Car Accident
ಹೊಸಕೋಟೆ-ಚಿಂತಾಮಣಿ ಹೆದ್ದಾರಿಯಲ್ಲಿ ಜೂನ್ 6 ರ ಸಂಜೆ ವೇಳೆಗೆ ನಡೆದ ಅಪಘಾತದಲ್ಲಿ ಇಬ್ಬರು ನಿಧನ ಹೊಂದಿದ್ದು ಮೂವರು ತೀವ್ರ ಗಾಯಗಳೊಟ್ಟಿಗೆ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಲಕನ ಅಜಾಗರೂಕತೆಯೇ ಈ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಚಾಲಕ ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದ ಎಂಬ ಆರೋಪವೂ ಸ್ಥಳದಲ್ಲಿದ್ದವರಿಂದ ಕೇಳಿ ಬಂದಿದೆ.
ಹೊಸಕೋಟೆ-ಚಿಂತಾಮಣಿ ಹೆದ್ದಾರಿಯಲ್ಲಿನ ಐ20 ಕಾರಿನಲ್ಲಿ ಬಂದ ಚಾಲಕ ಹೆದ್ದಾರಿಯ ಬದಿಯಲ್ಲಿದ್ದ ಹೋಟೆಲ್ ಮುಂದೆ ಫುಟ್ ಪಾತ್ ಮೇಲೆ ನಡೆದು ಬರುತ್ತಿದ್ದವರಿಗೆ ಕಾರು ಗುದ್ದಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗುವ ಆತುರದಲ್ಲಿ ಮುಂದಿದ್ದ ಬೈಕ್ ಒಂದಕ್ಕೆ ಗುದ್ದಿದ್ದು, ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ನಿಧನ ಹೊಂದಿದ್ದಾರೆ.
ನಿಧನ ಹೊಂದಿದವರನ್ನು ಶಿವಾಜಿನಗರದ ನಿವಾಸಿ ಮೊಹಮ್ಮದ್ ಫೈಜ್ (18) ಹಾಗೂ ಕಣ್ಣೂರಿನ ನಿವಾಸಿ ಜಗದೀಶ್ (30) ಎಂದು ಗುರುತಿಸಲಾಗಿದೆ. ಮೃತರ ಕುಟುಂಬದ ಆಕ್ರಂಧನ ಮುಗಿಲು ಮುಟ್ಟಿದೆ. ಗಾಯಗೊಂಡ ಮೂವರನ್ನು ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
Vegetarian Food: ಮಾಂಸಾಹಾರಿಗಳೆ ಇಲ್ಲದ ವಿಶ್ವದ ಏಕೈಕ ಸಸ್ಯಹಾರಿ ನಗರ ಭಾರತದಲ್ಲಿದೆ
ಗಾಯಗೊಂಡವರನ್ನು ಅಬ್ಬಾಸ್, ಹಬ್ಬುಸ್ ಪಾಷಾ ಮತ್ತು ಅಜುಬ್ಬೂರ್ ಎಂದು ಗುರುತಿಸಲಾಗಿದೆ. ಅಪಘಾತ ಮಾಡಿದ ಚಾಲಕ ಪ್ರಗತೀಶ್ ರಾವ್ ಗೂ ಕೆಲವು ಗಾಯಗಳಾಗಿವೆ. ಅಪಘಾತ ನಡೆದಾಗ ಪ್ರಗತೀಶ್ ರಾವ್ ಚಲಾಯೊಸುತ್ತಿದ್ದ ಕಾರಿನಲ್ಲಿ ಮದ್ಯದ ಬಾಟಲಿಗಳಿದ್ದವು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.
ಮೃತ ಜಗದೀಶ್ ಕುಟುಂಬದವರು ಸರ್ಕಾರಿ ಆಸ್ಪತ್ರೆಯ ಶವಾಗಾರದ ಮುಂದೆ ಶವವಿಟ್ಟು ಪ್ರತಿಭಟನೆ ಮಾಡಿದ್ದು, ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.