Gold News: ಯಾವ ದೇಶದ ಬಳಿ ಹೆಚ್ಚು ಚಿನ್ನ ಇದೆ, ಪಟ್ಟಿಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ

0
212
Gold News

Gold News

ಯಾರ ಬಳಿ ಹೆಚ್ಚು ಚಿನ್ನವಿದೆಯೋ ಆ ವ್ಯಕ್ತಿ ಶ್ರೀಮಂತ ಎನಿಸಿಕೊಳ್ಳುತ್ತಾನೆ. ದೇಶದ ವಿಚಾರದಲ್ಲೂ ಹಾಗೆಯೇ ಯಾವ ದೇಶದ ಬಳಿ ಹೆಚ್ಚು ಚಿನ್ನವಿದೆಯೋ ಆ ದೇಶ ಶ್ರೀಮಂತ ಎನಿಸಿಕೊಳ್ಳುತ್ತದೆ. ಭಾರತದಲ್ಲಿ ಚಿನ್ನದ ಬಳಕೆ ಅತಿಯಾಗಿದೆ. ಇಲ್ಲಿನ ಪ್ರತಿ ಮನೆ-ಮನೆಯಲ್ಲಿಯೂ ಚಿನ್ನವಿದೆ. ಈ ಹಳದಿ ಲೋಹ ಭಾರತದ ಸಂಸ್ಕೃತಿಯ ಭಾಗವಾಗಿದೆ. ಭಾರತ ಮಾತ್ರವೇ ಅಲ್ಲದೆ ವಿಶ್ವದ ಹಲವು ದೇಶಗಳಲ್ಲಿ ಚಿನ್ನಕ್ಕೆ ಪ್ರಾಧಾನ್ಯತೆ ಇದೆ. ಅಂದಹಾಗೆ ವಿಶ್ವದ ಯಾವ ದೇಶದಲ್ಲಿ ಚಿನ್ನದ ಸಂಗ್ರಹ ಹೆಚ್ಚಿದೆ. ಇಲ್ಲಿದೆ ಪಟ್ಟಿ.

ಹಲವಾರು ದೇಶಗಳು ಚಿನ್ನದ ಸಂಗ್ರಹ (ಗೋಲ್ಡ್ ರಿಸರ್ವ್) ಹೊಂದಿವೆ. ಗೋಲ್ಡ್ ರಿಸರ್ವ್ ಎಂಬುದು ಆ ದೇಶದ ಆರ್ಥಿಕತೆಯ ಗ್ಯಾರೆಂಟಿಯಂತೆ. ಗೋಲ್ಡ್ ರಿಸರ್ವ್ ಹೆಚ್ಚಿದ್ದಷ್ಟು ಆರ್ಥಿಕತೆ ಗಟ್ಟಿಯಾಗಿದೆ ಎಂದರ್ಥ. ಗೋಲ್ಡ್ ರಿಸರ್ವ್ ಹೆಚ್ಚು ಹೊಂದಿದ ದೇಶಕ್ಕೆ ಸಾಲಗಳು ಸುಲಭವಾಗಿ ಸಿಗುತ್ತವೆ. ಇತರೆ ದೇಶಗಳು ಹೂಡಿಕೆಗೆ ಆಸಕ್ತಿ ತೋರುತ್ತವೆ. 1970 ರಲ್ಲಿ ಗೋಲ್ಡ್ ರಿವರ್ಸ್ ರದ್ದಾಗಿದ್ದರೂ ಸಹ ಇಂದಿಗೂ ಸಹ ಹಲವಾರು ದೇಶಗಳು ಗೋಲ್ಡ್ ರಿಸರ್ವ್ ಹೊಂದಿವೆ. ಅತಿ ಹೆಚ್ಚು ಚಿನ್ನವನ್ನು ಹೊಂದಿರುವ ದೇಶಗಳ ಪಟ್ಟಿ ಇಲ್ಲಿದೆ.

ಅಮೆರಿಕ ವಿಶ್ವದಲ್ಲೇ ಅತಿ ಹೆಚ್ಚು ಗೋಲ್ಡ್ ರಿಸರ್ವ್ ಹೊಂದಿರುವ ದೇಶ. ಅಮೆರಿಕ 8133 ಟನ್ ಚಿನ್ನದ ಸಂಗ್ರಹ ಅಥವಾ ಗೋಲ್ಡ್ ರಿಸರ್ವ್ ಹೊಂದಿದೆ. ಇನ್ನು ಎರಡನೇ ಸ್ಥಾನದಲ್ಲಿರುವ ಜರ್ಮನಿ ಬಳಿ 3352 ಟನ್ ಚಿನ್ನವಿದೆ. ಮೊದಲ ಸ್ಥಾನದಲ್ಲಿರುವ ಅಮೆರಿಕಕ್ಕೂ ಎರಡನೇ ಸ್ಥಾನದಲ್ಲಿರುವ ಇಟಲಿಗೂ ಸುಮಾರು 5000 ಸಾವಿರ ಟನ್ ವ್ಯತ್ಯಾಸವಿದೆ. ಮೂರನೇ ಸ್ಥಾನದಲ್ಲಿರುವ ಇಟಲಿ ಬಳಿ 2451 ಟನ್ ಚಿನ್ನವಿದೆ. ನಾಲ್ಕನೇ ಸ್ಥಾನದಲ್ಲಿ ಫ್ರಾನ್ಸ್ ಹಾಗೂ ಐದನೇ ಸ್ಥಾನದಲ್ಲಿ ರಷ್ಯಾ ಇದೆ.

ಬಡ, ಮಧ್ಯಮ ವರ್ಗದವರು ಒಂದು ಕೋಟಿ ರೂಪಾಯಿ ಹಣ ಉಳಿಸುವುದು ಹೇಗೆ?

ಆರನೇ ಸ್ಥಾನದಲ್ಲಿ ನೆರೆಯ ಚೀನಾ ಇದೆ. ಚೀನಾ ಬಳಿ 2262 ಟನ್ ಚಿನ್ನ ಇದೆ. ಈ ಪಟ್ಟಿಯಲ್ಲಿ ಭಾರತ ಒಂಬತ್ತನೇ ಸ್ಥಾನದಲ್ಲಿದೆ. ಭಾರತದ ಬಳಿ 822 ಟನ್ ಚಿನ್ನದ ಸಂಗ್ರಹ ಅಥವಾ ಗೋಲ್ಡ್ ರಿಸರ್ವ್ ಇದೆ. ಫೋರ್ಬ್ಸ್ ಪ್ರಸ್ತುತ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ 20 ದೇಶಗಳ ಹೆಸರು ಮಾತ್ರವೇ ಇದೆ. ಈ 20 ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನದ ಹೆಸರಿಲ್ಲ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಭಾರತದ ಬಹುತೇಕ ಪ್ರತಿ ಮನೆಯಲ್ಲಿಯೂ ಚಿನ್ನವಿದೆ. ಬಡ ಕುಟುಂಬದಲ್ಲಿಯೂ ಸಹ ಕೆಲವು ಗ್ರಾಂಗಳಾದರೂ ಚಿನ್ನವಿದೆ. ಒಂದೊಮ್ಮೆ ದೇಶದಲ್ಲಿರುವ ಒಟ್ಟು ಚಿನ್ನವನ್ನು ಲೆಕ್ಕ ಹಾಕಿದರೆ ಭಾರತ ವಿಶ್ವದಲ್ಲಿಯೇ ಅತಿ ಹೆಚ್ಚು ಚಿನ್ನ ಹೊಂದಿದ ದೇಶವಾಗಬಹುದು. ಅತಿ ಹೆಚ್ಚು ಚಿನ್ನ ಖರೀದಿಸುವ ದೇಶ ಈಗಲೂ ಸಹ ಭಾರತವೇ. ಎರಡನೇ ಸ್ಥಾನದಲ್ಲಿ ಚೀನಾ ಇದೆ.

LEAVE A REPLY

Please enter your comment!
Please enter your name here