Weekly Horoscope: ಜೂನ್‌ ತಿಂಗಳ ಕೊನೆಯ ವಾರ ನಿಮ್ಮ ಭವಿಷ್ಯ ಹೇಗಿದೆ? ಒಂದು ರಾಶಿಯ ಅದೃಷ್ಟವೇ ಬದಲಾಗುತ್ತಿದೆ

0
169
Weekly Horoscope
ವಾರ ಭವಿಷ್ಯ

Weekly Horoscope

ಜೂನ್ ತಿಂಗಳ ಕೊನೆಯ ವಾರ 24 ರಿಂದ 27ರವರೆಗೆ ಇರಲಿದೆ. ಈ ವಾರದಲ್ಲಿ ಕೆಲ ಗ್ರಹಗಳ ಚಲನೆಯಲ್ಲಿ, ಸ್ಥಾನದಲ್ಲಿ ವ್ಯತ್ಯಾಸವಾಗಲಿದೆ. ಬುಧ ಶತ್ರುವಿನ ಮನೆಯನ್ನು ಪ್ರವೇಶ ಮಾಡಲಿದ್ದು ಕೆಲವು ರಾಶಿಗಳಿವರಿಗೆ ಕೆಡುಕು, ಕೆಲವು ರಾಶಿಗಳಿವರಿಗೆ ಒಳಿತು ಆಗಲಿದೆ. ಎಲ್ಲರಿಗೂ ಶುಭವಾಗಲಿ.

ಮೇಷ ರಾಶಿ

ಜೂನ್ ತಿಂಗಳ ಕೊನೆಯ ವಾರದಲ್ಲಿ ಮೇಷ ರಾಶಿಯವರಿಗೆ ಶುಭ ಫಲವಿದೆ. ಸಾಹಸ ಕಾರ್ಯ ಮಾಡಲು ಉತ್ಸುಕರಾಗುವಿರಿ. ಈ ವಾರ ನಿಮಗೆ ಗೌರವಾಧರ ಸಿಗಲಿದೆ. ಮನೆಗೆ ಕೆಲವು ಬಂಧುಗಳ‌ ಆಗಮನ ಆಗಲಿದೆ. ಕೆಲವು ಕಾರ್ಯಗಳನ್ನು ಒತ್ತಡದಲ್ಲಿ ಮಾಡುವಿರಿ. ದೇವರ ಧ್ಯಾನ ಮಾಡಿ.

ವೃಷಭ ರಾಶಿ

ವೃಷಭ ರಾಶಿಗೆ ಈ ವಾರ ಮಿಶ್ರ‌ಫಲವಿದೆ. ಸ್ತ್ರೀಯರೊಂದಿಗೆ ವಾಗ್ವಾದ ನಡೆಯಲಿದೆ, ಮಾತಿನ ಬಗ್ಗೆ ಜಾಗೃತೆ ಇರಲಿ. ಬುದ್ಧಿವಂತರಾದರೂ ಸಹ ಸೋಮಾರಿತನದಿಂದ ಓದಿನಲ್ಲಿ ಹಿನ್ನಡೆ.‌ ಈ ವಾರ ಹೂಡಿಕೆ ಮಾಡಿದ ಹಣದಿಂದ ಲಾಭ ಬರಲಿದೆ. ಕೆಲವು ಉಪಕರಣಗಳ ಬಳಕೆಯಿಂದ ಗಾಯ ಆಗುವ ಸಂಭವ ಇದೆ. ಕೆಲ ದಿನಗಳಿಂದ ಇರುವ ಮಾನಸಿಕ ಚಿಂತೆ ಕಡಿಮೆ ಆಗಲಿದೆ.

ಮಿಥುನ ರಾಶಿ

ಮಿಥುನ ರಾಶಿಗೆ ಈ ವಾರವೂ ಸಹ ಮಿಶ್ರಫಲವೇ ಇದೆ. ಬುಧ ಶತ್ರುವಿನ ಮನೆ ಪ್ರವೇಶಿಸಿದ್ದು ತಾಯಿಯ ವಿಚಾರದಲ್ಲಿ ಮನಸ್ತಾಪ‌ ಉಂಟಾಗುವ ಸಾಧ್ಯತೆ ಇದೆ. ಮನೆಯಲ್ಲಿ ವಾಗ್ವಾದ ನಡೆಯಲಿದೆ. ಗುರು ಬಲದ ಕೊರತೆಯಿಂದ ಮಾಡಿದ ಪ್ರಯತ್ನಕ್ಕೆ ಸರಿಯಾದ ಫಲ ಸಿಗುವುದಿಲ್ಲ. ತಂತ್ರಜ್ಞಾನ ಆಧರಿತ ನೌಕರರಿಗೆ ಉತ್ತಮ ಸಮಯ. ಈ ವಾರ ಮಿಥುನ ರಾಶಿಯವರು ತುಸು ಎಚ್ಚರಿಕೆ ಇಂದ ಇರುವುದು ಒಳಿತು, ಅನಾರೋಗ್ಯವೂ ಕಾಣಿಸಿಕೊಳ್ಳಲಿದೆ.

ಕಟಕ ರಾಶಿ

ಕಟಕ ರಾಶಿಗೆ ಈ ವಾರ ಶುಭವಾಗಲಿದೆ. ಸ್ತ್ರೀಯರಿಂದ ಅನುಕೂಲ ಆಗಲಿದೆ. ಏಕಾದಶದಲ್ಲಿ ಗುರುವು ಇದ್ದು ನಿಮಗೆ ಎಲ್ಲ ಕಾರ್ಯ ಸುಗಮವಾಗಿ ಆಗಲಿವೆ. ಹಿರಿಯ ಮೇಲೆ ಗೌರವ ಕಡಿಮೆ ಆಗಲಿದೆ. ತಂದೆಯಿಂದ ನೋವಾಗಲಿದೆ. ಕೆಲಸದಲ್ಲಿ ಕಾರಣವಿಲ್ಲದೆ ಸಿಟ್ಟು ಮಾಡಿಕೊಳ್ಳುವಿರಿ. ಕೆಲವು ವಸ್ತುಗಳಿಂದ ನಷ್ಟವಾಗಲಿದೆ. ದೇಹದ ನೋವು ಕಾಣಿಸಿಕೊಳ್ಳಲಿದೆ.

ಸಿಂಹ ರಾಶಿ

ಸಿಂಹ ರಾಶಿಗೆ ಈ ವಾರ ಮಿಶ್ರ ಫಲ. ಈ ವಾರ ಸರ್ಕಾರಿ ಕೆಲಸಗಳು ಸುಗಮವಾಗಿ ನಡೆಯಲಿದೆ. ತಂದೆಯಿಂದ ಕೆಲವು ಆಸ್ತಿ ಸಿಗಲಿದೆ. ಕಲಾವಿದರಿಗೆ ಆದಾಯವಿದೆ. ವೃತ್ತಿಯಲ್ಲಿ ಗೌರವ ಸಿಗಲಿದೆ. ಪತ್ನಿಯ ಜೊತೆಗೆ ಮನಸ್ಥಾಪ ನಿರ್ಮಾಣವಾಗಲಿದೆ. ಮನೆಯ ಹಿರಿಯರ ಮೇಲೆ ದ್ವೇಷ ಸಾಧಿಸುವಿರಿ. ಬಂಧುಗಳ ಬಗ್ಗೆ ಗೌರವ ಕಡಿಮೆ ಆಗಲಿದೆ.

ಕನ್ಯಾ ರಾಶಿ

ಕನ್ಯಾ ರಾಶಿಗೆ ಈ ವಾರ ಒಳ್ಳೆಯ ಫಲವಿದೆ. ನಿಮ್ಮ ವೃತ್ತಿ ಜೀವನದಲ್ಲಿ ಹೊಸ ಬದಲಾವಣೆ ಆಗಲಿದೆ. ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ. ಗುರುವಿನ ಬಲದಿಂದ ಒಳಿತಾಗಲಿದೆ. ನಿಮ್ಮ ಬಹುಕಾಲದ ದುಃಖ ಕೊನೆಯಾಗಲಿದೆ. ಮದುವೆಗೆ ಇದು ಶುಭ ಸಮಯವಲ್ಲ. ಕೆಲಸದಲ್ಲಿ ಚಾಣಾಕ್ಷ ತನವನ್ನು ತೋರಿ ಭೇಷ್ ಎನಿಸಿಕೊಳ್ಳುವಿರಿ.

ತುಲಾ ರಾಶಿ

ತುಲಾ ರಾಶಿಗೆ ಈ ವಾರ ಮಿಶ್ರ ಫಲವಿದೆ. ಕಷ್ಟಪಟ್ಟಷ್ಟು ಫಲ ಸಿಗದು, ಹಾಗೆಂದು ಪ್ರಯತ್ನ ಬಿಡುವುದು ಬೇಡ. ಸ್ತ್ರೀಯರ ಸಹವಾಸ ಹೆಚ್ಚಾಗಲಿದೆ. ಕಲಾವಿದರು ಯಶಸ್ಸು ಪಡೆಯಲಿದ್ದಾರೆ. ಕೆಲಸದಲ್ಲಿ ಪ್ರಗತಿ ಸಾಧಿಸುವಿರಿ, ಅಲ್ಲಿ ಸಮಸ್ಯೆ ಇರದು. ಕೆಲ ಸಮಸ್ಯೆಗಳು ಬರುವುವಾದರೂ ಅವರನ್ನು ಎದುರಿಸುವಿರಿ. ಸರ್ಕಾರಿ ಕೆಲಸಗಳು ಮುಂದಿನ ವಾರ ಮಾಡಿರಿ. ಪತ್ನಿಯ ವಿಚಾರದಲ್ಲಿ ಅನುಮಾನಗಳು ಕಾಡುವುದು.

ವೃಶ್ಚಿಕ ರಾಶಿ

ಈ ವಾರ ನಿಮಗೆ ಶುಭ ಫಲ ಇದೆ. ಶತ್ರುವಿನ ಬಲ ತಗ್ಗಿ ನಿಮ್ಮ ಬಲ ಹೆಚ್ಚಾಗಲಿದೆ. ವಿವಾಹ ಯೋಗವಿದ್ದು, ತಯಾರಿ ಆರಂಭ ಮಾಡಿಕೊಳ್ಳಬಹುದು. ಕೆಲವು ಕೆಲಸಗಳಿಂದ ಮಾನಸಿಕ ಒತ್ತಡ ಹೆಚ್ಚಲಿದೆ. ಕೆಲಸದಲ್ಲಿ ಸಿಗಬೇಕಾದ ಮನ್ನಣೆ ಸಿಗುವುದು. ಗುರು-ಹಿರಿಯರ ಬಗ್ಗೆ ಗೌರವ ಇರಲಿ.

ಧನಸ್ಸು ರಾಶಿ

ಈ ವಾರ ಧನಸ್ಸು ರಾಶಿಗೆ ಮಿಶ್ರಫಲ ಇರಲಿದೆ. ನಿಮ್ಮ ಕೆಲಸಗಳಿಗೆ ವಿಘ್ನಗಳು ಎದುರಾಗಲಿವೆ. ಕುಟುಂಬ ಸದಸ್ಯರಿಂದಲೇ ನಿರ್ಲಕ್ಷ್ಯಕ್ಕೆ ಒಳಗಾಗುವಿರಿ. ಆಗುತ್ತವೆ ಎಂದುಕೊಂಡಿರುವ ಕೆಲಸಗಳು ಸಹ ನಿಲ್ಲುತ್ತವೆ. ಕೆಲವರ ಮೇಲೆ ಅಪನಂಬಿಕೆ ಹೆಚ್ಚಾಗಲಿದೆ. ಪತ್ನಿಯ ಮೇಲೆ ಪ್ರೀತಿ ಹೆಚ್ಚಾಗುತ್ತದೆ. ಬಂಧುಗಳ ದ್ವೇಷ ಕಟ್ಟಿಕೊಳ್ಳಬೇಕಾಗುತ್ತದೆ.

ಮಕರ ರಾಶಿ

ಈ ವಾರ ಮಿಶ್ರ ಫಲವು ಮಕರ ರಾಶಿಯವರಿಗೆ ಸಿಗಲಿದೆ. ಅಂದುಕೊಂಡಿದ್ದನ್ನು ಮಾಡಲು ಕಷ್ಟವಾಗಲಿದೆ. ಕೆಲಸಗಳು ಸುಲಭವಾಗಿ ಆಗಲಾರವು. ಒತ್ತಡ ಹೇರಬೇಕಾಗುತ್ತದೆ. ನಿಮ್ಮಗೆ ಕಟ್ಟಿ ಹಾಕಿದ ಅನುಭವ ಆಗಲಿದೆ. ಕೌಟುಂಬಿಕ ಕಲಹದಿಂದ ಮನಸ್ಸಿಗೆ ಬೇಸರ ಆಗಲಿದೆ. ಹೊಸ ಅವಕಾಶ ಹುಡುಕಿ ಬರಲಿವೆ. ಆದರೆ ಅವನ್ನು ಜಾಣತನದಿಂದ ನಿಭಾಯಿಸಬೇಕಿದೆ. ಅವಿವಾಹಿತರಿಗೆ ಕಂಕಣಭಾಗ್ಯವು ಕೂಡಿ ಬರಲಿದೆ. ವಾಹನದ ವಿಚಾರದಲ್ಲಿ ಎಚ್ಚರಿಕೆಯಿಂದಿರಿ. ಆಂಜನೇಯ ಸ್ವಾಮಿ ಮೇಲೆ ಭಕ್ತಿ ಇರಲಿ.

ಕುಂಭ ರಾಶಿ

ಕುಂಭ ರಾಶಿಗೆ ಜೂನ್ ತಿಂಗಳ ಕೊನೆಯ ವಾರ ಮಿಶ್ರ ಫಲವಿದೆ. ಆರಂಭದಲ್ಲಿ ಕಷ್ಟ ಎನಿಸಿದರೂ ಮುಂದಿನ ದಿನಗಳಲ್ಲಿ ಸುಖವೂ ಇರಲಿದೆ. ಅನಾರೋಗ್ಯಕ್ಕೆ ತುತ್ತಾಗಲಿದ್ದೀರಿ. ದೇಹದ ಕೆಲ ಭಾಗದಲ್ಲಿ ನೋವುಗಳು ಕಾಣಿಸಿಕೊಳ್ಳಳಿವೆ. ಒಂದು ಬಾಗಿಲು ಮುಚ್ಚಿದರೆ ಮತ್ತೊಂದು ತೆರೆದುಕೊಳ್ಳಲಿದೆ.

ಮೀನ ರಾಶಿ

ಮೀನ ರಾಶಿಗೆ ಈ ವಾರ ಮಿಶ್ರಫಲವಿದೆ. ಕೆಲವು ಕೆಲಸಗಳಲ್ಲಿ ಹಿನ್ನಡೆ ಆಗಲಿದೆ. ಮಕ್ಕಳ ಮುಂದೆ ತಲೆ ತಗ್ಗಿಸಬೇಕಾಗುವುದು. ಮನೆಯ ಜವಾಬ್ದಾರಿಗಳನ್ನು ನಿಭಾಯಿಸುವಿರಿ. ವಾಹನದಿಂದ ಲಾಭವಾಗಲಿದೆ. ಶಿಕ್ಷಣದಲ್ಲಿ ಹಿನ್ನಡೆ ಆಗಲಿದೆ, ಆದರೆ ಪ್ರಯತ್ನ ಬಿಡುವುದು ಬೇಡ.

LEAVE A REPLY

Please enter your comment!
Please enter your name here