Income Tax department: ದರ್ಶನ್ ಗೆ ಮತ್ತೊಂದು ಸಂಕಷ್ಟ, ಕೇಂದ್ರ ತನಿಖಾ ಸಂಸ್ಥೆಯಿಂದ ತನಿಖೆ

0
175
Income Tax department

Income Tax Department

ರೇಣುಕಾ ಕೊಲೆ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ದರ್ಶನ್ ಗೆ ಹೊಸ ಸಂಕಷ್ಟ ಎದುರಾಗಿದೆ. ಈಗಾಗಲೇ ಕಾಮಾಕ್ಷಿಪಾಳ್ಯ ಪೊಲೀಸರ ತನಿಖೆ ಬಲೆಯಲ್ಲಿ ಸಿಲುಕಿ ನರಳುತ್ತಿರುವ ದರ್ಶನ್ ಈಗ ಕೇಂದ್ರ ತನಿಖಾ ಸಂಸ್ಥೆಯಿಂದಲೂ ತನಿಖೆ ಮತ್ತು ವಿಚಾರಣೆ ಎದುರಿಸಬೇಕಾಗಿದೆ.

ರೇಣುಕಾ ಸ್ವಾಮಿ ಕೊಲೆಯನ್ನು ಮುಚ್ಚಿ ಹಾಕಲು ಯತ್ನಿಸಿ ಕೊಟ್ಟಿದ್ದಾರೆ ಎನ್ನಲಾಗುತ್ತಿರುವ ಹಣ ಈಗ ದರ್ಶನ್ ಗೆ ಮುಳುವಾಗಿದೆ. ಹಣದ ಮೂಲದ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗ ಇದೇ ವಿಷಯವಾಗಿ ಆದಾಯ ತೆರಿಗೆ (ಐಟಿ) ಸಹ ತನಿಖೆ ನಡೆಸಲಿದೆ.

https://samasthanews.com/darshan-thoogudeepa-case-what-all-happened-in-court-on-june-20/

ರೇಣುಕಾ ಸ್ವಾಮಿಯ ಶವ ಎಸೆದು, ಕೊಲೆ ಆರೋಪವನ್ನು ತಮ್ಮ ಮೇಲೆ ಎಳೆದುಕೊಳ್ಳಲು ನಾಲ್ವರಿಗೆ 30 ಲಕ್ಷ ರೂಪಾಯಿ ಹಣವನ್ನು ದರ್ಶನ್ ನೀಡಿದ್ದರು ಎನ್ನಲಾಗಿದ್ದು, ತನಿಖೆ ವೇಳೆ ಈ ಹಣವನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಅದಾದ ಬಳುಕ ದರ್ಶನ್ ರ ಮನೆಗೆ ಮಹಜರಿಗೆ ತೆರಳಿದ್ದ ವೇಳೆ ದರ್ಶನ್ ರ ಕೋಣೆಯಲ್ಲಿದ್ದ 37.40 ಲಕ್ಷ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಅದಾದ ಬಳಿಕ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಪೊಲೀಸ್ ಠಾಣೆಗೆ ವಿಚಾರಣೆಗೆಂದು ಬಂದಾಗ ಅವರು ಮೂರು ಲಕ್ಷ ಹಣವನ್ನು ಪೊಲೀಸರ ಸುಪರ್ಧಿಗೆ ಒಪ್ಪಿಸಿದ್ದಾರೆ. ಈ ಮೂರು ಲಕ್ಷ ಹಣವನ್ನು ದರ್ಶನ್, ತನ್ನ ಸಹಾಯಕನಿಂದ ವಿಜಯಲಕ್ಷ್ಮಿ ಅವರಿಗೆ ಕೊಡಿಸಿದ್ದರಂತೆ, ಕೊಲೆ ಆದ ಮರುದಿನ. ಹಾಗಾಗಿ ಈ ಹಣವನ್ನು ವಿಜಯಲಕ್ಷ್ಮಿ ಅವರೇ ಪೊಲೀಸರಿಗೆ ಒಪ್ಪಿಸಿದ್ದಾರೆ.

ನಿಯಮದಂತೆ ಯಾವುದೇ ಪ್ರಕರಣದಲ್ಲಿ 10 ಲಕ್ಷಕ್ಕಿಂತಲೂ ಹೆಚ್ಚು ಹಣ ವಶಪಡಿಸಿಕೊಂಡಲ್ಲಿ ಅದರ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಗೆ ನೀಡಬೇಕು. ಈ ಪ್ರಕರಣದಲ್ಲಿ ಈ ವರೆಗೆ ಬರೋಬ್ಬರಿ 70.40 ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಹಾಗಾಗಿ ಪೊಲೀಸರು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ರವಾನಿಸಿದ್ದು, ಆದಾಯ ತೆರಿಗೆ ಇಲಾಖೆಯು ತನಿಖೆಯನ್ನು ಕೈಗೆತ್ತಿಕೊಳ್ಳಲಿದೆ.

ಕೃತ್ಯಕ್ಕೆ ಬಳಸಿದ ಹಣದ ಮೂಲ ಹುಡುಕುವ ಜೊತೆಗೆ, ದರ್ಶನ್ ರ ಈ ಹಿಂದಿನ ಹಣಕಾಸು ವ್ಯವಹಾರಗಳ ತನಿಖೆಯೂ ಆಗುವ ಸಂಭವ ಇದ್ದು, ಯಾವುದಾದರೂ ಆರ್ಥಿಕ ಅಪರಾಧದಲ್ಲಿ ಭಾಗಿಯಾಗಿದ್ದಲ್ಲಿ ಅದು ಹೊರ ಬರುವ ಸಾಧ್ಯತೆ ಇದೆ. ಯಾವುದಾದರೂ ರೌಡಿ ಆಸಾಮಿಗಳೊಟ್ಟಿಗೆ ಹಣ ಸಂಪರ್ಕ ಇಟ್ಟುಕೊಂಡಿದ್ದಲ್ಲಿ ಅದರ ವಿಷಯವೂ ಹೊರ ಬೀಳಲಿದೆ.

LEAVE A REPLY

Please enter your comment!
Please enter your name here