Hosuru
ತಮಿಳುನಾಡು ಸರ್ಕಾರವು ಲೆಕ್ಕಾಚಾರದ ಹೆಜ್ಜೆಯೊಂದನ್ನು ಇರಿಸಿದೆ. ಬೆಂಗಳೂರಿನಿಂದ ತುಸುವೇ ದೂರಸಲ್ಲಿರುವ ಹೊಸೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಘೋಷಣೆ ಮಾಡಿದೆ. ಹೊಸೂರು ವಿಮಾನ ನಿಲ್ದಾಣ ಮಾಡುವ ಉದ್ದೇಶ ಬೆಂಗಳೂರಿನ ಪ್ರಯಾಣಿಗರನ್ನು ಸೆಳೆಯುವುದೇ ಆಗಿದೆ ಎಂಬುದು ಗುಟ್ಟಲ್ಲ. ಇದೀಗ ಹೊಸೂರು ವಿಮಾನ ನಿಲ್ದಾಣ ನಿಲ್ದಾಣದ ಸಾಧಕ-ಬಾಧಕಗಳ ಕುರಿತು ಚರ್ಚೆ ಜೋರಾಗಿ ನಡೆಯುತ್ತಿದೆ.
ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ತಮಿಳುನಾಡು ಸರ್ಕಾರ ಮುಂದಾಗಿರುವುದು ಕರ್ನಾಟಕಕ್ಕೆ ಹಾಕಿರುವ ಸವಾಲು ಎಂದು ವಿಪಕ್ಷಗಳು ವಿಶ್ಲೇಸಿವೆ. ಬೆಂಗಳೂರಿನ ಪ್ರಗತಿಗೆ ಸೆಡ್ಡು ಹೊಡೆಲೆಂದು, ಬೆಂಗಳೂರಿನ ಅಭಿವೃದ್ಧಿಗೆ ಬ್ರೇಕ್ ಹಾಕಲೆಂದೇ ತಮಿಳುನಾಡು ಸರ್ಕಾರ ಹೊಸೂರಿನಲ್ಲಿ ವಿಮಾನನಿಲ್ದಾಣ ನಿರ್ಮಿಸಲು ಮುಂದಾಗಿದೆ ಎಂದು ಒಂದು ವರ್ಗ ಸಾಮಾಜಿಕ ಜಾಲತಾಣದಲ್ಲಿ ಆತಂಕ ವ್ಯಕ್ತಪಡಿಸಿದೆ.
ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದಲ್ಲಿ ಬೆಂಗಳೂರಿನ ನಿಲ್ದಾಣ ತನ್ನ ಬೇಡಿಕೆ ಕಳೆದುಕೊಳ್ಳಲಿದೆ. ನಷ್ಟವಾಗುವ ಸಾಧ್ಯತೆ ಇದೆ, ರಿಯಲ್ ಎಸ್ಟೇಟ್ ಗೆ ಹೊಡೆತ ಬೀಳಬಹುದು ಎಂದೆಲ್ಲ ಲೆಕ್ಕಾಚಾರಗಳು ನಡೆಯುತ್ತಿವೆ.
ವಿಮಾನ ನಿಲ್ದಾಣದ ಬಳಿ ನಿರ್ಮಾಣವಾಗಲಿದೆ ಬೃಹತ್ ಬ್ಯುಸಿನೆಸ್ ಪಾರ್ಕ್, ಏನೇನಿರಲಿದೆ ಈ ಅತ್ಯಾಧುನಿಕ ಸಿಟಿಯಲ್ಲಿ
ಇದರ ಜೊತೆಗೆ ಹೊಸೂರಿನಲ್ಲಿ ವಿಮಾನ ನಿಲ್ದಾಣವಾದರೆ ಬೆಂಗಳೂರಿಗೆ ಆಗಲಿರುವ ಅನುಕೂಲಗಳ ಬಗ್ಗೆಯೂ ಚರ್ಚೆ ಜೋರಿದೆ. ಹೊಸೂರಿನಲ್ಲಿ ವಿಮಾನ ನಿಲ್ದಾಣವಾದರೆ ಬೆಂಗಳೂರಿನ ಐಟಿ ಹೃದಯವಾಗಿರುವ ವೈಟ್ ಫೀಲ್ಡ್, ಸಿಲ್ಕ್ ಬೋರ್ಡ್, ಮಾರತ್‌ಹಳ್ಳಿ, ದೊಮ್ಮಲೂರುಗಳ ಐಟಿ ಸಂಸ್ಥೆಗಳಿಗೆ ನೆರವಾಗಲಿದೆ. ಅಲ್ಲದೆ ಈ ಭಾಗಗಳಲ್ಲಿ ಐಟಿ ಉದ್ಯಮಕ್ಕೆ ಇನ್ನಷ್ಟು ಬೂಸ್ಟ್ ದೊರೆಯಲಿದೆ ಎನ್ನಲಾಗುತ್ತಿದೆ.
ಜೊತೆಗೆ ಬೆಂಗಳೂರಿನ ಸಂಚಾರಿ ದಟ್ಟಣೆ ತುಸುವಾದರೂ ಕಡಿಮೆ ಆಗಲಿದೆ ಎನ್ನಲಾಗುತ್ತಿದೆ. ವಿಶೇಷವಾಗಿ ಹೆಬ್ಬಾಳ, ಮೇಖ್ರಿ ಸರ್ಕಲ್ ಮುಂತಾದ ಪ್ರಮುಖ ಏರಿಯಾಗಳ ಜೊತೆಗೆ, ಸಿಲ್ಕ್ ಬೋರ್ಡ್ ಟ್ರಾಫಿಕ್ ಸಹ ಕಡಿಮೆ ಆಗಲಿದೆ ಎನ್ನಲಾಗುತ್ತಿದೆ.
ತಮಿಳುನಾಡು ಸರ್ಕಾರವು ಹೊಸೂರಿನಲ್ಲಿ 2000 ಎಕರೆ ಜಾಗದಲ್ಲಿ ಬೃಹತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವುದಾಗಿ ಘೋಷಿಸಿದೆ. ಬೆಂಗಳೂರಿಗೆ ಸ್ಪರ್ಧೆ ಒಡ್ಡಲೆಂದೇ ಈ ವಿಮಾನ ನಿಲ್ದಾಣ ನಿರ್ಮಿಸಲು ತಮಿಳುನಾಡು ಸರ್ಕಾರ ಮುಂದಾಗಿದೆ. ಆದರೆ ಅದಿನ್ನೂ ಕೆಲ ವರ್ಷಗಳ ಯೋಜನೆ. ಮುಂದೆ ಏನಾಗಲಿದೆಯೋ ಕಾದು ನೋಡಬೇಕಿದೆ.