Business Idea
ಒಂದು ಕೋಟಿ ರೂಪಾಯಿ ಎನ್ನವುದು ಕಡಿಮೆ ಮೊತ್ತವಲ್ಲ. ಬಡ, ಮಧ್ಯಮ, ಮೇಲ್ಮಧ್ಯಮ ವರ್ಗದವರು ಕೋಟಿ ರೂಪಾಯಿ ಹಣ ಹೊಂದುವ ಕನಸನ್ನೂ ಕಾಣಲಾರರು. ಆದರೆ ಒಂದು ಕೋಟಿ ರೂಪಾಯಿ ಉಳಿಸುವುದು ಕಬ್ಬಿಣದ ಕಡಲೆ ಏನಲ್ಲ. ಸರಿಯಾದ ಆರ್ಥಿಕ ಶಿಸ್ತು ಮತ್ತು ಹೂಡಿಕೆಯ ಬುದ್ಧಿವಂತಿಕೆ ಇದ್ದ ಮಧ್ಯಮ ವರ್ಗದವರು ಸಹ ಸುಲಭವಾಗಿ ಒಂದು ಕೋಟಿ ರೂಪಾಯಿ ಹಣ ಉಳಿತಾಯ ಮಾಡಬಹುದು. ಒಂದು ಕೋಟಿ ರೂಪಾಯಿ ಉಳಿಸಲು ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಬಳ ಬರಬೇಕೆಂದೇನೂ ಇಲ್ಲ. ತಿಂಗಳಿಗೆ 25 ಸಾವಿರ ರೂಪಾಯಿ ಸಂಬಳ ಪಡೆಯುತ್ತಿರುವವರು ಸಹ ಒಂದು ಕೋಟಿ ರೂಪಾಯಿ ಹಣ ಉಳಿಸಬಹುದು. ಅದೂ ಸುಲಭವಾಗಿ.
ಈಗಷ್ಟೆ ಉದ್ಯೋಗ ಆರಂಭಿಸಿರುವ ಯುವಕರು ಈಗಿನಿಂದಲೇ ಹಣದ ಶಿಸ್ತು ರೂಡಿಸಿಕೊಂಡರೆ 25 ಸಾವಿರ ರೂಪಾಯಿ ಸಂಬಳ ಇದ್ದರೂ ಸಹ ಎಲ್ಲ ಖರ್ಚುಗಳನ್ನು ಕಳೆದು ಸಹ ಒಂದು ಕೋಟಿ ರೂಪಾಯಿ ಹಣ ಉಳಿಸಬಹುದು! ಅದೂ ಅತ್ಯಂತ ಸರಳವಾದ ಯೋಜನೆಗಳು ಹಾಗೂ ಹೂಡಿಕೆಗಳ ಮೂಲಕ ಈ ಗುರಿ ಸಾಧಿಸಬಹುದು.
25 ಸಾವಿರ ಸಂಬಳ ಹೊಂದಿರುವ ವ್ಯಕ್ತಿ ತನ್ನ ಸಂಬಳದ ಎಷ್ಟು ಭಾಗವನ್ನು ಉಳಿಬಹುದು ಎಂಬುದನ್ನು ಮೊದಲು ನಿಶ್ಚಯ ಮಾಡಿಕೊಳ್ಳಬೇಕು. ದಿನಸಿ, ಬಾಡಿಗೆ, ಪೆಟ್ರೋಲ್, ಮೊಬೈಲ್ ಖರ್ಚು, ಆರೋಗ್ಯ, ಮನೊರಂಜನೆ ಎಲ್ಲ ಖರ್ಚುಗಳನ್ನು ಮಾಡಿಯೂ ತಿಂಗಳ ಅಂತ್ಯಕ್ಕೆ 4000 ರೂಪಾಯಿ ಉಳಿಸಲು ಸಾಧ್ಯವಾಗುತ್ತಿದೆ ಎಂದರೆ ನೀವು ಕೋಟಿ ರೂಪಾಯಿ ಉಳಿಸಬಲ್ಲಿರಿ ಎಂದರ್ಥ. ಆ ಉಳಿತಾಯವಾದ 4000 ರೂಪಾಯಿ ಹಣವನ್ನು ಮ್ಯೂಚುವ್ ಫಂಡ್ ಗೆ ಎಸ್‌ಐಪಿ (ಸಿಸ್ಟಮ್ಯಾಟಿಕ್ ಇನ್‌ವೆಸ್ಟ್‌ಮೆಂಟ್ ಪ್ಲ್ಯಾನ್) ಮಾಡಬೇಕು. ಮ್ಯೂಚುಯಲ್ ಫಂಡ್‌ಗಳು ವಾರ್ಷಿಕ 12% ಲಾಭ ನೀಡುತ್ತವೆ. ಅಲ್ಲಿಗೆ ಪ್ರತಿ ವರ್ಷ 12% ಹೂಡಿಕೆಯ ಮೇಲೆ ಲಾಭವೆಂದರೆ ಅದು ವರ್ಷದಿಂದ ವರ್ಷಕ್ಕೆ ಕಾಂಪೌಂಡಿಂಗ್ ಆಗಿ 28 ವರ್ಷಗಳಲ್ಲಿ ಒಂದು ಕೋಟಿ ರೂಪಾಯಿಯಾಗುತ್ತದೆ.
ಒಂದೊಮ್ಮೆ ನೀವು ತಿಂಗಳಿಗೆ 5000 ರೂಪಾಯಿ ಹಣವನ್ನು ಮ್ಯೂಚ್ಯುಲ್ ಫಂಡ್ ಅಥವಾ 12% ರಿಟರ್ನ್ಸ್ ಬರುವ ಯವುದೇ ಫಂಡ್ ನಲ್ಲಿ ಹೂಡಿಕೆ ಮಾಡಿದಿರೆಂದರೆ 26 ವರ್ಷಕ್ಕೆ ನೀವು ಕೋಟ್ಯಧೀಶ್ವರರಾಗುತ್ತೀರಿ. ಅದೇ ನೀವು ತಿಂಗಳಿಗೆ 7500 ರೂಪಾಯಿ ಹೂಡಿಕೆ ಮಾಡಿದ್ದೇ ಆದಲ್ಲಿ 23 ವರ್ಷಗಳಲ್ಲಿ ಕೋಟಿ ರೂಪಾಯಿಗಳಿಗೆ ಒಡೆಯರಾಗುತ್ತೀರಿ. ಒಂದೊಮ್ಮೆ ನೀವು ತಿಂಗಳಿಗೆ 10 ರೂಪಾಯಿ ಹೂಡಿಕೆ ಮಾಡಿದ್ದೇ ಆದಲ್ಲಿ 20 ವರ್ಷಗಳಲ್ಲಿ ಕೋಟ್ಯಧೀಶರಾಗುತ್ತೀರಿ.
Chikkaballapur: ತಮ್ಮದೇ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ತಿರುಗಿ ಬಿದ್ದ ಕಾಂಗ್ರೆಸ್ ಕಾರ್ಯಕರ್ತರು
ಇಲ್ಲಿ ವಿಷಯವೊಂದನ್ನು ಗಮನಿಸಿ, ನೀವು ಹೂಡಿಕೆ ಮಾಡುವ ಯಾವುದೇ ಮೊತ್ತವನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸುತ್ತಾ ಹೋದಲ್ಲಿ, ಕೋಟಿ ಉಳಿಸುವ ಸಾಧ್ಯತೆ ಇನ್ನಷ್ಟು ಹತ್ತಿರವಾಗುತ್ತದೆ. 5000 ತಿಂಗಳಿಗೆ ಹೂಡಿಕೆ ಮಾಡುತ್ತಿರುವ ವ್ಯಕ್ತಿ ವರ್ಷದಿಂದ ವರ್ಷಕ್ಕೆ 5% ಹೂಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಾ ಹೋದರೆ 23 ವರ್ಷಕ್ಕೆ ಕೋಟಿ ಉಳಿಸುತ್ತಾನೆ. ಅದೇ ಪ್ರತಿ ವರ್ಷ 10% ಹೂಡಿಕೆ ಹೆಚ್ಚು ಮಾಡಿದರೆ ಕೇವಲ 20 ವರ್ಷದಲ್ಲೇ ಕೋಟಿ ಗಳಿಸಬಹುದು. ಎಷ್ಟು ಹಣ ಹೂಡಿಕೆ ಮಾಡಿದರೆ ಎಷ್ಟು ವರ್ಷದಲ್ಲಿ ಒಂದು ಕೋಟಿ ಗಳಿಸಬಹುದು ಎಂಬ ಮಾಹಿತಿ ನೀಡುವ ಪಟ್ಟಿ ಇಲ್ಲಿದೆ.