ನಿಂಬೆ ಹಣ್ಣನ್ನು ಸರಿಯಾಗಿ ಬಳಸಿದರೆ ಆಗುವ ಆರೋಗ್ಯ ಪ್ರಯೋಜನಗಳು ಎಷ್ಟಿವೆ ಗೊತ್ತೆ?
ಎಲ್ಲರ ಅಡುಗೆ ಮನೆಯಲ್ಲಿಯೂ ನಿಂಬೆ ಹಣ್ಣು ಸಾಮಾನ್ಯವಾಗಿ ಇದ್ದೇ ಇರುತ್ತದೆ. ಅಡುಗೆಗೆ ಹೊರತಾಗಿ ಬೇರೆ ಕಾರಣಕ್ಕೆ ಇದನ್ನು ಬಳಸುವುದು ಕಡಿಮೆ.
ಆದರೆ ನಿಂಬೆ ಹಣ್ಣನ್ನು ಅಥವಾ ನಿಂಬೆ ಕಾಯಿಯನ್ನು ಸರಿಯಾಗಿ ಬಳಸಿದರೆ ಅದರಿಂದಾಗುವ ಆರೋಗ್ಯ ಪ್ರಯೋಜನಗಳು ಲೆಕ್ಕಕ್ಕೆ ಸಿಗದಷ್ಟಿವೆ.
ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಯಥೇಚ್ಛವಾಗಿರುತ್ತದೆ. ನಿಂಬೆ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಬಹಳ ಉತ್ತಮ.
ದಿನಕ್ಕೊಮ್ಮೆ, ಅದರಲ್ಲೂ ಮಧ್ಯಾಹ್ನ ಅಥವಾ ಸಂಜೆ ವೇಳೆ ನಿಂಬೆ ಹಣ್ಣಿನ ನೀರು ಸೇವಿಸಿ ದೇಹದಲ್ಲಿ ಶಕ್ತಿ ಹೆಚ್ಚುತ್ತದೆ.
ನಿಂಬೆ ಹಣ್ಣಿನಲ್ಲಿ ದೇಹಕ್ಕೆ ಬೇಕಾದ ಆಂಟಿ ಆಕ್ಸಿಡೆಂಟ್ಸ್ ಇರುತ್ತದೆ. ಇದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ನಿಂಬೆ ಹಣ್ಣನ್ನು ಅಡುಗೆಗೆ ಬಳಸುವುದರಿಂದ ಜೀರ್ಣ ಕ್ರಿಯೆ ಸುಲಭವಾಗುತ್ತದೆ, ಪಚನ ಚೆನ್ನಾಗಿ ಆಗುತ್ತದೆ.
ಮಾಂಸ ಅಥವಾ ಹೆಚ್ಚು ಮಸಾಲೆಯುಕ್ತ ಶಾಖಾಹಾರ ತಿನ್ನುವಾಗ ನಿಂಬೆ ಬಳಸಿ ದೇಹದ ತಂಪು ಕಾಪಾಡುತ್ತದೆ.
ಊಟದ ಬಳಿಕ ನಿಂಬೆ ರಸ ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಹಲವು ಸಮಸ್ಯೆ ನಿವಾರಣೆಯಾಗುತ್ತದೆ.
ನಿಂಬೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಅದನ್ನು ಸಹ ಆಹಾರದಲ್ಲಿ ಬೆರೆಸಿ ತಿನ್ನುವ ಪದ್ಧತಿ ಇದೆ.