ಸೊಳ್ಳೆಗಳ ಬಗ್ಗೆ ಈ ಅಪರೂಪದ ಮಾಹಿತಿ ನಿಮಗೆ ಗೊತ್ತೆ?
ಪ್ರಪಂಚದಲ್ಲಿ 3500 ಪ್ರಜಾತಿಯ ಸೊಳ್ಳೆಗಳಿವೆ. ಕೆಲವು ಸೊಳ್ಳೆಗಳು ವಿಶಕಾರಿಯೂ ಹೌದು.
ಇತಿಹಾಸದಲ್ಲಿ ಮಹಾಯುದ್ಧಗಳು ಸಹ ಕೊಲ್ಲದಷ್ಟು ಜನರನ್ನು ಸೊಳ್ಳೆಗಳು ಕೊಂದಿವೆ ಎಂದರೆ ನಂಬಲೇ ಬೇಕು.
ಸೊಳ್ಳೆಗಳ ಜೀವಿತ ಕಾಲಾವಧಿ ಕೇವಲ ಎರಡು ತಿಂಗಳು ಅದರಲ್ಲಿ ಮೊದಲ 10 ದಿನ ಅವು ನೀರಿನಲ್ಲಿ ಕಳೆಯುತ್ತವೆ.
ಒಂದು ಹೆಣ್ಣು ಸೊಳ್ಳೆ ಒಂದು ಸಮಯಕ್ಕೆ 300 ಮೊಟ್ಟೆಗಳನ್ನಿಡುತ್ತದೆ. ಸಾಯುವ ಮುನ್ನ ಮೂರು ಬಾರಿ ಮೊಟ್ಟೆಗಳನ್ನಿಡುತ್ತದೆ ಹೆಣ್ಣು ಸೊಳ್ಳೆ.
ಸೊಳ್ಳೆ ಕಚ್ಚುವುದರಿಂದ ಸುಮಾರು 20 ಬಗೆಯ ಕಾಯಿಲೆಗಳು ಮನುಷ್ಯನಿಗೆ ಬರುತ್ತವೆ. ಕೆಲವು ಕಾಯಿಲೆಯಿಂದ ಮರಣವಾಗುತ್ತವೆ.
ಸೊಳ್ಳೆಗಳು ಕೆಲವರನ್ನು ಹೆಚ್ಚು ಕಚ್ಚುತ್ತವೆ ಕೆಲವರನ್ನು ಕಡಿಮೆ. ಅದಕ್ಕೆ ಕಾರಣ ವ್ಯಕ್ತಿಯ ದೇಹದಲ್ಲಿನ ರಾಸಾಯನಿಕ.
ಹುಲಿ, ಸಿಂಹ, ಚಿರತೆ, ಹಾವುಗಳು ಇನ್ಯಾವುದೇ ಪ್ರಾಣಿಗಳು ಅಥವ ಉರಗಕ್ಕಿಂತಲೂ ಅತ್ಯಂತ ಮಾರಣಾಂತಿಕ ಜೀವಿ ಸೊಳ್ಳೆ.