ವೇಗವಾಗಿ ಹರಡುತ್ತಿರುವ ಡೆಂಘಿಯಿಂದ ನಿಮ್ಮನ್ನು ಕಾಪಾಡಿಕೊಳ್ಳಿ, ಈ ಕ್ರಮಗಳನ್ನು ಅನುಸರಿಸಿ

ಡೆಂಘಿ ಸೋಂಕಿತ ಸೊಳ್ಳೆ ಮನುಷ್ಯನನ್ನು ಕಡಿಯುವುದರ ಮೂಲಕ. ಮನುಷ್ಯರಿಗೆ ಡೆಂಘಿ ಜ್ವರ ಅಥವಾ ಡೆಂಘಿ ಸೋಂಕು ಕಾಣಿಸಿಕೊಳ್ಳುತ್ತದೆ.

ಹಾಗಾಗಿ ಡೆಂಘಿಯಿಂದ ಕಾಪಾಡಿಕೊಳ್ಳುವ ಸುಲಭ ಉಪಾಯವೆಂದರೆ ಸೊಳ್ಳೆ ಕಡಿತದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು.

ಸೊಳ್ಳೆ ಕಡಿತದಿಂದ ಕಾಪಾಡಿಕೊಳ್ಳುವ ಹಲವು ಉಪಾಯಗಳಿವೆ. ಮೊದಲಿಗೆ ಸೊಳ್ಳೆಗಳು ಕಡಿಯದಂತೆ ತಡೆಯುವ ಮುಲಾಮು ಹಚ್ಚಿಕೊಳ್ಳುವುದು.

ಮನೆಯಲ್ಲಿ ಸೊಳ್ಳೆ ನಾಶಕಗಳನ್ನು ಬಳಸುವುದು, ಈ ನಾಶಕಗಳು ಎನ್​ವಿರಾನ್​ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ ಒಪ್ಪಿಗೆ ಪಡೆದಿವೆಯೇ ನೋಡಿರಿ

ಮನೆಗೆ ಸೊಳ್ಳೆಗಳು ಬರದಂತೆ ತಡೆಯುವುದು, ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು.

ಮೈ-ಕೈ ನೋವು, ಜ್ವರ ಕಾಣಿಸಿಕೊಳ್ಳುತ್ತಿದ್ದಂತೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ, ರಕ್ತ ಪರೀಕ್ಷೆ ಮಾಡಿಸಿ ಡೆಂಘಿ ಹೌದೊ ಅಲ್ಲವೋ ದೃಢಪಡಿಸಿಕೊಳ್ಳಿ.

ಮೈಗೆ ಅಂಟುವ ಬಟ್ಟೆ ಧರಿಸುವುದು ಬೇಡ, ಮೈಯ ಬಹುತೇಕ ಭಾಗ ಮುಚ್ಚವಂತ ಬಟ್ಟೆ ಧರಿಸಿ, ರಾತ್ರಿ ಸಮಯ ಮಲಗುವಾಗ ಬೆಡ್​ಶೀಟ್ ಅಥವಾ ಸೊಳ್ಳೆ ನೆಟ್ ಬಳಸಿ.

ವೈದ್ಯರ ಸಲಹೆ ಮೇರೆಗೆ ಉತ್ತಮ ಆಹಾರ, ವಿಶ್ರಾಂತಿ, ಸಾಮಾನ್ಯ ಔಷಧಗಳಿಂದಲೇ ಡೆಂಘಿಯನ್ನು ಹೋಗಲಾಡಿಸಬಹುದು. ಆತಂಕ ಬೇಡ.

ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಡೆಂಘಿ ಸೋಂಕು ತೀವ್ರವಾಗಿ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿಯಂತೂ ಡೆಂಘಿ ತೀವ್ರ ಪ್ರಮಾಣದಲ್ಲಿದೆ ಜಾಗೃತಿ ಇರಲಿ.