತೀಚೆಗೆ ವರದಿ ಆಗುತ್ತಲೇ ಇರುತ್ತವೆ. ಹಾಗಾಗಿ ಇದೀಗ ಬೆಂಗಳೂರಿನ ಸಂಚಾರಿ ಪೊಲೀಸರು ಬೆಂಗಳೂರಿಮ ವಾಹನ ಸವಾರರಿಗೆ ಕೆಲವು ಸೂಚನೆಗಳನ್ನು ನೀಡಿದ್ದು ಅವುಗಳನ್ನು ಪಾಲಿಸುವಂತೆ ಹೇಳಿದ್ದಾರೆ.

ಮೊದಲಿಗೆ ಯಾರೇ ಆಗಲಿ ರಸ್ತೆಯಲ್ಲಿ ಜಗಳ ಆರಂಭಿಸಿದರೆ ಸಾವಧಾನದಿಂದಿರಿ, ನೀವು ಸಹ ಕೋಪ ಪ್ರದರ್ಶಿಸುವುದು ಬೇಡ. ತಪ್ಪು ಯಾರದ್ದೇ ಆಗಿದ್ದರು ಶಾಂತ ಚಿತ್ತತೆ ಪ್ರದರ್ಶಿಸಿ.

ಜಗಳಕ್ಕೆ ಬಂದ ವ್ಯಕ್ತಿಯ ಜೊತೆ ವಾಗ್ವಾದಕ್ಕೆ ಇಳಿಯಬೇಡಿ. ಸಾಧ್ಯವಾದರೆ ಎದುರಿರುವ ವ್ಯಕ್ತಿಯನ್ನು ಸಾವಧಾನದಿಂದ ಇರುವಂತೆ ವಿನಂತಿಸಿ.

ಅಪಘಾತವಾಗಿ ನಿಮ್ಮ ಅಥವಾ ಅವರ ವಾಹನಕ್ಕೆ ಹಾನಿ ಆಗಿದ್ದರೆ ನೀವುಗಳೇ ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಬೇಡಿ. ಇದರಿಂದ ಮೋಸ ಹೋಗುವ ಸಾಧ್ಯತೆಯೂ ಇರುತ್ತದೆ.

ವಾಹನದ ನಂಬರ್ ಪ್ಲೇಟ್ ಅನ್ನು ಗಮನಿಸಿ ಸಂಖ್ಯೆಯನ್ನು ನಮೂದಿಸಿಕೊಳ್ಳಿ. ನಿಮ್ಮ ಜೊತೆ ಜಗಳಕ್ಕೆ ಬಂದ ವ್ಯಕ್ತಿಯನ್ನು ಗಮನಿಸಿ, ವಾಹನ ಹೆಸರನ್ನು ನೆನಪಿಟ್ಟುಕೊಳ್ಳಿ.

ತುರ್ತು ಸಹಾಯವಾಣಿಯಾಗಿರುವ 112 ಕ್ಕೆ ಕರೆ ಮಾಡಿ. ಪೊಲೀಸರು ಆದಷ್ಟು ಬೇಗನೆ ನೀವೊರುವ ಜಾಗಕ್ಕೆ ಬರುತ್ತಾರೆ.

ಟ್ರಾಫಿಕ್ ಗೆ ಸಮಸ್ಯೆ ಆಗದಂತೆ ನಿಮ್ಮ ವಾಹನವನ್ನು ರಸ್ತೆಯ ಬದಿಗೆ ನಿಲ್ಲಿಸಿ. ಜಗಳಕ್ಕೆ ಬಂದವರ ವಾಹನದ ಚಿತ್ರ ತೆಗೆದುಕೊಳ್ಳಿ. ನಿಮ್ಮ ವಾಹನಕ್ಕೆ ಹಾನಿ ಆಗಿದ್ದರೆ ಅದರ ಚಿತ್ರವನ್ನು ತೆಗೆದುಕೊಳ್ಳಿ.

ನಿಂಬೆ ಹಣ್ಣನ್ನು ಸರಿಯಾಗಿ ಬಳಸಿದರೆ ಆಗುವ ಆರೋಗ್ಯ ಪ್ರಯೋಜನಗಳು ಎಷ್ಟಿವೆ ಗೊತ್ತೆ?

ಪೊಲೀಸರು ಸ್ಥಳಕ್ಕೆ ಬಂದಾಗ ಸಾವಧಾನದಿಂದ ನಡೆದ ಘಟನೆಗಳನ್ನು ವಿವರಿಸಿ, ಆ ನಂತರ ಎದುರಾಳಿಗೂ ಘಟನೆ ವಿವರಿಸಲು ಬಿಡಿ. ಆ ನಂತರ ಪೊಲೀಸರು ತಮ್ಮ ಕರ್ತವ್ಯ ಮಾಡಲು‌ಬಿಡಿ.

LEAVE A REPLY

Please enter your comment!
Please enter your name here