Nandi Hills: ಪ್ರವಾಸಿಗರ ಗಮನಕ್ಕೆ: ನಂದಿ ಬೆಟ್ಟಕ್ಕೆ ಪ್ರವೇಶಿಸುವ ಸಮಯ ಬದಲಾವಣೆ

0
186
nandi hills
ನಂದಿ ಬೆಟ್ಟ

Nandi Hills

ನಂದಿ ಬೆಟ್ಟ ಅಥವಾ ನಂದಿ ಗಿರಿಧಾಮ ಬೆಂಗಳೂರಿಗರ ಫೇವರೀಟ್‌ ವೀಕೆಂಡ್‌ ಸ್ಪಾಟ್.‌ ಶನಿವಾರ-ಭಾನುವಾರ ಬಂತೆಂದರೆ ನೂರಾರು ಸಂಖ್ಯೆಯ ಯುವಕರು ಬೈಕ್-ಕಾರು ಹತ್ತಿಕೊಂಡು ಬೆಳ್ಳಂಬೆಳಿಗ್ಗೆ ನಂದಿ ಬೆಟ್ಟಕ್ಕೆ ಆಗಮಿಸುತ್ತಾರೆ. ಬೆಳಿಗ್ಗೆಯೇ ಬೆಟ್ಟದ ಮೇಲೆ ಹತ್ತಿ ಅಲ್ಲಿಂದ ತೇಲುವ ಮೋಡಗಳನ್ನು ವೀಕ್ಷಿಸುತ್ತಾರೆ. ಅಲ್ಲಿನ ಸಸ್ಯ ರಾಶಿಯ ವೀಕ್ಷಿಸುತ್ತಾರೆ, ತಣ್ಣನೆಯ ಪರಿಸರದಲ್ಲಿ ಕಾಲ ಕಳೆಯುತ್ತಾರೆ. ಆದರೆ ಇತ್ತೀಚೆಗೆ ನಂದಿ ಬೆಟ್ಟದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ಅವಸ್ಥೆ ಆಗಿದೆ. ಇತ್ತೀಚೆಗಂತೂ ಕೆಲವು ಸಮಯ ನಂದಿ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶವನ್ನೇ ನಿರ್ಭಂಧಿಸಲಾಗಿತ್ತು. ಬಳಿಕ ಮತ್ತೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತಾದರೂ ಆಗಲೂ ಸಹ ಟ್ರಾಫಿಕ್‌ ಜಾಮ್‌, ಪಾರ್ಕಿಂಗ್‌ ಸ್ಥಳದಲ್ಲಿ ಗಲಾಟೆಗಳು ಆಗಿದ್ದವು. ಇದೀಗ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು, ನಂದಿ ಬೆಟ್ಟದ ಪ್ರವೇಶ ಸಮಯವನ್ನು ಪರಿಷ್ಕರಣೆ ಮಾಡಿದ್ದಾರೆ.

ಮುಂಚೆ ನಂಧಿಗಿರಿಧಾಮಕ್ಕೆ ಬೆಳಿಗ್ಗೆ 5 ಗಂಟೆ ಇಂದ ಸಂಜೆ 7 ವರೆಗೆ ಪ್ರವಾಸಿಗರು ಬರಬಹುದಾಗಿತ್ತು. ಆದರೆ ಈಗ ಈ ಸಮಯವನ್ನು ಬದಲಾಯಿಸಲಾಗಿದೆ. ಜಿಲ್ಲಾಧಿಕಾರಿಗಳ ಹೊಸ ಆದೇಶದಂತೆ ಬೆಳಿಗ್ಗೆ 5:30 ರಿಂದ ಸಂಜೆ 6:30 ವರೆಗೆ ಮಾತ್ರವೇ ನಂದಿ ಗಿರಿಧಾಮಕ್ಕೆ ಪ್ರವೇಶಿಸಬಹುದಾಗಿದೆ. ಇನ್ನು ಮುಂದೆ ಕತ್ತಲೆ ಬೇಗ ಆಗಲಿದ್ದು, ಬೆಳಕು ಮೂಡುವುದು ಸಹ ತಡ ಆದ್ದರಿಂದ ಸಮಯವನ್ನು ಬದಲಾವಣೆ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಸಮಯದಲ್ಲಿನ ಬದಲಾವಣೆ ನಂದಿ ಗಿರಿಧಾಮದಲ್ಲಿ ಪ್ರವಾಸಿಗರ ಭದ್ರತೆ ದೃಷ್ಟಿಯಿಂದ ಮಾಡಲಾಗಿದೆ.

ನಂದಿ ಗಿರಿಧಾಮ ಪ್ರವೇಶದ ಸಮಯ ಪರಿಷ್ಕರಣೆ ಪ್ರವಾಸಿಗರಿಗೆ ನಿಜಕ್ಕೂ ಅನುಕೂಲವಾಗುತ್ತದೆಯೋ ಅಥವಾ ಅವರಿಗೆ ಇನ್ನಷ್ಟು ಸಮಸ್ಯೆ ತರುತ್ತದೆಯೋ ಕಾದು ನೋಡಬೇಕಿದೆ. ನಂದಿ ಬೆಟ್ಟಕ್ಕೆ ಹೋಗಲೆಂದು ಕೆಲವರು ಬೆಳಿಗ್ಗೆ 4 ಗಂಟೆಗೆ ಬಂದು ನಂದಿ ಬೆಟ್ಟದ ಮುಖ್ಯ ದ್ವಾರದ ಬಳಿ ಕಾದು ಕುಳಿತಿರುತ್ತಾರೆ. 5 ಗಂಟೆ ವೇಳೆಗೆಲ್ಲ ಭಾರಿ ಸಂಖ್ಯೆಯ ಜನ ಸೇರಿ ಕಿ.ಮೀಟರ್‌ ಗಟ್ಟಲೆ ಟ್ರಾಫಿಕ್‌ ಜಾಮ್‌ ಆಗಿ ಬಿಡುತ್ತದೆ.

LEAVE A REPLY

Please enter your comment!
Please enter your name here