Vegetarian vs Nonvegetarian: ವೆಜ್ ಊಟಕ್ಕಿಂತಲೂ ನಾನ್ ವೆಜ್ ಊಟ ದುಬಾರಿ! ಯಾಕೆ ಹೀಗಾಯ್ತು?

0
143
Vegetarian vs Nonvegetarian

Vegetarian vs Nonvegetarian

ಭಾರತದ ಹೋಟೆಲ್ ಗಳಲ್ಲಿ ವೆಜ್ ಥಾಲಿ, ನಾನ್ ವೆಜ್ ಥಾಲಿ ಎಂಬುದು ತೀರ ಸಾಮಾನ್ಯ. ಈ ಥಾಲಿಗಳು ಒಂದು ಪರಿಪೂರ್ಣ ‘ಊಟ’ವನ್ನು ಒಳಗೊಂಡಿರುತ್ತದೆ. ವೆಜ್ ಥಾಲಿಯಲ್ಲಿ ಚಪಾತಿ ಅಥವಾ ರೋಟಿ, ಅನ್ನ, ಕೆಲವು ಪಲ್ಯಗಳು, ಹಪ್ಪಳ, ಹಸಿ ತರಕಾರಿಗಳು, ತುಸು ಸಿಹಿ, ಮೊಸರು ಅಥವಾ ಮಜ್ಜಿಗೆ ಹೀಗೆ ನವರಸಗಳಲ್ಲಿ ಹಲವು ರಸಗಳನ್ನು ಒಳಗೊಂಡು ಪರಿಪೂರ್ಣ ಆಹಾರವಾಗಿರುತ್ತದೆ ಈ ಥಾಲಿ. ನಾನ್ ವೆಜ್ ಥಾಲಿಯೂ ಸಹ ವಿವಿಧ ಬಗೆ ರಸಗಳನ್ನು ಒಳಗೊಂಡಿದೆ. ಮೊದಲಿನಿಂದಲೂ ಸಸ್ಯಹಾರಕ್ಕಿಂತಲೂ ಮಾಂಸಾಹಾರ ದುಬಾರಿ, ಇದು ಸಾಮಾನ್ಯ ಜ್ಙಾನವೂ ಸಹ ಹೌದು, ಆದರೆ ಈಗ ಇದು ಉಲ್ಟಾ ಆಗಿದೆ. ಸಸ್ಯಹಾರ ಥಾಲಿಗಿಂತಲೂ ನಾನ್ ವೆಜ್ ಥಾಲಿಯ ಬೆಲೆ ಕಡಿಮೆ ಎನ್ನುತ್ತಿದೆ ವರದಿ.

ಸಿಆರ್್ಐಎಸ್್ಐಎಲ್ (Credit Rating Information Services of India Limited) ಮಾಡಿರುವ ವರದಿಯ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ವೆಜಿಟೇರಿಯನ್ ಥಾಲಿ ದುಬಾರಿಯಾಗಿದೆಯಂತೆ. CRISIL, MIA&A ಮಾಡಿರುವ ವರದಿಯ ಪ್ರಕಾರ ಈ ವರ್ಷ ವೆಜ್ ಥಾಲಿ 8% ದುಬಾರಿಯಾಗಿದೆ. ಆದರೆ ನ಻ನ್ ವೆಜ್ ಥಾಲಿಯ ಬೆಲೆ 4% ಕಡಿಮೆಯಾಗಿದೆ. ಇದರಿಂದಾಗಿ ಮಾಂಸಾಹಾರ ಆಹಾರ ಬೆಲೆಗಳು ಕಡಿಮೆಯಾಗಿದೆ.

ರೋಟಿ, ರೈಸ್, ರೇಟ್ (RRR) ವರದಿ ಪ್ರಕಾರ ವೆಜ್ ಥಾಲಿಯಲ್ಲಿ ರೋಟಿ, ಪಲ್ಯೆ, ಆಲೂಗಟ್ಟೆ ಪಲ್ಯೆ, ತರಕಾರಿಗಳು, ದಾಲ್, ಮೊಸರು, ಸಲಾಡ್ ಗಳನ್ನು ಒಳಗೊಂಡಿದೆ. ಅದೇ ಮಾಂಸಾಹಾರ ಥಾಲಿಯಲ್ಲಿ ಬಹುತೇಕ ಇವೇ ಇರುತ್ತವೆ, ಆದರೆ ಮಾಂಸಾಹಾರ (ಚಿಕನ್ ಅಥವಾ ಕುರಿ) ಖಾದ್ಯಗಳನ್ನು ನೀಡಲಾಗುತ್ತದೆ. ಎರಡೂ ಥಾಳಿಗಳನ್ನು ಹೋಲಿಸಿ ನೋಡಿದರೆ ನಾನ್ ವೆಜ್ ಥಾಲಿಯಲ್ಲಿ ಪ್ರೊಟೀನ್ ಅಂಶ ತುಸು ಹೆಚ್ಚೇ ಇರುತ್ತದೆ.

ಬೆಂಗಳೂರಿನಲ್ಲಿ ಭೇಟಿ ನೀಡಲೇ ಬೇಕಾದ ಎಂಟು ಸ್ಥಳಗಳು ಇವು

ಆದರೆ ಅಚಾನಕ್ಕಾಗಿ ವೆಜ್ ಥಾಲಿಯ ಬೆಲೆ ಹೆಚ್ಚಾಗಿದ್ದಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಸಿಗುವ ಉತ್ತರವೆಂದರೆ, ತರಕಾರಿ ಬೆಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಲೇ ಹೋಗುತ್ತಿರುವುದು. ಹಾಗೂ ಚಿಕನ್ ಫೌಲ್ಟ್ರಿ, ಕುರಿ ಫಾರಂಗಳ ಸಂಖ್ಯೆಯಲ್ಲಿ ಹೆಚ್ಚಾದ ಕಾರಣ ಮಾಂಸದ ಬೆಲೆಯಲ್ಲಿ ಹೆಚ್ಚಳ ಆಗದೇ ಇರುವುದು. ಇದೇ ಕಾರಣಕ್ಕೆ ನಾನ್ ವೆಜ್ ಗಿಂತಲೂ ವೆಜ್ ಥಾಲಿ ಬೆಲೆ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ವೆಜ್ ಥಾಲಿ ಬೆಲೆಗಳು ಇನ್ನೂ ಹೆಚ್ಚಾಗಲಿದೆ ಎನ್ನಲಾಗುತ್ತಿದೆ.

LEAVE A REPLY

Please enter your comment!
Please enter your name here