Indira Gandhi: ಇಂದಿರಾ ಗಾಂಧಿಯ ಕೊಂದವನ ಮಗನಿಗೆ ಲೋಕಸಭೆ ಚುನಾವಣೆಯಲ್ಲಿ ಗೆಲುವು

0
146
Indira Gandhi

Indira Gandhi

ಇಂದಿರಾ ಗಾಂಧಿಯ ಕೊಂದ ಅಪರಾಧಿಗಳಲ್ಲಿ ಒಬ್ಬರ ಪುತ್ರ ಈಗ ಕಾಂಗ್ರೆಸ್ ಅಭ್ಯರ್ಥಿಯನ್ನು ಮಣಿಸಿ ಲೋಕಸಭೆ ಪ್ರವೇಶಿಸುತ್ತಿದ್ದಾರೆ. ಇಂದಿರಾ ಗಾಂಧಿಯನ್ನು ಕೊಂದ ಇಬ್ಬರು ಅಪರಾಧಿಗಳಲ್ಲಿ ಒಬ್ಬನಾದ ಬೇಂಟ್ ಸಿಂಗ್ ಪುತ್ರ ಅಮೃತ್ ಪಾಲ್ ಸಿಂಗ್ ಕಾಂಗ್ರೆಸ್ ಅಭ್ಯರ್ಥಿಯನ್ನು ಮಣಿಸಿ ಗೆದ್ದಿದ್ದಾರೆ. ವಿಶೇಷವೆಂದರೆ ಅಮೃತ್ ಪಾಲ್ ಸಿಂಗ್ ಕಳೆದ ಕೆಲವು ಸಮಯದಿಂದ ಜೈಲಿನಲ್ಲಿದ್ದಾರೆ. ಚುನಾವಣಾ ಪ್ರಚಾರ ಸಹ ಮಾಡದೆ ಅಮೃತ್ ಸಿಂಗ್ ವಿಜಯಿಯಾಗಿದ್ದಾರೆ.

ಅಮೃತ್ ಪಾಲ್ ಸಿಂಗ್ ಪ್ರತ್ಯೇಕ ಪಂಜಾಬ್ ರಾಷ್ಟ್ರಕ್ಕಾಗಿ ಹೋರಾಡುತ್ತಿರುವವರ ನಾಯಕನಾಗಿ ಗುರುತಿಸಿಕೊಂಡಿದ್ದು, ಅವರ ಮೇಲೆ ನ್ಯಾಷನಲ್ ಸೆಕ್ಯುರಿಟಿ ಆಕ್ಟ್ ಅಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಲಾಗಿದೆ. ಅಲ್ಲಿಂದಲೇ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ ಅಮೃತ್ ಪಾಲ್ ಖದೂರ್ ಸಾಹಿಬ್ ಕ್ಷೇತ್ರದಲ್ಲಿ 1.97 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಮತ್ತೊಬ್ಬ ಪ್ರತ್ಯೇಕತಾವಾದಿ ಸರಬ್ಜೀತ್ ಖಾಲ್ಸಾ ಸಹ ಪಕ್ಷೇತರವಾಗಿ ಚುನಾವಣೆ ಎದುರಿಸಿ ಜಯಗಳಿಸಿದ್ದಾರೆ. ಇವರೂ ಸಹ ಜೈಲಿನಲ್ಲಿದ್ದು, ಅಲ್ಲಿಂದಲೇ ಚುನಾವಣೆ ಎದುರಿಸಿ ಗೆಲುವು ಸಾಧಿಸಿದ್ದಾರೆ. ‘ವಾರಿಸ್ ದಿ ಪಂಜಾಬ್’ ಹೆಸರಿನ ಪ್ರತ್ಯೇಕತವಾದಿ ಗುಂಪು ನಡೆಸುತ್ತಿರುವ ಸರಬ್ಜಿತ್ ಅಸ್ಸಾಂ ಜೈಲಿನಲ್ಲಿದ್ದಾರೆ.

ಸರಬ್ಜೀತ್ ರ ತಂದೆ ತರಸೀಮ್ ಮಾತನಾಡಿ, ಮಗನ ಗೆಲುವಿಗೆ ಸಿಖ್ ಸಮುದಾಯವೇ ಕಾರಣ, ಅವರೇ ಮುಂದೆ ನಿಂತು ಮಗನ ಗೆಲ್ಲಿಸಿದ್ದಾರೆ. ಕಳೆದ ಏಪ್ರಿಲ್ 23 ರಂದು ಸರಬ್ಜೀತ್ ಬಂಧನವಾಗಿತ್ತು. ಬರೋಬ್ಬರಿ ಒಂದು ತಿಂಗಳ ಕಾಲ ಸರಬ್ಜೀತ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು.

Allu Arjun: ಅಲ್ಲು ಅರ್ಜುನ್- ಸುಕುಮಾರ್ ಮಧ್ಯೆ ಜಗಳ, ನಿಜಾಂಶವೇನು?

ಸರಬ್ಜೀತ್ ಚುನಾವಣೆಗೆ ಸ್ಪರ್ಧಿಸಲು ಆಸಕ್ತರಾಗಿರಲಿಲ್ಲ, ಆದರೆ ಅವತ ಸಮುದಾಯದವರು ಒತ್ತಾಯಿಸಿದ್ದರಿಂದ ಅವರು ಚುನಾವಣೆಗೆ ಸ್ಪರ್ಧಿಸಿದ್ದರು. ಪ್ರತ್ಯೇಕತವಾದಿ ಭಾಷಣಗಳ ಜೊತೆಗೆ ಪಂಜಾಬ್ ಅನ್ನು ಮಾದಕ ವದಯಸನ ಮುಕ್ತ ಮಾಡುವ ಬಗ್ಗೆಯೂ ಸರಬ್ಜೀತ್ ಆಸಕ್ತಿ ವಹಿಸಿದ್ದಾರೆ ಎನ್ನಲಾಗುತ್ತಿದೆ.

LEAVE A REPLY

Please enter your comment!
Please enter your name here