Mumbai Doctor
ಆನ್ ಲೈನ್ ನಲ್ಲಿ ಆಹಾರ ಡಿಲೆವರಿ ಮಾಡುವವರು ಹೆಚ್ಚೇಂದರೆ ಎಂಥಹಾ ತಪ್ಪು ಮಾಡಬಹುದು? ವೆಜ್ ಆರ್ಡರ್ ಮಾಡಿದವರಿಗೆ ನಾನ್ ವೆಜ್, ನಾನ್ ವೆಜ್ ಆರ್ಡರ್ ಮಾಡಿದವರಿಗೆ ವೆಜ್ ಹೀಗೆ ಕಣ್ತಪ್ಪಿನಿಂದ ಅದಲು ಬದಲು ಮಾಡಿಬಿಡಬಹುದು. ಆದರೆ ಮುಂಬೈನ ವ್ಯಕ್ತಿಯೊಬ್ಬನಿಗೆ ತಾನು ಆರ್ಡರ್ ಮಾಡಿದ ಆಹಾರದಲ್ಲಿ ಮನುಷ್ಯನ ಅಂಗ ಸಿಕ್ಕಿದೆ!
ಮುಂಬೈನ ಮಲಾಡ್ ಏರಿಯಾನಲ್ಲಿ ಈ ಭೀಬತ್ಸಕರ ಮತ್ತು ಅಸಹ್ಯಕರ ಘಟನೆ ನಡೆದಿದೆ. ಮಲಾಡ್ ಏರಿಯಾದ ಯುವ ವೈದ್ಯ ಬ್ರೆಂಡೆನ್ ಪೆರಾವ್ ಎಂಬುವರು ಆನ್ ಲೈನ್ ನಲ್ಲಿ ಮೂರು ಕೋನ್ ಐಸ್ ಕ್ರೀಂಗಳನ್ನು ಆರ್ಡರ್ ಮಾಡಿದ್ದರು. ಅದರಲ್ಲಿ ಒಂದು ಯೆಮೊ ಬ್ರ್ಯಾಂಡ್ ನ ಬಟರ್ ಸ್ಕಾಚ್ ಐಸ್ ಕ್ರೀಂ ಆಗಿತ್ತು. ಬಟರ್ ಸ್ಕಾಚ್ ಐಸ್ ಕ್ರೀಂ ಅನ್ನು ಬ್ರೆಂಡನ್ ತಿನ್ನಬೇಕಾದರೆ ದವಡೆಗೆ ಏನೋ ತುಸು ದಪ್ಪನೆಯ ವಸ್ತು ತಗುಲಿದೆ. ಏನಿರಬಹುದೆಂದು ಹೊರಗೆ ತೆಗೆದರೆ ತುಸು ಕಪ್ಪಗಿನ ವಸ್ತು ಅದಾಗಿತ್ತು. ಮೊದಲಿಗೆ ಬ್ರೆಂಡೆನ್ ಅದು ಚಿಕನ್ ಪೀಸ್ ಇರಬಹುದು ಎಂದುಕೊಂಡಿದ್ದಾರೆ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಅದು ಮನುಷ್ಯನ ಬೆರಳು ಎಂಬುದು ಗೊತ್ತಾಗಿದೆ.
https://samasthanews.com/two-year-old-boys-painting-sold-for-5-83-lakh-rs/
ವಿಡಿಯೋದಲ್ಲಿ ಬ್ರೆಂಡೆನ್ ಹೇಳಿರುವಂತೆ ‘ನನಗೆ ಮೊದಲು ಉಗುರು ಕಾಣಿಸಿತು, ಮತಗತಷ್ಟು ಸೂಕ್ಷ್ಮವಾಗಿ ಗಮನಿಸಿದಾಗ ಬೆರಳಿನ ಅಚ್ಚುಗಳು ಸಹ ಕಾಣಿಸಿದವು. ಅದನ್ನು ಕಂಡು ನಾನು ಹೌಹಾರಿಬಿಟ್ಟೆ, ವೈದ್ಯನಾಗಿರುವ ನನಗೆ ಮನುಷ್ಯನ ಅಂಗಗಳು ಕತ್ತರಿಸಿದಾಗ ಹೇಗೆ ಇರುತ್ತವೆ ಎಂಬ ಅರಿವಿದೆ. ಆ ಬೆರಳು ನೋಡಿದ ಕೂಡಲೆ ಗಾಬರಿಯಾದೆ. ಆದರೂ ಕೂಡಲೆ ಸಾವರಿಸಿಕೊಂಡು ಆ ಬೆರಳಿನ ತುಂಡನ್ನು ನಾನು ಐಸ್ ನಲ್ಲಿ ಇಟ್ಟು ಶೀಥಲೀಕರಣ ಮಾಡಿದೆ’ ಎಂದಿದ್ದಾರೆ.
ಬ್ರೆಂಡನ್ ಐಸ್ ನಲ್ಲಿಟ್ಟಿದ್ದ ಬೆರಳಿನ ತುಂಡನ್ನು ಪೊಲೀಸರಿಗೆ ನೀಡಿದ್ದು , ಐಸ್ ಕ್ರೀಂ ಸಂಸ್ಥೆಯ ಮೇಲೆ ಪ್ರಕರಣ ದಾಖಲಾಗಿ ಫ್ಯಾಕ್ಟರಿಯನ್ನು ಬಂದ್ ಮಾಡಲಾಗಿದೆ. ಆ ಬೆರಳಿನ ತುಂಡು ಐಸ್ ಕ್ರೀಂ ಫ್ಯಾಕ್ಟರಿ ಕೆಲಸಗಾರನದ್ದೊ ಅಥವಾ ಯಾರದ್ದೊ ಕೊಲೆಯಾದ ವ್ಯಕ್ತಿಯದ್ದೋ ತನಿಖೆಯಿಂದ ಬೆಳಕಿಗೆ ಬರಬೇಕಿದೆ. ಆದರೆ ಈ ಘಟನೆ ಹೊರಬಂದ ಬಳಿಕ ಆನ್ ಲೈನ್ ನಿಂದ ಆರ್ಡರ್ ಮಾಡಲು ಭಯ ಪಡುವಂತಾಗಿದೆ ಗ್ರಾಹಕರು.