Netflix: ಸಿನಿಮಾ ಮಾಡಿಕೊಡುತ್ತೇನೆಂದು ಹೇಳಿ 440 ಕೋಟಿ ಪಂಗನಾಮ ಹಾಕಿದ ನಿರ್ದೇಶಕ

0
161
Netflix

Netflix

ಒಟಿಟಿ ದೈತ್ಯ ಎನಿಸಿಕೊಂಡಿರುವ ನೆಟ್್ ಫ್ಲಿಕ್ಸ್ ವಿಶ್ವದಾದ್ಯಂತ ಹಲವು ಭಾಷೆಗಳಲ್ಲಿ ಹಲವು ಪ್ರಾಜೆಕ್ಟ್ ಗಳ ಮೇಲೆ ಬಂಡವಾಳ ಹೂಡಿದೆ. ಅಂದಾಜಿನ ಪ್ರಕಾರ ನೆಟ್ ಫ್ಲಿಕ್ಸ್ ಸುಮಾರು 10 ಲಕ್ಷ ಕೋಟಿ ಹಣವನ್ನು ಒಂದೇ ವರ್ಷದಲ್ಲಿ ವಿವಿಧ ಸಿನಿಮಾ, ವೆಬ್ ಸರಣಿ, ಡಾಕ್ಯುಮೆಂಟರಿಗಳ ಮೇಲೆ ತೊಡಗಿಸಿದೆ. ಹಣ ಹೂಡಿರುವ ಪ್ರಾಜೆಕ್ಟ್ ಗಳ ಮೇಲುಸ್ತುವಾರಿಗೆ ಹಲವು ಸಿಬ್ಬಂದಿಗಳನ್ನು ಸಹ ನೇಮಿಸಿದೆ. ಆದರೆ ಇದೆಲ್ಲದರ ನಡುವೆಯೂ ನಿರ್ದೇಶಕನೊಬ್ಬ ನೆಟ್ ಪ್ಲಿಕ್ಸ್ ಗೆ ಬರೋಬ್ಬರಿ 440 ಕೋಟಿ ಪಂಗನಾಮ ಹಾಕಿದ್ದಾನೆ.

ನೆಟ್ ಫ್ಲಿಕ್ಸ್ ಇಂಗ್ಲೀಷ್ ನ ಒಂದು ವೆಬ್ ಸರಣಿ ನಿರ್ಮಾಣಕ್ಕೆ 440 ಕೋಟಿ ಖರ್ಚು ಮಾಡಿದೆ ಆದರೆ ಆ ವೆಬ್ ಸರಣಿಯ ಒಂದೇ ಒಂದು ಎಪಿಸೋಡ್ ಸಹ ಚಿತ್ರೀಕರಣವಾಗಿಲ್ಲ! ನೆಟ್ ಫ್ಲಿಕ್ಸ್ ಕೊಟ್ಟ ಹಣದಲ್ಲಿ ಆ ವೆಬ್ ಸರಣಿಯ ನಿರ್ದೇಶಕ ಮಾತ್ರ ರೋಲ್ಸ್ ರಾಯ್ಸ್ ಕಾರು, ದೊಡ್ಡ ಬಂಗಲೆಗಳನ್ನು ಖರೀದಿ ಮಾಡಿ ಐಶಾರಾಮಿ ಜೀವನ ನಡೆಸುತ್ತಿದ್ದಾನೆ.

ಹಾಲಿವುಡ್ ಜನಪ್ರಿಯ ನಟ ಕೇನು ರಿವೀಸ್ ನಟಿಸಿದ್ದ 47-ರೋನಿನ್ ಸಿನಿಮಾ ನಿರ್ದೇಶನ ಮಾಡಿದ್ದ ಕಾರ್ಲ್ ರಿನ್ಸ್ಚ್ ಕೈಗೆ 440 ಕೋಟಿ ಕೊಟ್ಟು ಹಣ ಕಳೆದುಕೊಂಡಿದೆ ನೆಟ್ ಫ್ಲಿಕ್ಸ್. ವೈಜ್ಞಾನಿಕ ವಿಷಯ ಆಧರಿತ ವೆಬ್ ಸರಣಿಯೊಂದರ ನಿರ್ದೇಶನದ ಜವಾಬ್ದಾರಿಯನ್ನು ನೆಟ್ ಫ್ಲಿಕ್ಸ್ ಕಾರ್ಲ್ ರಿನ್ಸ್ಚ್ ಗೆ ನೆಟ್ ಫ್ಲಿಕ್ಸ್ ನೀಡಿತ್ತು. 2018 ರಲ್ಲಿ ಪ್ರಾಜೆಕ್ಟ್ ಪ್ರಾರಂಭವಾಯ್ತು, ಆರಂಭದ ಕೆಲವು ದಿನ ಚಿತ್ರೀಕರಣ ನಡೆಯಿತು, ಆದರೆ ಬರ ಬರುತ್ತಾ ಚಿತ್ರೀಕರಣ ತಡವಾಗುತ್ತಾ ಬಂತು. ಹಲವು ಬಾರಿ ಯೋಜನೆಗಳು ಬದಲಾದವು.

ಅದಾದ ಬಳಿಕ ಕೋವಿಡ್ ಬಂತು. ಆ ಸಂದರ್ಭದಲ್ಲಿ ನಿರ್ದೇಶಕ ಕಾರ್ಲ್ ರಿನ್ಸ್ಚ್ ಕೋವಿಡ್ ಬಗ್ಗೆ ಚಿತ್ರ-ವಿಚಿತ್ರ ಹೇಳಿಕೆಗಳನ್ನು ನೀಡಿ ಸುದ್ದಿ ಆಗಿದ್ದರು. ಅದಾದ ಬಳಿಕ ಪತ್ನಿಯ ಜೊತೆ ವಿಚ್ಛೇದನವಾಯ್ತು. ಆ ಸಮಯದಲ್ಲಿ ಪತ್ನಿ ಮೇಲೆ ಪ್ರಕರಣ ದಾಖಲಿಸಿದ ನಿರ್ದೇಶಕ ಕಾರ್ಲ್ ರಿನ್ಸ್ಚ್, ನನ್ನ ಪತ್ನಿ ನನ್ನನ್ನು ಕೊಲ್ಲಲು ಸುಫಾರಿ ನೀಡಿದ್ದಾಳೆ ಎಂದು ಆರೋಪಿಸೊ ಕಾನೂನು ಸಮರಕ್ಕೂ ಮುಂದಾಗಿದ್ದ.

ಹೀಗೆ ವಿವಿಧ ಕಾರಣಗಳಿಂದ ಚಿತ್ರೀಕರಣವನ್ನು ತಡ ಮಾಡುತ್ತಲೇ ಬಂದ ಕಾರ್ಲ್ ರಿನ್ಸ್ಚ್ ವಿರುದ್ಧ ಅಸಮಾಧಾನಗೊಂಡ ನೆಟ್ ಫ್ಲಿಕ್ಸ್ ಕೊನೆಗೆ ವೆಬ್ ಸರಣಿ ಪ್ರಾಜೆಕ್ಟ್ ಅನ್ನು ಕೈ ಬಿಟ್ಟಿತು. ಅಷ್ಟರಲ್ಲಾಗಲೇ ನೆಟ್ ಫ್ಲಿಕ್ಸ್ ಆ ವೆಬ್ ಸರಣಿಗಾಗಿ 440 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿತ್ತು.

ಮಕ್ಕಳು ಓದುತ್ತಿಲ್ಲವೆ? ಮೊಬೈಲ್‌ ಗೀಳಿಗೆ ಬಿದ್ದಿದ್ದಾರೆಯೇ ಸಂಕಷ್ಟಿ ದಿನ ಈ ಕಾರ್ಯ ಮಾಡಿ

ಚಿತ್ರೀಕರಣ ಮಾಡದೆ ಕಾಲ ಹರಣ ಮಾಡಿದ್ದ ನಿರ್ದೇಶಕ ಕಾರ್ಲ್ ರಿನ್ಸ್ಚ್ ತಾನು ಮಾತ್ರ ಐಶಾರಾಮಿ ಜೀವನ ನಡೆಸುತ್ತಿದ್ದ. ನೆಟ್ ಫ್ಲಿಕ್ಸ್ ಕೊಟ್ಟ ಹಣದಿಂದ ಬರೋಬ್ಬರಿ ಐದು ರಾಲ್ಸ್ ರಾಯ್ಸ್ ಕಾರು ಖರೀದಿಸಿದ್ದಾನೆ, ಒಂದು ಫೆರಾರಿ ಕಾರು, ಬಂಗಲೆ, ಡಿಸೈನರ್ ಬಟ್ಟೆಗಳನ್ನು ಖರೀದಿ ಮಾಡಿದ್ದಾನೆ. ಇದೀಗ ನೆಟ್ ಫ್ಲಿಕ್ಸ್, ಕಾರ್ಲ್ ರಿನ್ಸ್ಚ್ ಮೇಲೆ ಪ್ರಕರಣ ದಾಖಲಿಸಿದ್ದು, ಕಾನೂನು ಹೋರಾಟ ಜಾರಿಯಲ್ಲಿದೆ.

LEAVE A REPLY

Please enter your comment!
Please enter your name here