Kalki 2898 AD: ಕಲ್ಕಿ ಸಿನಿಮಾದ ನಟರು ಪಡೆದ ಸಂಭಾವನೆ ಎಷ್ಟು?
ಸಿನಿಮಾದ ನಾಯಕ ಪ್ರಭಾಸ್ ಭೈರವ ಪಾತ್ರದಲ್ಲಿ ನಟಿಸಿದ್ದು, ಈ ಸಿನಿಮಾಕ್ಕಾಗಿ ಅವರು ಬರೋಬ್ಬರಿ 80 ಕೋಟಿ ಪಡೆದಿದ್ದಾರೆ.
ಸಿನಿಮಾದಲ್ಲಿ ಪ್ರಭಾಸ್ ರಷ್ಟೆ ಪ್ರಮುಖ ಪಾತ್ರದಲ್ಲಿ ನಟಿಸಿರುವ ಅಮಿತಾಬ್ ಬಚ್ಚನ್ ಅವರಿಗೆ 25 ಕೋಟಿ ರೂಪಾಯಿ ಸಂಭಾವನೆ ಸಿಕ್ಕಿದೆ.
ಇನ್ನು ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿರುವ ಕಮಲ್ ಹಾಸನ್ ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ 20 ಕೋಟಿ ಪಡೆದಿದ್ದಾರೆ.
ನಟಿ ದೀಪಿಕಾ ಪಡುಕೋಣೆಯದ್ದೂ ಸಹ ಪ್ರಮುಖವಾದ ಪಾತ್ರವೇ ಈ ಪಾತ್ರಕ್ಕೆ ಅವರು ಸಹ 20 ಕೋಟಿ ಸಂಭಾವನೆ ಪಡೆದಿದ್ದಾರೆ.
ಇನ್ನು ಸಿನಿಮಾದಲ್ಲಿ ಒಂದು ಹಾಡು ಕೆಲ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವ ದಿಶಾ ಪಟಾನಿಗೆ ಸಿಕ್ಕಿರುವುದು ಎರಡು ಕೋಟಿ ರೂಪಾಯಿ.
ಸಿನಿಮಾದ ನಿರ್ದೇಶಕ ನಾಗ್ ಅಶ್ವಿನ್ ಈ ಸಿನಿಮಾಕ್ಕೆ ನಾಲ್ಕು ವರ್ಷ ದುಡಿದಿದ್ದಾರೆ. ಅವರಿಗೂ 20 ಕೋಟಿ ಹಣ ನೀಡಲಾಗಿದೆ.
‘ಕಲ್ಕಿ’ ಸಿನಿಮಾದಲ್ಲಿ ಬ್ರಹ್ಮಾನಂದ ಸಹ ಇದ್ದು ಅವರಿಗೆ ಎರಡು ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ.
ಕಲ್ಕಿ ಸಿನಿಮಾನಲ್ಲಿ ಬೆಂಗಾಲಿ ನಟ ಸಸ್ವತ್ ಚಟರ್ಜಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರಿಗೆ ಸಿಕ್ಕಿರುವುದು ಒಂದು ಕೋಟಿ ಸಂಭಾವನೆಯಷ್ಟೆ.
‘ಕಲ್ಕಿ’ ಸಿನಿಮಾ ಜುಲೈ 27ಕ್ಕೆ ತೆರೆಗೆ ಬಂದಿದ್ದು, ವಿಶ್ವದಾದ್ಯಂತ ಅತ್ಯುತ್ತಮವಾದ ಓಪನಿಂಗ್ ಪಡೆದುಕೊಂಡಿದೆ.