RBI: ಒಂದು ಲಕ್ಷ ಕೆಜಿ ಚಿನ್ನವನ್ನು ಇಂಗ್ಲೆಂಡ್​ನಿಂದ ವಾಪಸ್ ತಂದ ಆರ್​ಬಿಐ

0
182

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India), ಇಂಗ್ಲೆಂಡ್​ನಿಂದ ಬರೋಬ್ಬರಿ 1 ಲಕ್ಷ ಕೆಜಿ ಚಿನ್ನವನ್ನು ಮರಳಿ ತರಿಸಿಕೊಂಡು ತನ್ನ ಖಜಾನೆ ತುಂಬಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಲಕ್ಷ ಕೆಜಿ ಚಿನ್ನವನ್ನು ಮರಳಿ ತರುವುದಾಗಿ ಆರ್​ಬಿಐ ಹೇಳಿದೆ. 1991 ರಲ್ಲಿ ವಿದೇಶಿ ವಿನಮಯ ದೊರತೆ ಎದುರಿಸಿದ್ದಾಗ ಭಾರತವು ಭಾರಿ ಪ್ರಮಾಣದ ಚಿನ್ನವನ್ನು ಬ್ಯಾಂಕ್ ಆಫ್ ಇಂಗ್ಲೆಂಡ್​ನಲ್ಲಿ ದಾಸ್ತಾನು ಇರಿಸಿ, ವಿದೇಶಿ ವಿನಿಮಯ ಕೊರತೆ ನೀಗಿಸಿಕೊಂಡಿತ್ತು. ಆ ಸಮಯದಲ್ಲಿ ಪ್ರಧಾನಿಯಾಗಿದ್ದ ಪಿವಿ ನರಸಿಂಹಾರಾವ್ ಅವರು ಭಾರಿ ಟೀಕೆಗಳನ್ನು ಸಹ ಎದುರಿಸಿದ್ದರು. 1991 ರ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತದ ಚಿನ್ನವನ್ನು ಭಾರತ ಇಂಗ್ಲೆಂಡ್​​ನಿಂದ ಮರಳಿ ತಂದಿದೆ.

ಸಾಗಾಟ ಮತ್ತು ದಾಸ್ತಾನು ಕಾರಣಕ್ಕಾಗಿ ಹೀಗೆ ಒಂದೇ ಬಾರಿಗೆ 1 ಲಕ್ಷ ಕೆಜಿ ಚಿನ್ನವನ್ನು ಇಂಗ್ಲೆಂಡ್​ನಿಂದ ಮರಳಿ ತರಲಾಗುತ್ತಿದೆ. ಸಾಮಾನ್ಯವಾಗಿ ದೇಶದ ಚಿನ್ನದ ರಿಸರ್ವ್​ ಅನ್ನು ಆರ್​ಬಿಐ ತನ್ನ ಮುಂಬೈ ಕಚೇರಿ ಹಾಗೂ ನಾಗ್ಪುರ ಕಚೇರಿಗಳಲ್ಲಿ ಶೇಖರಿಸಿ ಇಡುತ್ತದೆ. ಆರ್​ಬಿಐ, ಕಾಲಕಾಲಕ್ಕೆ ಚಿನ್ನವನ್ನು ಖರೀದಿಸಿ ಅದನ್ನು ಸಂಗ್ರಹಿಸಿಡುತ್ತದೆ. ವಿದೇಶದಲ್ಲಿ ಭಾರತದ ಚಿನ್ನದ ದಾಸ್ತಾನು ಹೆಚ್ಚಾಗುತ್ತಿರುವ ಕಾರಣ ಅದರಲ್ಲಿ ಕೆಲವು ಭಾಗವನ್ನು ವಾಪಸ್ ತರಿಸಿಕೊಳ್ಳಬೇಕೆಂದು ಈಗ ಇಂಗ್ಲೆಂಡ್​ ನಿಂದ ಚಿನ್ನವನ್ನು ಮರಳಿ ತರಿಸಿಕೊಂಡಿದೆ.

ಹಲವು ದೇಶಗಳ ಸೆಂಟ್ರಲ್ ಬ್ಯಾಂಕ್​ಗೆ ಬ್ಯಾಂಕ್ ಆಫ್ ಇಂಗ್ಲೆಂಡ್ ಉಗ್ರಾಣ ಅಥವಾ ದಾಸ್ತಾನಂತೆ ಕಾರ್ಯ ನಿರ್ವಹಿಸುತ್ತದೆ. ಭಾರತಕ್ಕೂ ಸಹ. ಭಾರತ ಸ್ವಾತಂತ್ರ್ಯವಾಗುವ ಮೊದಲಿನಿಂದಲೂ ಭಾರತವು ತನ್ನ ಚಿನ್ನವನ್ನು ಬ್ಯಾಂಕ್ ಆಫ್ ಇಂಗ್ಲೆಂಡ್​ನಲ್ಲಿ ದಾಸ್ತಾನು ಮಾಡಿದೆ. ಆರ್​ಬಿಐ ಬಳಿ 822 ಟನ್ ಚಿನ್ನವಿದೆ. ಅದರಲ್ಲಿ 413 ಟನ್ ವಿದೇಶದ ದಾಸ್ತಾನಿನಲ್ಲಿದೆ. ಕಳೆದ ಹಣಕಾಸು ವರ್ಷದಲ್ಲಿ ಆರ್​ಬಿಐ ಮತ್ತೆ 27.5 ಟನ್ ಚಿನ್ನವನ್ನು ಖರೀದಿ ಮಾಡಿ ದಾಸ್ತಾನು ಇರಿಸಿಕೊಂಡಿದೆ.

ಇಷ್ಟು ಭಾರಿ ಪ್ರಮಾಣದ ಚಿನ್ನವನ್ನು ಸಾಗಣೆ ಮಾಡುವುದು ಸುಲಭದ ಕೆಲಸವಾಗಿರಲಿಲ್ಲ. ಇದಕ್ಕಾಗಿ ರಿಸರ್ವ್ ಬ್ಯಾಂಕ್, ಹಣಕಾಸು ಇಲಾಖೆ, ಭಾರತೀಯ ಸೇನೆ, ವೈಮಾನಿಕ ಇಲಾಖೆ, ಸ್ಥಳೀಯ ಇಲಾಖೆಗಳು ಎಲ್ಲವೂ ಸೇರಿ ಕಳೆದ ಕೆಲವು ತಿಂಗಳುಗಳಿಂದಲೂ ಈ ಕುರಿತಾಗಿ ಕೆಲಸ ಮಾಡಿ. ವಿಶೇಷ ವಿಮಾನಗಳು, ಯುದ್ಧ ವಿಮಾನಗಳು, ದೊಡ್ಡ ಸಂಖ್ಯೆಯ ಭದ್ರತೆಯನ್ನು ಬಳಸಿಕೊಂಡು 1 ಲಕ್ಷ ಕೆಜಿ ಚಿನ್ನವನ್ನು ಇಂಗ್ಲೆಂಡ್​ನಿಂದ ಭಾರತಕ್ಕೆ ಸಾಗಿಸಿ, ದಾಸ್ತಾನು ಮಾಡಿರಿಸಿದೆ. ಈ ಕಾರ್ಯವು 1991 ಕ್ಕೆ ಹೋಲಿಸಿದರೆ ಭಾರತ ಆರ್ಥಿಕವಾಗಿ ಎಷ್ಟು ಶಕ್ತವಾಗಿದೆ ಹಾಗೂ ಎಷ್ಟು ಆತ್ಮವಿಶ್ವಾಸಪೂರ್ಣವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಆರ್​ಬಿಐ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾಗಿ ಟಿಓಐ ವರದಿ ಮಾಡಿದೆ.

LEAVE A REPLY

Please enter your comment!
Please enter your name here