BAJAJ CNG Bikes: ಬಜಾಜ್ ಹೊರತರುತ್ತಿದೆ CNG ಬೈಕ್, ಪೆಟ್ರೋಲ್ ಬೈಕ್ ಗೆ ಹೇಳಿ ಗುಡ್ ಬೈ

0
128
BAJAJ CNG Bikes

BAJAJ CNG Bikes

ಪೆಟ್ರೋಲ್ ಬೈಕ್ ಗಳು ಕೋಟಿಗಳ ಲೆಕ್ಕದಲ್ಲಿದೆ. ಈಗ ಭಾರತೀಯ ಗ್ರಾಹಕರಿಗೆ ಇವಿ ಬೈಲ್ ಗಳ ಪರಿಚಯವಾಗಿದ್ದು ಇವಿ ಬೈಕ್ ಗಳ‌ ಮಾರಾಟ  ಇತ್ತೀಚೆಗೆ ಹೆಚ್ಚಾಗುತ್ತಿದೆ‌. ಆದರೆ ಇದೀಗ ಭಾರತದ ಮೊದಲ CNG ಬೈಕ್ ಬಿಡುಗಡೆಗೆ ಬಜಾಜ್ ಸಂಸ್ಥೆ ಮುಂದಾಗಿದ್ದು, ಇದು ಭಾರತೀಯ ಬೈಕ್ ಮಾರುಕಟ್ಟೆಯನ್ನೆ ಅಲುಗಾಡಿಸಲಿದೆ ಎನ್ನಲಾಗುತ್ತಿದೆ‌. ಇವಿ, ಪೆಟ್ರೋಲ್ ಎರಡೂ ಮಾದರಿಯ ಬೈಕ್ ಗಳಿಗೆ ಈ CNG ಬೈಕ್ ಗಳು ದೊಡ್ಡ ಟಕ್ಕರ್ ಕೊಡಲಿದೆ ಎನ್ನಲಾಗುತ್ತಿದೆ.

ಭಾರತೀಯರ ನಂಬುಗೆಯ ಬೈಕ್ ಬ್ರ್ಯಾಂಡ್ ಆಗಿರುವ ಬಜಾಜ್ ಸಂಸ್ಥೆಯವರು ಈಗಾಗಲೆ CNG ಬೈಕ್ ತಯಾರಿಸಿದ್ದು ಪರೀಕ್ಷಾರ್ಥ ಸಂಚಾರ ನಡೆಸುತ್ತಿದ್ದಾರೆ. ಪರೀಕ್ಷಾರ್ಥ ಪ್ರಯಾಣ ನಡೆಸುವಾಗ ಹಲವರು ಬೈಕ್ ಅನ್ನು ನೋಡಿದ್ದು, ಬೈಕ್ ನ ಚಿತ್ರ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

https://samasthanews.com/residents-of-bengalurus-second-largest-apartment-devided-by-building-temple/

ಪ್ಲಾಟಿನಾ ಹಾಗೂ ಪಲ್ಸರ್ ಎರಡು ಮಾದರಿಯ ಬೈಕ್ ಗಳಲ್ಲಿ‌ ಮಾತ್ರವೇ ಸದ್ಯಕ್ಕೆ CNG ಆಪ್ಷನ್ ಅನ್ನು ಬಜಾಜ್ ನೀಡುತ್ತಿದೆ. ಈ ಎರಡು ಬೈಕ್ ಗಳಿಗೆ ದೊರೆಯುವ ಪ್ರತಿಕ್ರಿಯೆ ನೊಪಡಿಕೊಂಡು ಬೇರೆ ಬೈಕ್ ಗಳ CNG ಆವೃತ್ತಿಯನ್ನು ಹೊರತರುವ ಅಲೋಚನೆ ಬಜಾಜ್ ನದ್ದು. ಪ್ಲಾಟಿನಂ CNG ಬೆಲೆ ಸುಮಾರು‌ 80 ಸಾವಿರದಿಂದ 1 ಲಕ್ಷ‌ ಇರಲಿದೆ ಎನ್ನಲಾಗುತ್ತಿದೆ.

ಈ ಬೈಕ್ ಗಳ ಮುಖ್ಯ ಧನಾತ್ಮಕ ಅಂಶವೆಂದರೆ ಈ ಗಾಡಿಗಳ ಮೈಲೇಜ್. ಪೆಟ್ರೋಲ್ ಬೈಕ್ ಗಳಿಗಿಂತಲೂ 50% ಹೆಚ್ಚು ಮೈಲೇಜ್ ಅನ್ನು ಈ ವಾಹನಗಳು ನೀಡುತ್ತವೆ ಎನ್ನಲಾಗುತ್ತಿದೆ. ಪೆಟ್ರೋಲ್ ಬೈಕ್ ಗಳು ಒಂದು ಲೀಟರ್ ಗೆ 50 ಕಿ.ಮೀ ಚಲಿಸಿದರೆ CNG ಬೈಕ್ ಗಳು ಒಂದು ಲೀಟರ್ ಗೆ 75 ಕಿ.ಮೀ ಚಲಿಸಲಿವೆ. ಅಲ್ಲದೆ ಪೆಟ್ರೋಲ್ ಗಿಂತಲೂ ಬಹಳ ಕಡಿಮೆ ಬೆಲೆ ಸಹ ಇದರದ್ದು. ಒಂದು ಲೀಟರ್ CNG ಗ್ಯಾಸ್ ಅಥವಾ ಎಥೆನಾಲ್ ಮಿಶ್ರಣದ ಬೆಲೆ 81 ರೂಪಾಯಿಗಳು ಮಾತ್ರ. ಪೆಟ್ರೋಲ್ ಬೈಕ್ ಗಳಿಗೆ ಹೋಲಿಸಿದರೆ, CNG ಬೈಕ್ ಗಳ ಮೇಲೇಜ್ ಹೆಚ್ಚು ಹಾಗೂ ಬೆಲೆಯೂ ಕಡಿಮೆ ಹಾಗಾಗಿ, CNG ಬೈಕ್ ಗಳು ಬೈಕ್ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನೇ ತರುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here