Darshan Thoogudeepa: ಹಾಗೂ ಗ್ಯಾಂಗ್ ಗೆ ಶಿಕ್ಷೆ ಆಗುತ್ತ? ವಕೀಲರು ಹೇಳುವುದೇನು?

0
161
Darshan Thoogudeepa 

Darshan Thoogudeepa

ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಕೊಲೆ ಆರೋಪದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಮತ್ತು ಇತರೆ 11 ಮಂದಿಯ ಬಂಧನವಾಗಿದೆ. ದರ್ಶನ್ ಗೆ ಜೈಲು, ಪೊಲೀಸ್ ಪ್ರಕರಣ ಹೊಸದೇನು ಅಲ್ಲ. ಆದರೆ ಯಾವ ಪ್ರಕರಣದಲ್ಲೂ ಸಹ ಶಿಕ್ಷೆ ಆಗಿಲ್ಲ. ಈ ಪ್ರಕರಣವೂ ಹಾಗೆಯೇ ಆಗಲಿದೆಯೇ? ಅಥವಾ ಕೊಲೆ ಹಾಗೂ ಅಪಹರಣ ಪ್ರಕರಣದಲ್ಲಿ ಶಿಕ್ಷೆ ಆಗಲಿದೆಯೇ? ವಕೀಲರು ಹೇಳುತ್ತಿರುವುದೇ ಬೇರೆ.

ದರ್ಶನ್ ಬಂಧನವಾಗುತ್ತಿದ್ದಂತೆ ನಟಿ ರಮ್ಯಾ ಟ್ವೀಟ್ ಒಂದನ್ನು ರೀಟ್ವೀಟ್ ಮಾಡಿದ್ದರು. ರಮ್ಯಾ ಹಂಚಿಕೊಂಡಿದ್ದ ಟ್ವೀಟ್ ನಲ್ಲಿ ಮಟ ದರ್ಶನ್ ಗೆ ಸೆಕ್ಷನ್ 302 ಅಡಿಯಲ್ಲಿ ದರ್ಶನ್ ಗೆ ಜೀವಾವಧಿ ಅಥವಾ ಮರಣದಂಡನೆ ಶಿಕ್ಷೆ ಆಗಲಿದೆ ಎಂಬ ಅಭಿಪ್ರಾಯ ಹೊರಹಾಕಿದ್ದರು. ಆದರೆ ಇದು ಜಾರಿಯಾಗಲು ಕೆಲವು ಕಾನೂನು ತೊಡಕುಗಳಿವೆ ಎನ್ನುತ್ತಾರೆ ವಕೀಲರು.

ಇದು ಕೊಲೆಯೇ ಹೌದಾದರೂ ಇದು ನೇರವಾಗಿ ಐಪಿಸಿ ಸೆಕ್ಷನ್ 302 ರ ಅಡಿಗೆ ಬರುವುದಿಲ್ಲ ಎನ್ನುತ್ತಾರೆ ಅನುಭವಿ ವಕೀಲ ಪ್ರಕಾಶ್. ಅವರು ಹೇಳುವಂತೆ, ‘ಇದು ಕೊಲೆ ನಿಜ ಆದರೆ ಮೇಲ್ನೋಟಕ್ಕೆ ಇದು ಉದ್ದೇಶಪೂರ್ವಕ ಕೊಲೆ ಎನಿಸುವುದಿಲ್ಲ. ರೇಣುಕಾ ಸ್ವಾಮಿಯನ್ನು ಕೊಲೆ ಮಾಡುವ ಉದ್ದೇಶದಿಂದಲೇ ಶೆಡ್ ಗೆ ತರಲಾಗಿರಲಿಲ್ಲ ಬದಲಿಗೆ ಚೆನ್ನಾಗಿ ಹೊಡೆದು ‘ಬುದ್ಧಿ ಕಲಿಸುವ’ ಯೋಜನೆಯಿಂದ ಅಪಹರಿಸಿ ತರಲಾಗಿತ್ತು ಅನಿಸುತ್ತಿದೆ. ದರ್ಶನ್ ಸಹ ಪೊಲೀಸರ ಬಳಿ ಇದನ್ನೇ ಹೇಳಿದ್ದಾರೆ. ಆದರೆ ಹೊಡೆತ ತಿಂದ ರೇಣುಕಾ ಸ್ವಾಮಿ ಸಾವನ್ನಪ್ಪಿದ್ದಾನೆ. ಹಾಗಾಗಿ ಇದು ಜೀವ ತೆಗೆಯುವ ಉದ್ದೇಶದಿಂದಲೇ ಮಾಡಿರುವ ಕೊಲೆ ಎಂದಾಗುವುದಿಲ್ಲ’ ಎಂದಿದ್ದಾರೆ.

ಕೊಲೆ ಆರೋಪಿ ನಟ ದರ್ಶನ್ ಬಂಧನ, ಘಟನೆಯ ಪೂರ್ಣ ವಿವರ ಇಲ್ಲಿದೆ

ದರ್ಶನ್ ಸಹ ಪೊಲೀಸರ ಎದುರು ನೀಡಿರುವ ಪ್ರಾಥಮಿಕ ಹೇಳಿಕೆಯಲ್ಲಿ, ತಾವು ಕೊಲೆ ಮಾಡುವ ಉದ್ದೇಶ ಹೊಂದಿರಲಿಲ್ಲ. ಹೆದರಿಸಿ ಬಿಟ್ಟು ಕಳಿಸುವ ಉದ್ದೇಶ ಹೊಂದಿದ್ದಾಗಿ ಹೇಳಿದ್ದಾರೆ. ಹಾಗಾಗಿ ಇದು 302 ಅಡಿಗೆ ಬರುವುದಿಲ್ಲ ಎನಿಸುತ್ತದೆ, ಬದಲಿಗೆ 304 AA, ಅಥವಾ 304 B ಅಡಿ ಬರುತ್ತದೆ. ಈ ಸೆಕ್ಷನ್ ಅಡಿಯಲ್ಲಿ ಎರಡು ವರ್ಷ ಮಾತ್ರವೇ ಶಿಕ್ಷೆ ಆಗುತ್ತದೆ. ಜೊತೆಗೆ ದಂಡವೂ ಇರಲಿದೆ ಎನ್ನುತ್ತಾರೆ ವಕೀಲ ಪ್ರಕಾಶ್.

ಇನ್ನು ದರ್ಶನ್ ಮೇಲೆ ಅಪಹರಣದ ಪ್ರಕರಣವೂ ದಾಖಲಾಗಿದೆ. ಈ ಪ್ರಕರಣದಲ್ಲಿ ಸುಮಾರು ಏಳು ವರ್ಷಗಳ‌ ಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ. ಪವಿತ್ರಾ ಗೌಡಗೂ ಇದೇ ಪ್ರಮಾಣದ ಶಿಕ್ಷೆ ಆಗಬಹುದಾಗಿದೆ ಎನ್ನುತ್ತಾರೆ ವಕೀಲರು.

LEAVE A REPLY

Please enter your comment!
Please enter your name here