Renuka Swamy: ಕೊಲೆಗೆ ಕಾರಣವಾದ ಆ ಸಂದೇಶ ಯಾವುದು? ದರ್ಶನ್ ಸಿಟ್ಟು ಬರಲು ಕಾರಣವೇನು?

0
198
Renuka Swamy

Renuka Swamy

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿ ಎರಡು ದಿನಗಳಾಯ್ತು. ದರ್ಶನ್ ಜೊತೆ ಪವಿತ್ರಾ ಗೌಡ ಹಾಗೂ ಇನ್ನೂ 11 ಮಂದಿ ಸಹ ಜೈಲು ಪಾಲಾಗಿದ್ದಾರೆ. ದರ್ಶನ್ ಪ್ರೇಯಸಿ ಪವಿತ್ರಾ ಗೌಡಗೆ ಸಂದೇಶ ಕಳಿಸಿದ್ದರಿಂದಲೇ ರೇಣುಕಾ ಸ್ವಾಮೊಯ ಕೊಲೆ ಆಗಿದೆ ಎಂಬುದು ಬಹಿರಂಗವಾಗಿದೆ ಆದರೆ ರೇಣುಕಾ ಸ್ವಾಮಿ ಕಳಿಸಿದ ಯಾವ ಸಂದೇಶ ಪವಿತ್ರಾ ಗೌಡ ಹಾಗೂ ದರ್ಶನ್ ಗೆ ಅಷ್ಟು ಸಿಟ್ಟು ತರಿಸಿತು, ಒಬ್ಬ ವ್ಯಕ್ತಿಯ ಕೊಲೆಗೆ ಕಾರಣವಾಯ್ತು? ಇಲ್ಲಿದೆ ಮಾಹಿತಿ.

ಈಗಾಗಲೆ ತಿಳಿದಿರುವಂತೆ ಕೊಲೆಯಾದ ರೇಣುಕಾ ಸ್ವಾಮಿ ದರ್ಶನ್ ಅಭಿಮಾನಿಯೇ ಆಗಿದ್ದ. ಕೌಟುಂಬಿಕ ಮೌಲ್ಯಗಳಲ್ಲಿ ನಂಬಿಕೆ ಇರಿಸಿದ್ದ ರೇಣುಕಾ ಸ್ವಾಮಿಗೆ, ದರ್ಶನ್ ಹಾಗೂ ವಿಜಯಲಕ್ಷ್ಮಿ ದಾಂಪತ್ಯದಲ್ಲಿ ಬಿರುಕು ಮೂಡಲು ಕಾರಣವಾಗಿರುವ ಪವಿತ್ರಾ ಗೌಡ ಬಗ್ಗೆ ಸಿಟ್ಟಿತ್ತು ಹಾಗಾಗಿ ಪವಿತ್ರಾರನ್ನು ಸಾಮಾಜಿಕ ಜಾಲತಾಣಗಳಲ್ಲಿ ರೆಣುಕಾ ಸ್ವಾಮಿ ನಿಂದಿಸುತ್ತಿದ್ದ.

https://samasthanews.com/who-is-darshan-thoogudeepa-love-intrest-pavithra-gowda-what-is-her-background/

ಪವಿತ್ರಾಗೆ ಸಿಟ್ಟಿನ ಕಟ್ಟೆ ಒಡೆಯಲು ಕಾರಣವಾಗಿದ್ದು ರೇಣುಕಾ ಸ್ವಾಮಿ ಕಳಿಸಿದ್ದ ಒಂದು ಸಂದೇಶ. ತನ್ನ ಗುಪ್ತಾಂಗದ ಚಿತ್ರವನ್ನು ಪವಿತ್ರಾಗೆ ಕಳಿಸಿದ್ದ ರೇಣುಕಾ ಸ್ವಾಮಿ, ‘ದರ್ಶನ್ ಗಿಂತಲೂ ನಾನೇನು ಕಮ್ಮಿಯಿಲ್ಲ ಬಾ’ ಎಂದಿದ್ದನಂತೆ ಈ ಸಂದೇಶ ಕಂಡು ಕೆರಳಿದ್ದ ಪವಿತ್ರಾ ಗೌಡ, ನೇರವಾಗಿ ದರ್ಶನ್ ಬಳಿ ಈ ವಿಷಯವನ್ನು ಹೇಳಿರಲಿಲ್ಲ. ದರ್ಶನ್ ನ ಸಿಟ್ಟಿನ ಅರಿವಿದ್ದ ಪವಿತ್ರಾ, ದರ್ಶನ್ ನ ಆಪ್ತ ಪವನ್ ಗೆ ವಿಷಯ ಮುಟ್ಟಿಸಿದ್ದಾರೆ.

ಆದರೆ ಪವನ್, ಈ ವಿಷಯವನ್ನು ದರ್ಶನ್ ಗೆ ಹೇಳಿದ್ದಾರೆ. ರೇಣುಕಾ ಸ್ವಾಮಿ ಕಳೊಸಿದ್ದ ಸಂದೇಶಗಳನ್ನು ಕಂಡು ಕೆರಳಿದ ದರ್ಶನ್, ಚಿತ್ರದುರ್ಗದ ತನ್ನ ಅಭಿಮಾನಿ ಸಂಘದ ಅಧ್ಯಕ್ಷನಿಗೆ ಹೇಳಿ ರೇಣುಕಾ ಸ್ವಾಮಿಯನ್ನು ಅಪಹರಿಸಲು ಹೇಳಿದ್ದಾರೆ. ಅಂತೆಯೇ ಒಂದು ವಾರಗಳ ಕಾಲ ರೇಣುಕಾ ಸ್ವಾಮಿಯ ಫಾಲೋ ಮಾಡಿ ಫೋನ್‌ ನಂಬರ್ ಸಂಪಾದಿಸಿ ಹುಡುಗಿಯ ರೀತಿ ಮಾತನಾಡಿ ಸ್ಥಳವೊಂದಕ್ಕೆ ಕರೆಸಿಕೊಂಡು ಅಲ್ಲಿಂದ ಆತನನ್ನು ಅಪಹರಿಸಿ ಬೆಂಗಳೂರಿಗೆ ಕರೆತರಲಾಗಿದೆ. ಆಮೇಲೆ ನಡೆದಿದ್ದು ಬಹುತೇಕ ಓದುಗರಿಗೆ ಗೊತ್ತೆ ಇದೆ.

LEAVE A REPLY

Please enter your comment!
Please enter your name here