Bengaluru: ಟೈಲರ್ ಆಗಿದ್ದ ಈ ಬೆಂಗಳೂರಿನ ವ್ಯಕ್ತಿ ಇಂದು 10 ಸಾವಿರ ಕೋಟಿಗೆ ಒಡೆಯ

0
156
Bengaluru

Bengaluru

ಸೊನ್ನೆಯಿಂದ ಪ್ರಾರಂಭಿಸಿ ಸಾಮಾಜ್ಯವನ್ನೆ ಕಟ್ಟಿದವರ ಕತೆಗಳು ಎಂದಿಗೂ ಸ್ಪೂರ್ತಿದಾಯಕ. ಅಂಥಹಾ ಹಲವು ಮಹನೀಯರು ಬೆಂಗಳೂರಿನಲ್ಲಿದ್ದಾರೆ. ಅಂಥಹವರಲ್ಲಿ ಒಬ್ಬರು ಇರ್ಫಾನ್ ರಜಾಕ್. ಈ ವ್ಯಕ್ತಿ ಕಟ್ಟಿದ ಸಾಮ್ರಾಜ್ಯದ ಹೆಸರನ್ನು ಬಹುತೇಕ ಎಲ್ಲರೂ ಕೇಳಿರುತ್ತಾರೆ ಆದರೆ ಇರ್ಫಾನ್ ರಜಾಕ್ ಬಗ್ಗೆಯಾಗಲಿ, ಅವರ ಸಾಹಸಮಯ ಯಾತ್ರೆಯ ಬಗ್ಗೆ ಕೇಳಿರುವವರ ಸಂಖ್ಯೆ ಅತ್ಯಂತ ಕಡಿಮೆ.

ಭಾರತದ ಅತ್ಯಂತ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲಿ ಒಂದಾದ ಪ್ರೆಸ್ಟೀಜ್ ಗ್ರೂಪ್ ನ ಮಾಲೀಕ ಈ ಇರ್ಫಾನ್ ರಜಾಕ್‌. ಬೆಂಗಳೂರಿನಲ್ಲಿ ಸಣ್ಣ ಟೈಲರಿಂಗ್ ಶಾಪ್ ನಲ್ಲಿ ತಂದೆಯ ಜೊತೆ ಟೇಲರಿಂಗ್ ಮಾಡುತ್ತಾ, ಗ್ರಾಹಕರ ಬಟ್ಟೆಗಳನ್ನು ಕತ್ತರಿಸಿ ಹೊಲೆಯುತ್ತಿದ್ದ ಇರ್ಫಾನ್ ಇಂದು ಭಾರತದ ಎರಡನೇ ಅತಿ ದೊಡ್ಡ ರಿಯಲ್ ಎಸ್ಟೇಟ್ ಸಂಸ್ಥೆಯ ಮಾಲೀಕ.

1950 ರಲ್ಲಿ ಬೆಂಗಳೂರಿನಲ್ಲಿ ರಜಾಕ್ ಅವರ ತಂದೆ ಟೈಲರಿಂಗ್ ಶಾಪ್ ಇಟ್ಟಿದ್ದರು. ಅಲ್ಲಿಯೇ ಕೆಲಸ ಮಾಡುತ್ತಿದ್ದ ಇರ್ಫಾನ್, ತನ್ನ ಸಹೋದರರ ಜೊತೆ ಸೇರಿ ಟೈಲರಿಂಗ್ ಶಾಪ್ ಅನ್ನು ಬಟ್ಟೆ ಅಂಗಡಿಯಾಗಿ ಬದಲಾಯಿಸಿದರು. 1985 ರ ಸುಮಾರಿಗೆ ರಿಯಲ್ ಎಸ್ಟೇಟ್ ನ ಪ್ರಾಮುಖ್ಯತೆ ಅರಿತ ಇರ್ಫಾನ್ ಆಗಲೇ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಧುಮುಕಿದರು.

ಬಟ್ಟೆ ಉದ್ಯಮದಲ್ಲಿ ಗಳಿಸಿದ ಹಣವನ್ನು ತೊಡಗಿಸಿ ಎರಡು ಪ್ರಾಜೆಕ್ಟ್ ಗಳನ್ನು ಮಾಡಿ ಮಾರಾಟ ಮಾಡಿದರು. 1990 ರಲ್ಲಿ ತಮ್ಮ ಎರಡನೇ ಪ್ರಾಜೆಕ್ಟ್ ಅನ್ನು ಮಾರಿದ ಬಳಿಕ ನಿವೃತ್ತರಾಗುವ ಯೋಜನೆ ಹಾಕಿದ್ದರು. ಆದರೆ ರಿಯಲ್ ಎಸ್ಟೇಟ್ ಉದ್ಯಮದ ಸೆಳೆತ ಅವರನ್ನು ಬಿಡಲಿಲ್ಲ. ಬೆಂಗಳೂರಿನಲ್ಲಿ ನಾನಾ ರೀತಿಯ ಕಷ್ಟಗಳನ್ನು ಎದುರಿಸಿ ಇರ್ಫಾನ್ ಪ್ರೆಸ್ಟೀಜ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು‌.

ಪ್ರೆಸ್ಟೀಜ್ ಈ ವರೆಗೆ 285 ದೊಡ್ಟ ಪ್ರಾಜೆಕ್ಟ್ ಗಳನ್ನು ಮಾಡಿದೆ. 57 ಪ್ರಾಜೆಕ್ಟ್ ಗಳು ಈಗಲೂ ಚಾಲ್ತಿಯಲ್ಲಿವೆ.‌ ಆಪಲ್, ಅರ್ಮಾನಿ, ಕ್ಯಾಟರ್ ಪಿಲ್ಲರ್, ಲೂಯಿ ವಿಟಾನ್ ಇನ್ನೂ ಹಲವಾರು ಪ್ರತಿಷ್ಠಿತ ಸಂಸ್ಥೆಗಳು ಪ್ರೆಸ್ಟೀಜ್ ನ ಬಾಡಿಗೆದಾರರಾಗಿದ್ದಾರೆ. ಇರ್ಫಾನ್ ಅವರ ಆಸ್ತಿ ಮೌಲ್ಯ 10 ಸಾವಿರ ಕೋಟಿಗಳಿಗೂ ಹೆಚ್ಚು. ವಿಶೇಷವೆಂದರೆ ತಮ್ಮ ಕುಟುಂಬದ ಉದ್ಯಮವಾಗಿದ್ದ ತಮ್ಮ ತಂದೆ ಸ್ಥಾಪಿಸಿದ ಟೈಲರಿಂಗ್ ಹಾಗೂ ಬಟ್ಟೆ ಉದ್ಯಮವನ್ನೂ ಈಗಲೂ ಉಳೊಸಿಕೊಂಡು ನಡೆಸಿಕೊಂಡು ಹೋಗುತ್ತಿದ್ದಾರೆ ಇರ್ಫಾನ್ ಹಾಗೂ ಅವರ ಸಹೋದರರು.

LEAVE A REPLY

Please enter your comment!
Please enter your name here