Shimoga
ಶಿವಮೊಗ್ಗ ಶಾಂತ ನಗರಗಳಲ್ಲಿ ಒಂದೆಂದು ಗುರುತಿಸಿಕೊಂಡಿತ್ತು. ಆದರೆ ಇತ್ತೀಚೆಗೆ ಶಿವಮೊಗ್ಗದ ಚಹರೆ ಬದಲಾಗಿದೆ. ಶಿವಮೊಗ್ಗದ ಹೊಸಮನೆ ಬಡವಾಣೆಯಲ್ಲಿ ಮನೆಗಳ ಮುಂದೆ ನಿಲ್ಲಿಸಿದ್ದ ಕಾರುಗಳ ಮೇಲೆ ಕೆಲ ಪುಂಡರು ದಾಳಿ ಮಾಡಿದ್ದಾರೆ. ಮೇ 29 ರಂದು ರಾತ್ರಿ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದು ಕಾರುಗಳ ಗಾಜುಗಳನ್ನು ಪುಡಿಗಟ್ಟಿದ್ದಾರೆ. ಘಟನೆಯಿಂದ ಬಡಾವಣೆಯ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಎರಡು ಕಾರು, ಎರಡು ಆಟೋ, ಒಂದು ಬೈಕ್ ಹಾಗೂ ಮನೆಗಳ ಮುಂದೆ ಇರಿಸಲಾಗಿದ್ದ ಡ್ರಮ್‌ಗಳಿಗೆ ಮಚ್ಚುಗಳಿಂದ, ರಾಡ್‌ಗಳಿಂದ ಹೊಡೆದು ಜಖಂಗೊಳಿಸಲಾಗಿದೆ.
ಮೇ 30ರ ಬೆಳಿಗ್ಗೆ ವಿಷಯ ತಿಳಿಯುತ್ತಿದ್ದಂತೆ ಶಾಸಕ ಎಚ್ ಎಸ್ ಚೆನ್ನಬಸಪ್ಪ ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳೀಯರೊಟ್ಟಿಗೆ ಮಾತನಾಡಿ ದೂರುಗಳನ್ನು ಸ್ವೀಕರಿಸಿದ್ದಾರೆ. ಸ್ಥಳೀಯರು, ಶಾಸಕರಿಗೆ ಪರಿಸ್ಥಿತಿ ವಿವರಿಸಿದ್ದಲ್ಲದೆ, ಕೆಲವು ಪುಂಡರು ಪ್ರತಿ ರಾತ್ರಿ ಸೇರಿ ಮದ್ಯ ಸೇವಿಸುವ ಜಾಗಕ್ಕೆ ಕರೆದೊಯ್ದು ಅಲ್ಲಿನ ಪರಿಸ್ಥಿತಿ ತೋರಿಸಿದ್ದಾರೆ. ಆ ಸ್ಥಳ ನೋಡಿ ಕ್ಷಣಕಾಲ ಶಾಸಕರು ಅವಾಕ್ಕಾಗಿದ್ದಾರೆ. ನೂರಾರು ಮದ್ಯದ ಬಾಟಲಿಗಳು ರಾಶಿ ಬಿದ್ದಿರುವುದನ್ನು ನೋಡಿ ಶಾಸಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಪೊಲೀಸರಿಗೆ ಈ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಹೊಸಮನೆ ಬಡಾವಣೆಯಲ್ಲಿ ರಾತ್ರಿ ನಡೆದ ಘಟನೆಗೆ ಗಾಂಜಾ ಸೇವನೆ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಯಾವುದಕ್ಕೆ ನಮ್ಮ ಯುವಕರು ದಾಸರಾಗಬೇಕು ಎಂದುಕೋಂಡಿದ್ದೆವು ಅದು ಈಗ ಅವರಿಗೆ ಸುಲಭವಾಗಿ ಕೈಗೆಟುವಂತಾಗಿದೆ. ಗಾಂಜಾದಂಥಹಾ ವಸ್ತುಗಳು ಶಿವಮೊಗ್ಗಕ್ಕೆ ಹೇಗೆ ಬಂತು? ಇದಕ್ಕೆ ಯಾರು ಹೊಣೆ, ಕಾನೂನು ಸುವ್ಯವಸ್ಥೆ ಕಾಪಾಡುತ್ತಿದ್ದೇವೆ ಎನ್ನುತ್ತಾರೆ ಆದರೆ ಇಲ್ಲಿ ಆಗುತ್ತಿರುವುದೇನು ಎಂದು ಶಾಸಕ ಚೆನ್ನಬಸಪ್ಪ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಹರಿಯಾಹ್ದಿದ್ದಾರೆ.
Allu Arjun: ಅಲ್ಲು ಅರ್ಜುನ್- ಸುಕುಮಾರ್ ಮಧ್ಯೆ ಜಗಳ, ನಿಜಾಂಶವೇನು?
ಸ್ಥಳಕ್ಕೆ ಜಿಲ್ಲಾ ಪೊಲೀಸ್ ಆಯುಕ್ತ ಮಿಥುನ್ ಅವರು ಸಹ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು. ಸ್ಥಳೀಯ ಪೊಲೀಸರಿಗೆ ಬೀಟ್ ಹೆಚ್ಚಿಸುವಂತೆ ಸೂಚಿಸಿದರು. ಸ್ಥಳೀಯರನ್ನುದ್ದೇಶಿಸಿ, ಇಂಥಹಾ ಘಟನೆಗಳು ನಡೆದ ಕೂಡಲೆ 112 ತುರ್ತು ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿ ಎಂದು ತಿಳಿಸಿದರು. ಇನ್ನು ಸ್ಥಳೀಯ ಕಾರ್ಪೊರೇಟರ್, ಹೊಸಹಳ್ಳಿ ಬಡಾವಣೆಗೆ ಪೊಲೀಸ್ ಚೌಕಿ ನಿಗದಿಪಡಿಸುವಂತೆ ಆಗ್ರಹ ಮಾಡಿದರು.