Weekly Horoscope: ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಶುಭ ಯಾರಿಗೆ ಅಶುಭ ಯಾರಿಗೆ?

0
164
Weekly Horoscope
Weekly Horoscope

Weekly Horoscope

ವಾರ ಭವಿಷ್ಯ

ಜೂನ್ ತಿಂಗಳ 10 ರಿಂದ 16ರವರೆ ಎರಡನೇ ವಾರ 3 ಗ್ರಹಗಳು ತಮ್ಮ ಸ್ಥಾನವನ್ನು ಬದಲಿಸಲಿವೆ.‌ ಕುಂಭದಲ್ಲಿ ಶನಿ, ಮೇಷದಲ್ಲಿ ಕುಜ, ಮಿಥುನದಲ್ಲಿ ಬುಧ ಇರಲಿದ್ದಾರೆ. ಈ ವಾರ ಯಾವ ರಾಶಿಯವರ ಫಲ ಹೇಗಿದೆ? ಇಲ್ಲಿ ತಿಳಿಯಿರಿ.

ಮೇಷ ರಾಶಿ

ಎರಡನೇ ವಾರ ಮೇಷ ರಾಶಿಗೆ ಶುಭ ಫಲವಿದೆ. ಗುರು ಉತ್ತಮ ಸ್ಥಿತಿಯಲ್ಲಿದ್ದಾನೆ. ಸಂಪತ್ತು ಕೈ ಸೇರಲಿದೆ. ಯಾವುದೇ ಕೆಲಗಳನ್ನು ಧೈರ್ಯದಿಂದ ಮಾಡುತ್ತೀರಿ. ಉದ್ಯೋಗದ ವಿಷಯದಲ್ಲಿ ಕೆಲ ಬದಲಾವಣೆಗಳು ಆಗುತ್ತವೆ. ನಿಮ್ಮ ಸಾಮರ್ಥ್ಯ ಎಲ್ಲರಿಗೂ ತಿಳಿಯುತ್ತದೆ. ಸಹಾಯ ಕೇಳಿ ಬಂದವರಿಗೆ ಸಹಾಯ ಮಾಡಿ.

ವೃಷಭ ರಾಶಿ

ಜೂನ್ ತಿಂಗಳ ಎರಡನೇ ವಾರ ವೃಷಭ ರಾಶಿಯವರಿಗೆ ಮಿಶ್ರ ಫಲವಿದೆ. ಗುರು ಉಚ್ಛನಾಗಿದ್ದರೂ ಶತ್ರುವಿನ ಮನೆಯಲ್ಲಿ ಇರುವ ಕಾರಣ ಮನಸ್ಸಿಗೆ ನೆಮ್ಮದಿ ಇರದು, ಅಧೈರ್ಯ ಕಾಡುವುದು. ಆಯುಧಗಳಿಂದ ಎಚ್ಚರವಿರಲಿ. ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಳ್ಳುವಿರಿ. ಕೆಲಸದಲ್ಲಿ ಆಸಕ್ತಿ ಕಡಿಮೆಯಾಗುವುದು.

ಮಿಥುನ ರಾಶಿ

ಮಿಥುನ ರಾಶಿಗೆ ಈ ವಾರ ಮಿಶ್ರಫಲ. ಈ ರಾಶಿಗೆ ಸೂರ್ಯ ಬುಧ ಶುಕ್ರರ ಯೋಗವಿದೆ. ಬುಧನಿಂದಾಗಿ ಮನಸ್ಸು ಶಾಂತ ರೀತಿಯಿಂದ ಇರಲಿದೆ. ಈ ವಾರ ತುಸು ಅಗೌರವಕ್ಕೆ ಪಾತ್ರರಾಗುವಿರಿ, ನಮಸ್ಸಿಗೆ ಹಚ್ಚಿಕೊಳ್ಳುವುದು ಬೇಡ. ಉದ್ಯೋಗದಿಂದ ಆದಾಯ ಹೆಚ್ಚಾಗಲಿದೆ. ಧಾರ್ಮಿಕ ಕಾರ್ಯವನ್ನು ಮಾಡುವ ಮನಸ್ಸಿದ್ದರೂ ಸಮಯ ಸಿಗದೇ ಹೋಗಬಹುದು. ದೇವರ ಸ್ಮರಣೆ ಬಿಡಬೇಡಿ.

ಯಾವ ರಾಶಿಗೆ ಶುಭ, ಯಾವ ರಾಶಿಗೆ ಅಶುಭ: ಈ ತಿಂಗಳ ಭವಿಷ್ಯ ಹೇಗಿದೆ?

ಕಟಕ ರಾಶಿ

ಕಟಕ ರಾಶಿಯವರಿಗೆ ಮಿಶ್ರಫಲ ಇದೆ.ಸಕಾರಾತ್ಮಕ ಬೆಳವಣಿಗೆಗೆ ಗುರು ಸಹಾಯ ಮಾಡಲಿದ್ದಾನೆ. ಕೆಲವು ಯೋಜನೆಗಳು ಸಫಲ ಆಗಲಿವೆ. ವಿವಿಧ ಮೂಲಗಳಿಂದ ಆದಾಯ ಲಭಿಸಲಿದೆ. ಕೆಲವು ನಷ್ಟ ಆಗುವ ಸಾಧ್ಯತೆ ಇದೆ. ವಾಹನ ಸವಾರಿ ಮಾಡಬೇಕಾದರೆ ಎಚ್ಚರ. ಬಂಧುಗಳಿಂದ ಸಹಕಾರ ಸಿಗದು, ಅತಿಯಾದ ನಂಬಿಕೆ ಬೇಡ. ಆರೋಗ್ಯದ ಎಚ್ಚರಿಕೆ ವಹಿಸಿ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಶುಭ ಫಲವಿದೆ. ಈ ವಾರ ಗಾಯವಾಗುವ ಸಂಭವ ಇದೆ. ಯಂತ್ರಗಳಿಂದಾಗಿ ಲಾಭ ಆಗಲಿದೆ. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ. ಎಚ್ಚರಿಕೆಯಿಂದ ಮಾತನ್ನಾಡಿ, ಮಾತುಗಳಿಂದ ಜಗಳ ಆಗುವ ಸಂಭವ ಇದೆ.

ಕನ್ಯಾ ರಾಶಿ

ಕನ್ಯಾ ರಾಶಿಗೆ ಈ ವಾರ ಶುಭ. ಮಾನಸಿಕವಾಗಿ ದುರ್ಬಲವಾದಂತೆ ಭಾಸವಾಗಲಿದೆ. ಹಿತಶತ್ರುಗಳ ಬಗ್ಗೆ ಎಚ್ಚರವಿರಲಿ. ಗುರು ಉತ್ತಮ ಸ್ಥಾನದಲ್ಲಿದ್ದು ಒಳಿತುಗಳೇ ಆಗುತ್ತದೆ. ಕೆಲವು ಆಸೆಗಳು ಈಡೇರಲಿವೆ. ಉದ್ಯೋಗದಲ್ಲಿ ನಿಮಗೆ ಬಡ್ತಿ ಸಿಗಲಿದೆ. ಕುಟುಂಬದೊಂದಿಗೆ ಕಾಲ ಕಳೆಯಿರಿ, ಶುಭ ಸುದ್ದಿ ಬರಲಿದೆ.

ತುಲಾ ರಾಶಿ

ಹಿರಿಯರಿಂದ ಅಪಮಾನ ಎದುರಿಸುವ ಸಾಧ್ಯತೆ ಇದೆ. ತಂದೆಯಿಂದ ಸಂಪತ್ತು ಸಿಗಲಿದೆ. ಬಂಧುಗಳ ಪ್ರೀತಿಗೆ ಪಾತ್ರರಾಗುವಿರಿ. ಶತ್ರುಗಳ ಬಗ್ಗೆ ಎಚ್ಚೆರಿಕೆ ಇರಲಿ. ಶತ್ರುಗಳಿಂದ ನಿಂದನೆಗೆ ಒಳಗಾಗುವಿರಿ.

ವೃಶ್ಚಿಕ ರಾಶಿ

ಅಧಿಕವಾದ ಶುಭಫಲ ಇರಲಿದೆ. ಶತ್ರು ವಿನಾಶ ಆಗಲಿದೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ವಿವಾಹಿತರಿಗೆ ಕೆಲವು ಸಂಕಷ್ಟ ಬರಬಹುದು. ಸಂತಾನದ ವಿಚಾರಕ್ಕೆ ಸಮಸ್ಯೆ ಬರುವುದು. ಆದಾಯ ಕಡಿಮೆ ಬರಲಿದೆ. ಆದರೆ ಪ್ರಯತ್ನವನ್ನು ಬಿಡುವುದು ಬೇಡ.

ಧನಸ್ಸು ರಾಶಿ

ಮನಸ್ಸಿಗೆ ನೆಮ್ಮದಿ ಇರಲಿದೆ. ಗ್ರಹತಗಿಗಳು ಚೆನ್ನಾಗಿ ಇರುವ ಕಾರಣ ಮಾಡಿದ ಕಾರ್ಯದಲ್ಲಿ ಸಫಲತೆ ಸಿಗಲಿದೆ. ಮಾಡಬೇಕಾದ ಕಾರ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಕೆಲಸ ಮಾಡುವ ಸ್ಥಳದಲ್ಲಿ ವಾತಾವರಣ ಬಿಗಿಯಾಗಿರಲಿದೆ. ಕುಟುಂಬದಿಂದ ದೂರವಿರಬೇಕಾದ ಸ್ಥಿತಿ ನಿರ್ಮಾಣ ಆಗಲಿದೆ. ಕೆಲವು ಅಪಮಾನಗಳನ್ನು ಎದುರಿಸಬೇಕಾದೀತು.

ಮಕರ ರಾಶಿ

ಈ ವಾರದಲ್ಲಿ ಕೆಲವು ಕೆಡುಕುಗಳು ಸಂಭವಿಸುವ ಸಾಧ್ಯತೆ ಇದೆ, ಧೃತಿಗೆಡಬೇಡಿ. ಸಣ್ನ ವಿಚಾರಕ್ಕೆ ಕೌಟುಂಬಿಕ ಕಲಹ ಆಗಲಿದೆ. ಬಗ್ಗೆ ಮಮಕಾರ ಹೆಚ್ಚಾಗುವುದು. ಬಂಧುಗಳ ಬಗ್ಗೆ ಇರುವ ಅಭಿಪ್ರಾಯ ಬದಲಾಗಲಿದೆ. ಸಂಗಾತಿಯೊಟ್ಟಿಗೆ ಜಗಳ ಆಗಬಹುದು. ಕೆಟ್ಟ ಕೆಲಸ ಮಾಡುವಂತೆ ಕೆಲವರು ಪ್ರೇರೇಪಿಸುತ್ತಾರೆ. ಹಣಕ್ಕಾಗಿ ಜಗಳ ಮಾಡಬೇಕಾಗಬಹುದು.

ಕುಂಭ ರಾಶಿ

ಕುಂಭ ರಾಶಿಗೆ ಈ ವಾರ ಶುಭ ಫಲ ಸಿಗಲಿದೆ. ಮಕ್ಕಳ ಚಿಂತೆ ಹೆಚ್ಚಾಗಲಿದೆ. ವಿದ್ಯಾರ್ಥಿಗಳಿಗೆ ಕಷ್ಟದ ವಾರವಿದು, ಹೆಚ್ಚಿನ ಶ್ರಮವನ್ನು ಹಾಕಬೇಕಾಗುತ್ತದೆ. ಬಂಧುಗಳಿಂದ ದೂರ ಇರುವ ಮನಸ್ಸಾಗುತ್ತದೆ. ಮಾತುಗಳನ್ನು ಎಚ್ಚರಿಕೆಯಿಂದ ಆಡಿರಿ, ಮಾತಿನಿಂದ ಸಮಸ್ಯೆ ಆಗಲಿದೆ. ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ ಇರಿ.

ಮೀನ ರಾಶಿ

ಮೀನ ರಾಶಿಗೆ ಮಿಶ್ರಫಲ ಇದೆ. ಕುಟುಂಬದಲ್ಲಿ ಕೆಲವು ಬದಲಾವಣೆಗಳು ಆಗಲಿವೆ. ಯಾವುದೇ ಕೆಲಸದಲ್ಲಿಯೂ ಪ್ರಾಮಾಣಿಕ ಪ್ರಯತ್ನ ಮಾಡಿರಿ ಒಳ್ಳೆಯ ಫಲ ಸಿಗಲಿದೆ. ವೈವಾಹಿಕ ವಿಚಾರದಲ್ಲಿ ಸಮಾಧಾನ ಬರಲಿದೆ. ವೃತ್ತಿಯಲ್ಲಿ ಹೆಚ್ಚು ಶಕ್ತಿಮೀರಿ ಕೆಲಸ ಮಾಡಿರಿ. ಮನಸ್ಸು ಚಂಚಲವಾಗಬಹುದು.

LEAVE A REPLY

Please enter your comment!
Please enter your name here