Karnataka Government
ಇತ್ತೀಚೆಗಷ್ಟೆ ಇಂಧನ ತೆರಿಗೆ ಏರಿಸಿ ತೀವ್ರ ಜನಾಕ್ರೋಶಕ್ಕೆ ಗುರಿಯಾಗಿದ್ದ ರಾಜ್ಯ ಸರ್ಕಾರ ಈಗ ಕುಡುಕರಿಗೆ ಶುಭ ಸುದ್ದಿ ನೀಡಿದೆ. ಅಪರೂಪಕ್ಕೆ ಅಬಕಾರಿ ತೆರಿಗೆ ತಗ್ಗಿಸುವ ಮೂಲಕ ಮದ್ಯದ ಬೆಲೆ ಇಳಿಕೆ ಮಾಡಿದೆ. ಆದರೆ ಹೊಸ ಆದೇಶ ಜಾರಿ ಆಗಲು ಮದ್ಯ ಪ್ರಿಯರು ಇನ್ನೂ ಕೆಲವು ದಿನಗಳ ಕಾಲ ಕಾಯಬೇಕಿದೆ.
ಆದರೆ ಈ ಬೆಲೆ ಇಳಿಕೆ ಎಲ್ಲ ಬ್ರ್ಯಾಂಡ್ ನ ಮದ್ಯಗಳಿಗೂ ಅನ್ವಯಿಸುವುದಿಲ್ಲ. ಬದಲಿಗೆ ಹೈ ಎಂಡ್ ಮದ್ಯ ಹಾಗೂ ಬಿಯರ್ ಗಳ ಬೆಲೆಯಷ್ಟೆ ಇಳಿಕೆ ಆಗಲಿದೆ. ಬಿಯರ್ ಬೆಲೆ ಬಾಟಲಿಗೆ ಕನಿಷ್ಟ ಐದು ರೂಪಾಯಿಗಳು ಕಡಿಮೆ ಆಗುವ ಸಾಧ್ಯತೆ ಇದೆ. ಪ್ರೀಮಿಯಂ ಬಿಯರ್ ಬೆಲೆಯಲ್ಲಿಯೂ ಇಳಿಕೆ ಆಗಲಿದೆ.
ಅಲ್ಲದೆ 5000 ಸಾವಿರ ರೂಪಾಯಿ ಬೆಲೆಯ ಮದ್ಯದ ಬಾಟಲಿ ಬೆಲೆ 3800 ಅಥವಾ 4000 ಕ್ಕೆ ದೊರಕಲಿದೆ. ಕಡಿಮೆ ದರದ ಮದ್ಯ ಪಡೆಯಲಿ ರಾಜ್ಯದ ಜನ ನೆರೆ ರಾಜ್ಯಗಳಿಗೆ ತೆರಳುತ್ತಿದ್ದರು ಹಾಗಾಗಿ ರಾಜ್ಯದಲ್ಲಿಯೇ ಮದ್ಯ ಖರೀದೊ ಹೆಚ್ಚಳವಾಗಲಿ ಮತ್ತು ನೆರೆಯ ಕೆಲವು ರಾಜ್ಯಗಳಲ್ಲಿ ದುಬಾರಿ ಬೆಲೆಗೆ ಮದ್ಯ ಮಾರಾಟವಾಗುತ್ತಿದ್ದು ಆ ರಾಜ್ಯದ ಪ್ರವಾಸಿಗರನ್ನು ಆಕರ್ಷಿಸಲು ಈ ನಿರ್ಣಯವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ.
ಲಕ್ಷುರಿ ಮತ್ತು ಸೆಮಿ ಲಕ್ಷುರಿ ಬ್ರ್ಯಾಂಡ್ ನ ಮದ್ಯದ ಬೆಲೆಯಲ್ಲಿ ಮಾತ್ರವೇ ಇಳಿಕೆ ಆಗಲಿದ್ದು, ಕಡಿಮೆ ಬೆಲೆಯ ಮದ್ಯದ ಬೆಲೆ ಯಥಾವತ್ತು ಮುಂದುವರೆಯಲಿದೆ. ಸರ್ಕಾರದ ಆದೇಶವು ಜುಲೈ 1 ರಿಂದ ಜಾರಿ ಆಗಲಿದೆ. ಆಗ ಯಾವ ಮದ್ಯದ ಬೆಲೆ ಎಷ್ಟು ಇಳಿಕೆ ಆಗಿದೆ ಎಂದು ಸ್ಪಷ್ಟವಾಗಿ ತಿಳಿಯಲಿದೆ.