Top Ten Car: ಮೇ ತಿಂಗಳಲ್ಲಿ ದೇಶದಾದ್ಯಂತ ಅತಿ ಹೆಚ್ಚು ಮಾರಾಟವಾದ ಕಾರು ಯಾವುದು?

0
163
Top 10 Car

Top Ten Car

ವಿಶ್ವದ ಅತಿ ದೊಡ್ಡ ಕಾರು ಮಾರುಕಟ್ಟೆಯಲ್ಲಿ ಭಾರತವೂ ಒಂದು. ಇಲ್ಲಿ ಹೈ ಎಂಡ್ ಕಾರುಗಳು ದೊಡ್ಡ ಸಂಖ್ಯೆಯಲ್ಲಿ ಮಾರಾಟ ಆಗುವುದಿಲ್ಲವಾದರೂ ಸಣ್ಣ, ಮಧ್ಯಮ ಬಜೆಟ್ ಕಾರುಗಳು ಭಾರಿ ಸಂಖ್ಯೆಯಲ್ಲಿ ಮಾರಾಟ ಆಗುತ್ತದೆ. ಮಧ್ಯಮ ವರ್ಗದ ಜನರೇ ಭಾರತದ ಬಹುತೇಕ ಕಾರು ಸಂಸ್ಥೆಗಳ ಗುರಿ. ಪ್ರತಿ ತಿಂಗಳೂ ಸಹ ಲಕ್ಷಾಂತರ ಕಾರುಗಳು ಭಾರತದಲ್ಲಿ ಮಾರಾಟವಾಗುತ್ತವೆ. ಕಳೆದ ತಿಂಗಳು ಅಂದರೆ ಮೇ ತಿಂಗಳಲ್ಲಿ ಭಾರತದಾದ್ಯಂತ ಅತಿ ಹೆಚ್ಚು ಮಾರಾಟವಾದ ಕಾರುಗಳು ಯಾವುವು ಇಲ್ಲಿದೆ ಪಟ್ಟಿ.

ಭಾರತೀಯರ ಮೆಚ್ಚಿನ ಕಾರು ಕಂಪೆನಿ ಮಾರುತಿ. ಮಾರುತಿ ಸಂಸ್ಥೆ ಆರಂಭವಾದಾಗಿನಿಂದಲೂ ಭಾರತದ‌ ಮಧ್ಯಮವರ್ಗದ ಜನರನ್ನು ಗುರಿಯಾಗಿಸಿ ಸೇವೆ ನೀಡುತ್ತಾ ಬಂದಿದೆ. ಅದಕ್ಕೆ ತಕ್ಕಂತೆ ಭಾರತೀಯರು ಸಹ ಮಾರುತಿಯ ಕೈ ಬಿಟ್ಟಿಲ್ಲ. ಅತಿ ಹೆಚ್ಚು ಕಾರು ಮಾರಾಟ ಮಾಡಿದ ಸಂಸ್ಥೆಯ ಪಟ್ಟಿಯಲ್ಲಿ ಪ್ರತಿ ವರ್ಷವೂ ಮಾರುತಿ ಹೆಸರು ಇದ್ದೇ ಇರುತ್ತದೆ.

https://samasthanews.com/refex-group-launch-refex-eveelz-ev-taxi-at-bengaluru-international-airport/

ಮೇ ತಿಂಗಳಲ್ಲಿ ಭಾರತದಾದ್ಯಂತ ಅತಿ ಹೆಚ್ಚು ಮಾರಾಟವಾಗಿರುವುದು ಮಾರುತಿ ಸಂಸ್ಥೆಯ ಸ್ವಿಫ್ಟ್ ಕಾರು. ಇತ್ತೀಚೆಗಷ್ಟೆ ಮಾರುತಿ ಸಂಸ್ಥೆ ಹೊಸ ಸ್ವಿಫ್ಟ್ ಕಾರು ಬಿಡುಗಡೆ ಮಾಡಿದೆ. ಜನ ಈ ಕಾರನ್ನು ಮುಗಿಬಿದ್ದು ಖರೀದಿ ಮಾಡಿದ್ದಾರೆ.ಮೇ ತಿಂಗಳಲ್ಲಿ ದೇಶದೆಲ್ಲೆಡೆ ಮಾರುತಿಯ 19,393 ಕಾರುಗಳು ಮಾರಾಟವಾಗಿವೆ. ಎರಡನೇ ಸ್ಥಾನದಲ್ಲಿರುವುದು ಟಾಟಾ ಸಂಸ್ಥೆಯ ಪಂಚ್  ಕಾರು. ಮೇ ತಿಂಗಳಲ್ಲಿ 18,949 ಕಾರುಗಳು ಮಾರಾಟವಾಗಿವೆ. ಮೂರನೇ ಸ್ಥಾನದಲ್ಲಿರುವ ಮಾರುತಿ ಸ್ವಿಫ್ಟ್ ಡಿಜೈರ್ ಕಾರು 16,061 ಕಾರುಗಳು ಮಾರಾಟವಾಗಿವೆ.

ನಾಲ್ಕನೇ ಸ್ಥಾನದಲ್ಲಿ ಹುಂಡೈ ಕ್ರೆಟಾ ಇದ್ದು, ಇದರ 14,622 ಕಾರುಗಳು ಮಾರಾಟವಾಗಿವೆ. ಐದು, ಆರು, ಏಳನೇ ಸ್ಥಾನದಲ್ಲಿ ಮತ್ತೆ ಮಾರುತಿಯೇ ಇದೆ. ಐದರಲ್ಲಿ ಮಾರುತಿಯ ವ್ಯಾಗನಾರ್, ಆರರಲ್ಲಿ ಬ್ರೆಜಾ, ಏಳರಲ್ಲಿ ಎರ್ಟಿಗಾ ಇದೆ. ಎಂಟರಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಇದೆ. ನಂತರದ ಎರಡು ಸ್ಥಾನ ಮತ್ತೆ ಮಾರುತಿಗೆ. ಒಂಬತ್ತನೇ ಸ್ಥಾನದಲ್ಲಿ ಮಾರುತಿಯ ಬಲೆನೊ ಇದ್ದರೆ ಹತ್ತನೆ ಸ್ಥಾನದಲ್ಲಿ ಫ್ರಾಂಕ್ಸ್ ಇದೆ.

ಒಟ್ಟಾರೆ ಟಾಟಾ ಸಂಸ್ಥೆ ಇತ್ತೀಚೆಗೆ ಒಳ್ಳೆಯ ಕಾರುಗಳನ್ನು ಹೊರ ತರುತ್ತಿದೆಯಾದರೂ ಸಹ ಮಾರುತಿ ಸುಜುಕಿಯ ಏಕಮೇವಾಧಿಪತ್ಯವನ್ನು ಅದಕ್ಕೆ ಮುರಿಯಲು ಸಾಧ್ಯವಾಗಿಲ್ಲ. ಟಾಪ್ 10 ರ ಪಟ್ಟಿಯಲ್ಲಿ ಟಾಟಾ ಸಂಸ್ಥೆಯ ಕೇವಲ ಒಂದು ಕಾರಿದೆ.

LEAVE A REPLY

Please enter your comment!
Please enter your name here