Russia
ರಷ್ಯಾದೊಟ್ಟಿಗೆ ಮಾಡಿಕೊಳ್ಳಲಾಗಿದ್ದ ಶಸ್ತ್ರಾಸ್ತ್ರ ಒಪ್ಪಂದ ಫಲಿತವಾಗಿ 27000 ‘ಎಕೆ 203’ (ಅಸಾಲ್ಟ್ ರೈಫಲ್ಸ್) ಬಂದೂಕುಗಳು ಭಾರತೀಯ ಸೇನೆಗೆ ಹಸ್ತಾಂತರವಾಗಿವೆ. ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಈ ಬಂದೂಕುಗಳ ನಿರ್ಮಾಣ ಹಾಗೂ ಹಸ್ತಾಂತರ ಪದೇ-ಪದೇ ತಡವಾಗುತ್ತಲೇ ಬಂತು. ಆದರೆ ಈಗ ಕೊನೆಗೂ 27 ಸಾವಿರ ಎಕೆ 203 ಬಂದೂಕುಗಳು ಹಸ್ತಾಂತರವಾಗಿವೆ. ಉತ್ತರ ಪ್ರದೇಶದ ಕೋರ್ವಾನಲ್ಲಿ ಈ ಹಸ್ತಾಂತರಣೆ ನಡೆದಿದೆ. ಇನ್ನೂ 8000 ಬಂದೂಕುಗಳು ರಷ್ಯಾದಿಂದ ಬರಬೇಕಿದ್ದು, ಇನ್ನೆರಡು ವಾರಗಳಲ್ಲಿ ಅದೂ ಸಹ ಭಾರತೀಯ ಸೇನೆಗೆ ಹಸ್ತಾಂತರಗೊಳ್ಳಲಿದೆ.
5000 ಕೋಟಿಯ ಒಪ್ಪಂದ ರಷ್ಯಾ ಹಾಗೂ ಭಾರತದ ನಡುವೆ ಆಗಿತ್ತು. ರಷ್ಯಾ ನೀಡುವ ತಂತ್ರಜ್ಙಾನ ಆಧರಿಸಿ ಭಾರತದಲ್ಲಿ 6.1 ಲಕ್ಷ ಬಂದೂಕುಗಳನ್ನು ತಯಾರಿಸುವುದು ಒಪ್ಪಂದದ ಉದ್ದೇಶವಾಗಿತ್ತು. ಈ ಯೋಜನೆಯೂ ಸಹ ಜಾರಿಯಲ್ಲಿದ್ದು ಈ ಯೋಜನೆಯ ಮೊದಲ ಹಂತದಲ್ಲಿ 70 ಸಾವಿರ ಎಕೆ 203 ಬಂದೂಕುಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಆ ಬಳಿಕ ವೇಗ ಹೆಚ್ಚಿಸಿ ಲಕ್ಷಗಳ ಸಂಖ್ಯೆಯಲ್ಲಿ ಬಂದೂಕು ತಯಾರಿಸುವ ಗುರಿ ಭಾರತದ್ದಾಗಿದೆ.
ಈಗ ಭಾರತೀಯ ಸೇನೆಗೆ ಬಂದಿರುವ ಎಕೆ 203 ಬಂದೂಕು ಹಲವು ವಿಶೇಷತೆಗಳನ್ನು ಹೊಂದಿದೆ. ಎಕೆ 47. ಎಕೆ 56 ಗಳಿಗೆ ಹೋಲಿಸಿದರೆ ಹೆಚ್ಚು ಪರಿಣಾಮಕಾರಿಯಾಗಿಯೂ, ಬಳಸಲು ಅನುಕೂಲಕರವಾಗಿಯೂ ಇದೆ. ಎಕೆ 203 ಕೇವಲ 3.8 ಕೆಜಿ ತೂಕ (ಖಾಲಿ ಇದ್ದಾಗ) ಹೊಂದಿದೆ. 30 ಸುತ್ತು ಗುಂಡುಗಳನ್ನು ಏಕಕಾಲಕ್ಕೆ ಹಾರಿಸಬಹುದಾಗಿದೆ. 800 ಮೀಟರ್ ದೂರದ ಗುರಿಯನ್ನು ಸಹ ಹೊಡೆದು ಉರಿಳಿಸುತ್ತದೆ ಈ ಬಂದೂಕು. ಈ ಬಂದೂಕಿನಲ್ಲಿ 7.62 ಕ್ಯಾಲೀಬರ್್ನ ಗುಂಡುಗಳನ್ನು ಬಳಸಬೇಕಾಗಿದೆ. ಎಕೆ 47. ಎಕೆ 56 ಬಂದೂಕುಗಳಿಗೆ ಹೋಲಿಸಿದರೆ ಕಡಿಮೆ ತೂಕ, ಹೆಚ್ಚು ನಿಖರತೆ ಮತ್ತು ಹೆಚ್ಚಿನ ಸುತ್ತು ಗುಂಡು ಹೊಡೆಯುವ ಸಾಮರ್ಥ್ಯವನ್ನು ಈ ಬಂದೂಕು ಹೊಂದಿದೆ.
ಬೆಂಗಳೂರಿನಲ್ಲಿ ಭೇಟಿ ನೀಡಲೇ ಬೇಕಾದ ಎಂಟು ಸ್ಥಳಗಳು ಇವು
ಯುದ್ಧ ಅಥವಾ ಇನ್ನಾವುದೇ ಬಿಕ್ಕಟ್ಟುಗಳನ್ನು ಎದುರಿಸಲು ಸೈನಿಕರಿಗೆ ಈ ಬಂದೂಕುಗಳು ಹೆಚ್ಚು ನೆರವಾಗಲಿವೆ. ಭಾರತೀಯ ಸೈನ್ಯದ ಅರ್ಧದಷ್ಟು ಹೆಚ್ಚು ಸೈನಿಕರಿಗೆ (ಸೂಕ್ಷ್ಮ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ) ಈ ಬಂದೂಕುಗಳನ್ನು ನೀಡುವುದು ಭಾರತ ಸರ್ಕಾರದ ಉದ್ದೇಶವಾಗಿದೆ.