Leopard: ಮೋದಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಚಿರತೆ ಪ್ರತ್ಯಕ್ಷ, ಸುಳ್ಳಲ್ಲ ನಿಜ: ವಿಡಿಯೋ ಇಲ್ಲಿದೆ

0
193
Leopard

Leopard

ನಿನ್ನೆ (ಜೂನ್‌ 09) ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿ ಪ್ರಮಾಣವಚನ ಸ್ವೀಕಾರ ಮಾಡಿದರು. ಪ್ರಧಾನಿ ಮೋದಿ ಮಾತ್ರವೇ ಅಲ್ಲದೆ ಅವರೊಟ್ಟಿಗೆ ಇನ್ನು ಹಲವು ಸಂಸದರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದ ಎದುರು ಹಾಕಲಾಗಿದ್ದ ವೇದಿಕೆಯಲ್ಲಿ ಈ ಕಾರ್ಯಕ್ರಮ ನಡೆಯಿತು. ಮೋದಿ, ಅಮಿತ್‌ ಶಾ ಸೇರಿದಂತೆ ಹಲವಾರು ಮಂದಿ ಬಿಜೆಪಿ ಪ್ರಮುಖರು ಹಾಗೂ ರಾಷ್ಟ್ರಪತಿ ದ್ರೌಪತಿ ಮುರ್ಮು ರಾಷ್ಟ್ರಪತಿ ಭವನದ ಮುಂದೆ ವೇದಿಕೆಯಲ್ಲಿ ಹಾಜರಿದ್ದರು. ಈ ಸಮಯದಲ್ಲಿ ಅವರ ಹಿಂದೆಯೇ ಒಂದು ಜೀವಿ ಹಾದು ಹೋಗಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಈ ಜೀವಿ ಥೇಟ್‌ ಚಿರತೆಯಂತೆಯೇ ಕಾಣುತ್ತಿದೆ.

ಇಂದು (ಜೂನ್‌ 10) ಬೆಳಿಗಿನಿಂದಲೂ ರಾಜಭವನದಲ್ಲಿ ಚಿರತೆ ಕಂಡು ಬಂದಿದೆ ಎಂಬ ವಿಡಿಯೋ ಒಂದು ಹರಿದಾಡುತ್ತಿದೆ. ಇದನ್ನು ನೋಡಿದ ಹಲವರು ವಿಡಿಯೋ ಅನ್ನು ಫೇಕ್‌ ಎಂದಿದ್ದಾರೆ. ಆದರೆ ಆ ವಿಡಿಯೋ ಫೇಕ್‌ ಅಲ್ಲ, ಅಸಲಿ! ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ, ಜೆಪಿ ನಡ್ಡಾ, ಎಚ್‌ಡಿ ಕುಮಾರಸ್ವಾಮಿ ಇನ್ನೂ ಹಲವಾರು ಮಂದಿ ಮುಖಂಡರು ಪ್ರಮಾಣ ವಚನ ಸ್ವೀಕರಿಸಿದರು. ಅವರ ಬಳಿಕ ರಾಜ್ಯ ಖಾತೆ ಸಚಿವರಿಗೆ ಪ್ರಮಾಣ ವಚನ ಬೋಧಿಸಲಾಯ್ತು. ಸಂಸದ ದುರ್ಗಾ ದಾಸ್‌ ಪ್ರಮಾಣ ವಚನ ಸ್ವೀಕರಿಸಿ, ಸಹಿ ಹಾಕಿ ರಾಷ್ಟ್ರಪತಿ ಅವರಿಗೆ ನಮಿಸಲು ಎದ್ದಾಗ ಅವರ ಹಿಂದೆ ಅಂದರೆ ಪ್ರಧಾನಿ ಮೋದಿ ಸೇರಿದಂತೆ ಇತರರು ಕೂತಿದ್ದ ಜಾಗದಿಂದ ತುಸು ಹಿಂದೆ ನಾಲ್ಕು ಕಾಲಿನ ಪ್ರಾಣಿಯೊಂದು ಗಂಭೀರವಾಗಿ ಹಾದು ಹೋಗಿದೆ.

ಹಾಗೆ ಹಾದು ಹೋದ ಪ್ರಾಣಿ ತುಸುವೂ ಸಹ ನಾಯಿಯನ್ನು ಹೋಲುತ್ತಿಲ್ಲ ಬದಲಿಗೆ ಬೆಕ್ಕನ್ನು ಹೋಲುತ್ತಿದೆ ಆದರೆ ಬಹಳ ದೊಡ್ಡದಾಗಿದೆ. ಸರಿಯಾಗಿ ಹೇಳಬೇಕೆಂದರೆ ಥೇಟ್‌ ಚಿರತೆಯಂತೆಯೇ ಇದೆ. ವಿಡಿಯೋ ನೋಡಿದ ಹಲವರು ಅದು ಚಿರತೆಯೇ ಎಂದಿದ್ದಾರೆ. ಇನ್ನು ಕೆಲವರು ಅಲ್ಲ ಅದು ಹೆಣ್ಣು ಸಿಂಹ ಎಂದಿದ್ದಾರೆ. ಆದರೆ ಹಿಂದೆ ಹಾದು ಹೋಗಿದ್ದು ನಾಯಿ ಅಥವಾ ಬೆಕ್ಕಿರಬಹುದು ಎಂಬ ಅನುಮಾನವನ್ನು ಹೆಚ್ಚು ಜನ ವ್ಯಕ್ತಪಡಿಸಿಯೇ ಇಲ್ಲ.

ಮೋದಿ ಪ್ರಮಾಣ ವಚನಕ್ಕೆ ಚಾಮರಾಜನಗರದ ಯುವತಿಗೆ ಆಹ್ವಾನ, ಯಾರೀಕೆ?

ವಿಡಿಯೋ ಮೊದಲ ಹರಿದಾಡಿದಾಗ ಇದು ಫೇಕ್‌ ಇರಬಹುದು ಎಂದು ಕೆಲವರು ಹೇಳಿದ್ದರು. ʼನ್ಯೂಸ್‌ 24 ಕನ್ನಡʼ ತಂಡ ನಿನ್ನೆ ಹಲವು ಚಾನೆಲ್‌ಗಳಲ್ಲಿ ಪ್ರಸಾರವಾಗಿದ್ದ ಸುಮಾರು 3 ಗಂಟೆಯ ಲೈವ್‌ ವಿಡಿಯೋವನ್ನು ಮತ್ತೆ ರಿವೈಂಡ್‌ ಮಾಡಿ ನೋಡಿದಾಗ ಸಂಸದ ದುರ್ಗಾ ದಾಸ್‌ ಪ್ರಮಾಣ ವಚನದ ಸಮಯದಲ್ಲಿ ಆ ಚಿರತೆಯನ್ನು ಹೋಲುವ ಪ್ರಾಣಿ ಹಾದು ಹೋಗಿರುವ ದೃಶ್ಯ ಲೈವ್‌ ವಿಡಿಯೋನಲ್ಲಿಯೂ ರೆಕಾರ್ಡ್‌ ಆಗಿದ್ದನ್ನು ಗುರುತಿಸಿದೆ. ಬಿಜೆಪಿ ಪಕ್ಷವು ತನ್ನ ಅಧಿಕೃತ ಚಾನೆಲ್‌ನಲ್ಲಿ ನಿನ್ನೆಯ ಕಾರ್ಯಕ್ರಮದ ಲೈವ್‌ ವಿಡಿಯೋ ಹಂಚಿಕೊಂಡಿತ್ತು, ಅದಿನ್ನೂ ಸಹ ಅದರ ಟ್ವಿಟ್ಟರ್‌ ಫೀಡ್‌ ನಲ್ಲಿದೆ. ಪರೀಕ್ಷಿಸಲಿಚ್ಚಿಸುವವರು ಬಿಜೆಪಿಯ ಟ್ವಿಟ್ಟರ್‌ ಖಾತೆಗೆ ಹೋಗಿ ಆ ವಿಡಿಯೋದ 2 ಗಂಟೆ 13 ನಿಮಿಷಕ್ಕೆ ಫಾಸ್ಟ್‌ ಫಾರ್ವರ್ಡ್‌ ಮಾಡಿದರೆ ಆ ಪ್ರಾಣಿ ಹಾದು ಹೋಗುವುದು ಕಾಣುತ್ತದೆ.

ಪ್ರಮಾಣ ವಚನ ಸ್ವೀಕರಿಸುವಾಗ ಹಾದು ಹೋದ ಆ ಪ್ರಾಣಿ ಯಾವುದು ಚಿರತೆಯಾ? ಅಥವಾ ಬೇರೆ ಯಾವುದಾದರೂ ಪ್ರಾಣಿಯಾ ಎಂಬ ಬಗ್ಗೆ ರಾಷ್ಟ್ರಪತಿ ಭವನದಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ.

LEAVE A REPLY

Please enter your comment!
Please enter your name here