Lok Sabha Elections 2024: ಕರ್ನಾಟಕದ ಯಾವ-ಯಾವ ಸಂಸದರಿಗೆ ಸಿಗಲಿದೆ ಕೇಂದ್ರ ಸಚಿವ ಸ್ಥಾನ?

0
165
Lok Sabha Elections 2024:

Lok Sabha Elections 2024

ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ. 17ನೇ ಲೋಕಸಭೆ ವಿಸರ್ಜನೆ ಆಗಿದ್ದು, ಜೂನ್ 09 ರಂದು ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ 18 ನೇ ಲೋಕಸಭೆ ರಚನೆ ಆಗಲಿದೆ. ಹೊಸ ಲೋಕಸಭೆಯಲ್ಲಿ ಯಾರ್ಯಾರಿಗೆ, ಯಾವ ಯಾವ ಸಚಿವ ಸ್ಥಾನ ಸಿಗಬಹುದು ಎಂಬ ಲೆಕ್ಕಾಚಾರ ಜೋರಾಗಿ ನಡೆಯುತ್ತಿದೆ. ಈ ಬಾರಿ ಬಿಜೆಪಿಗೆ ಪೂರ್ಣ ಬಹುಮತ ಬಾರದ ಕಾರಣ ಮಿತ್ರ ಪಕ್ಷಗಳು ಬಲಗೊಂಡಿದ್ದು ಸಚಿವ ಸ್ಥಾನಕ್ಕಾಗಿ ‘ಪಟ್ಟು’ ಹಿಡಿಯುವ ಸಾಧ್ಯತೆ ಹೆಚ್ಚಿದೆ. ಇದೆಲ್ಲದರ ನಡುವೆ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಅತಿ ಹೆಚ್ಚು ಸ್ಥಾನ ನೀಡಿರುವ ಕರ್ನಾಟಕಕ್ಕೆ ಎಷ್ಟು ಸಚಿವ ಸ್ಥಾನ ಸಿಗಲಿದೆ ಮತ್ತು ಬಹು ಮುಖ್ಯವಾಗಿ ಯಾರ್ಯಾರಿಗೆ ಸಿಗಲಿದೆ ಎಂಬುದು ಪ್ರಶ್ನೆಯಾಗಿದೆ.

ಬಿಜೆಪಿಯ ಒಳಗಿನ ಸುದ್ದಿಯಂತೆ ಕರ್ನಾಟಕಕ್ಕೆ ಈ ಬಾರಿ ಕಳೆದ ಬಾರಿಗಿಂತಲೂ ಹೆಚ್ಚಿನ ಸಚಿವ ಸ್ಥಾನ ಸಿಗಲಿದೆ ಎನ್ನಲಾಗುತ್ತಿದೆ. ಕಳೆದ ಬಾರಿ ಕರ್ನಾಟಕದ ಸದಾನಂದ ಗೌಡ, ಪ್ರಹ್ಲಾದ್ ಜೋಶಿ ಅವರುಗಳಿಗೆ ಕ್ಯಾಬಿನೆಟ್ ಸಚಿವ ಸ್ಥಾನ ಸಿಕ್ಕಿದ್ದರೆ, ಸುರೇಶ್ ಅಂಗಡಿ ಅವರಿಗೆ ರಾಜ್ಯ ಖಾತೆ ದೊರೆತಿತ್ತು. ಆದರೆ ಅವರು ಕಾಲವಾದ ಬಳಿಕ ಮತ್ತೆ ಕರ್ನಾಟಕಕ್ಕೆ ಆ ಸ್ಥಾನವನ್ನು ನೀಡಲಿಲ್ಲ. ಅಲ್ಲದೆ ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆ ಆಗಿದ್ದ ನಿರ್ಮಲಾ ಸೀತಾರಾಮನ್ ಅವರೂ ಸಹ ಸಚಿವರಾಗಿದ್ದರು.

ಆದರೆ ಈ ಬಾರಿ ಕರ್ನಾಟಕಕ್ಕೆ ತುಸು ಹೆಚ್ಚಿನ ಸಚಿವ ಸ್ಥಾನ ಲಭಿಸಬಹುದು ಎಂಬ ನಿರೀಕ್ಷೆ ಇದೆ. ಬಿಜೆಪಿ ಜೊತೆ ಕೈಜೋಡಿಸಿ ಮಂಡ್ಯದಿಂದ ಗೆದ್ದಿರುವ ಕುಮಾರಸ್ವಾಮಿ ಅವರಿಗೆ ಸಚಿವ ಸ್ಥಾನ ಖಾಯಂ ಎನ್ನಲಾಗುತ್ತಿದೆ. ಇನ್ನು ಹಿರಿಯ ಸಂಸದ ಪ್ರಹ್ಲಾದ್ ಜೋಶಿ ಅವರಿಗೂ ಸಚಿವ ಸ್ಥಾನ ಖಾಯಂ. ಇನ್ನುಳಿದಂತೆ ಡಿಕೆ ಸುರೇಶ್ ರನ್ನು ಸೋಲಿಸಿ ಲೋಕಸಭೆ ಪ್ರವೇಶಿಸಿರುವ ಡಾ ಮಂಜುನಾಥ್ ಅವರಿಗೂ ಸಚಿವ ಸ್ಥಾನದ ಭರವಸೆ ದೊರೆತಿದೆ ಎಂಬ ಮಾತುಗಳು ಬಿಜೆಪಿ ಆಂತರಿಕ ವಲಯದಲ್ಲಿ ಹರಿದಾಡುತ್ತಿದೆ.

Instant Divorce: ಮದುವೆಯಾದ ಮೂರೇ ನಿಮಿಷಕ್ಕೆ ವಿಚ್ಛೇದನ! ಕಾರಣವೇನು?

ಕಳೆದ ಬಾರಿ ಕೇವಲ ಒಂದು ದೊರಕಿದ್ದ ರಾಜ್ಯ ಸಚಿವ ಸ್ಥಾನ ಈ ಬಾರಿ ಮೂರಾಗುವ ಸಾಧ್ಯತೆ ಇದೆ. ಈ ಬಾರಿ ಶೋಭಾ ಕರಂದ್ಲಾಜೆ, ಬಸವರಾಜ ಬೊಮ್ಮಾಯಿ, ಯುವ ಸಂಸದ ತೇಜಸ್ವಿ ಸೂರ್ಯ ಅವರಿಗೂ ಸಹ ರಾಜ್ಯ ಸಚಿವ ಸ್ಥಾನ ಸಿಗಲಿದೆ ಎನ್ನಲಾಗುತ್ತಿದೆ. ಅಲ್ಲದೆ ಕಳೆದ ಬಾರಿಗೆ ಹೋಲಿಸಿದಲ್ಲಿ  ದಕ್ಷಿಣ ಭಾರತಕ್ಕೆ ಈ ಬಾರಿ ಸಚಿವ ಸ್ಥಾನಗಳು ಹೆಚ್ಚು ಸಿಗಲಿವೆ.

LEAVE A REPLY

Please enter your comment!
Please enter your name here