Renuka Swamy
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಇದೀಗ ಡಿಜಿಟಲ್ ಸಾಕ್ಷ್ಯಗಳ ಸಂಗ್ರಹ ಮಾಡಲಾಗುತ್ತಿದೆ. ರೇಣುಕಾ ಸ್ವಾಮಿ ಸೇರಿದಂತೆ ಎಲ್ಲ ಆರೋಪಿಗಳ ಮೊಬೈಲ್ ಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಅವರ ಮೊಬೈಲ್ ಪರಿಶೀಲನೆ ವೇಳೆ, ರೇಣುಕಾ ಸ್ವಾಮಿ, ಪವಿತ್ರಾಗೆ 200 ಕ್ಕೂ ಹೆಚ್ಚು ಸಂದೇಶಗಳನ್ನು ಕಳಿಸಿದ್ದ ಎಂಬುದು ತಿಳಿದು ಬಂದಿದೆ.
ಆರಂಭದಲ್ಲಿ ತನ್ನ ಖಾತೆಯಿಂದ ಚಾಟ್ ಮಾಡಿದ್ದ ರೇಣುಕಾ ಸ್ವಾಮಿ ಆ ನಂತರ ನಿಂದನೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ, ಬಳಿಕ ಅಶ್ಲೀಲ ಚಿತ್ರಗಳನ್ನು ರೇಣುಕಾ ಸ್ವಾಮಿ ಕಳಿಸಿದ್ದಾನೆ. ಆ ನಂಬರ್ ಅನ್ನು ಪವಿತ್ರಾ ಗೌಡ ಬ್ಲಾಕ್ ಮಾಡಿದ ಬಳಿಕ ರೇಣುಕಾ ಸ್ವಾಮಿ ಬೇರೊಂದು ಖಾತೆಯಿಂದ ಅಶ್ಲೀಲ ಚಿತ್ರಗಳನ್ನು ಕಳಿಸಿದ್ದಾನೆ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ರೆಣುಕಾ ಸ್ವಾಮಿ, ಪವಿತ್ರಾ ಗೌಡ ಮಾತ್ರವೇ ಅಲ್ಲದೆ ಇನ್ನೂ ಕೆಲವು ನಟಿಯರಿಗೆ ಇದೇ ರೀತಿಯ ಸಂದೇಶ ಕಳಿಸಿದ್ದ ಎಂಬ ಮಾಹಿತಿಯೂ ಇತ್ತೀಚೆಗೆ ಹೊರ ಬರುತ್ತಿದೆ. ಮಾಜಿ ಬಿಗ್ ಬಾಸ್ ಸ್ಪರ್ಧಿಯೊಬ್ಬರು ತಮಗೂ ಸಹ ರೇಣುಕಾ ಸ್ವಾಮಿಯದ್ದು ಎನ್ನಲಾದ ಖಾತೆಯಿಂದ ಸಂದೇಶ ಬಂದಿದೆ ಎಂದಿದ್ದಾರೆ. ಸೋನು ಶ್ರೀನಿವಾಸ್ ಗೌಡ ಸಹ ತನಗೂ ಅದೇ ಖಾತೆಯಿಂದ ಅಶ್ಲೀಲ ಸಂದೇಶ ಬಂದಿರುವುದಾಗಿ ಹೇಳಿದ್ದಾರೆ.
ಕಿರುತೆರೆಗೆ ಬಂತು ರೇಣುಕಾ ಸ್ವಾಮಿ ಕೊಲೆ ಪ್ರಕರಣ, ದರ್ಶನ್ ಅಭಿಮಾನಿಗಳು ಸುಮ್ಮನಿರ್ತಾರ?
ಇನ್ನು ತನಿಖಾಧಿಕಾರಿಗಳ ತನಿಖೆಯಿಂದ ಶೆಡ್ ನಲ್ಲಿ ನಡೆದಿರುವ ಕೆಲವು ಘಟನೆಗಳು ಹೊರಗೆ ಬಂದಿವೆ. ರೇಣುಕಾ ಸ್ವಾಮಿಯನ್ನು ಶೆಡ್ ಗೆ ಕರೆತಂದು ದರ್ಶನ್ ಮತ್ತು ತಂಡದವರು, ರೇಣುಕಾ ಸ್ವಾಮಿ ಕಳಿಸೊದ ಸಂದೇಶವನ್ನು ಓದಿ ಓದಿ ರೇಣುಕಾ ಮೇಲೆ ಹಲ್ಲೆ ಮಾಡಿದ್ದರೆಂಬುದು ತಿಳಿದು ಬಂದಿದೆ. ಪವಿತ್ರಾ ಗೌಡ ಅವರ ಸಹಾಯಕ ಪವನ್ ರೇಣುಕಾ ಸ್ವಾಮಿ ಪವಿತ್ರಾಗೆ ಕಳಿಸೊರುವ ಸಂದೇಶಗಳನ್ನು ಓದುತ್ತಿದ್ದರೆ ದರ್ಶನ್ ಆ ಸಂದೇಶಗಳನ್ನು ಕೇಳಿಸಿಕೊಂಡು ಕೋಪೊಧ್ರಿಕ್ತರಾಗಿ ಹೊಡೆಯುತ್ತಿದ್ದರಂತೆ.
ಸದ್ಯಕ್ಕೆ ಡಿಜಿಟಲ್ ಸಾಕ್ಷ್ಯಗಳ ಸಂಗ್ರಹ ಕಾರ್ಯ ನಡೆಯುತ್ತಿದ್ದು, ರೇಣುಕಾ ಸ್ವಾಮಿಯ ಮೊಬೈಲ್ ಮಾಹಿತಿ ಹೊರ ಪಡೆಯುವ ಪ್ರಯತ್ನ ನಡೆಸಲಾಗುತ್ತಿದೆ.