Bengaluru Hotel: ಬಿಸಿ ಊಟ ಕೊಡಲಿಲ್ಲವೆಂದು ಕೋರ್ಟ್ ಮೆಟ್ಟಿಲೇರಿದ ಗ್ರಾಹಕ, ಬೆಂಗಳೂರಿನ ಹೋಟೆಲ್ ಗೆ ದಂಡ

0
177
Bengaluru Hotel

Bengaluru Hotel

ಹಲವು ಹೋಟೆಲ್ ಗಳಲ್ಲಿ ದಿನದ 24 ಗಂಟೆಯೂ ಬಿಸಿ ಊಟವೇನು ದೊರೆಯುವುದಿಲ್ಲ. ದೋಸೆ, ಪೂರಿ ಅಂಥಹಾ ಆರ್ಡರ್ ನೀಡಿದ ಮೇಲೆ ತಯಾರಿಸುವ ಖಾದ್ಯಗಳ ಹೊರತಾಗಿ ಬೇರೆ ಖಾದ್ಯಗಳು ದಿನದ ಎಲ್ಲ ಸಮಯದಲ್ಲಿಯೂ ಬಿಸಿ-ಬಿಸಿಯಾಗಿಯೇ ಗ್ರಾಹಕರ ತಟ್ಟೆ ತಲುಪುತ್ತವೆ ಎನ್ನಲಾಗದು. ಆದರೆ ಇದು ನಿಯಮದ ಪ್ರಕಾರ ತಪ್ಪು. ಹೋಟೆಲ್ ನಲ್ಲಿ ಗ್ರಾಹಕರಿಗೆ ಬಿಸಿಯಾದ ಊಟ ಕೊಡಬೇಕೆನ್ನುವ ನಿಯಮವಿದೆ. ಅದನ್ನು ಉಲ್ಲಂಘಿಸಿದ ಬೆಂಗಳೂರಿನ ಹೋಟೆಲ್ ಒಂದಕ್ಕೆ ದಂಡ ವಿಧಿಸಲಾಗಿದೆ.

https://samasthanews.com/two-year-old-boys-painting-sold-for-5-83-lakh-rs/

ಬೆಂಗಳೂರಿನ ಕೋರಮಂಗಲ‌ ನಿವಾಸಿ 56 ವರ್ಷದ ತಾರಾ, ತಮ್ಮ ಕುಟುಂಬದೊಂದಿಗೆ ಜುಲೈ 30, 2022 ರಂದು ಹಾಸನಕ್ಕೆ ತೆರಳುತ್ತಿದ್ದರು. ಬೆಂಗಳೂರಿನ ಹೊರಬಲಯದ ಉಡುಪಿ ಗ್ರ್ಯಾಂಡ್ ಹೋಟೆಲ್ ನಲ್ಲಿ ಊಟಕ್ಕಾಗಿ ನಿಲ್ಲಿಸಲಾಯ್ತು. ಆ ದಿನ ಹೋಟೆಲ್ ನವರು ಬಿಸಿ ಇರದ, ಫ್ರೆಶ್ ಅಲ್ಲದ ಅಡುಗೆಯನ್ನು ತಾರಾ ಹಾಗೂ ಕುಟುಂಬಕ್ಕೆ ಸರ್ವ್ ಮಾಡಿದ್ದರು. ಬೇರೆ ಊಟ ನೀಡುವಂತೆ ಗ್ರಾಹಕರು ಕೇಳಿದಾಗ ಹೋಟೆಲ್ ಸಿಬ್ಬಂದಿ ಕೆಟ್ಟದಾಗಿ ವರ್ತಿಸಿದ್ದರು.

ಇದರಿಂದಾಗಿ ತಾರಾ, ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು. ಬಿಸಿ ಇಲ್ಲದ, ಫ್ರೆಶ್ ಅಲ್ಲದ ಊಟವನ್ನು ಹೋಟೆಲ್ ನವರು ನೀಡಿದ್ದರು, ಬದಲಾವಣೆಗೆ ಬೇಡಿಕೆ ಇಟ್ಟರೂ ನೀಡಲಿಲ್ಲ, ಇದರಿಂದ ಮಧುಮೇಹ ಹಾಗೂ ರಕ್ತದೊತ್ತಡದ ರೋಗಿಯಾಗಿದ್ದ ನನಗೆ ಸಮಸ್ಯೆ ಆಗಿತ್ತು ಎಂದು ದೂರಿನಲ್ಲಿ ಹೇಳಿದ್ದರು.

ಪ್ರಕಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಗ್ರಾಹಕರ ವೇದಿಕೆಯು ಇದೇ  ಜೂನ್ 19 ರಂದು ತೀರ್ಪು ಪ್ರಕಟಿಸಿದ್ದು, ಹೋಟೆಲ್ ಗೆ 5000 ದಂಡ ವಿಧಿಸಿರುವ ಜೊತೆಗೆ 2000 ರೂಪಾಯಿಗಳನ್ನು ಕಾನೂನು ಪ್ರಕ್ರಿಯೆಯ ಜುಲ್ಮಾನೆಯೆಂದು ವಿಧಿಸಿದೆ.

LEAVE A REPLY

Please enter your comment!
Please enter your name here