BMW Car: ಮಧ್ಯಮ ವರ್ಗದ ಕುಟುಂಬಗಳೂ ಖರೀದಿಸಬಹುದು ಬಿಎಂಡಬ್ಲು: ಇಲ್ಲಿದೆ ವಿವರ

0
111
BMW car

BMW Car

ಎರಡು ದಶಕದ ಹಿಂದೆ ಲಾರು ಎಂಬುದು ಮಧ್ಯಮ ವರ್ಗಕ್ಕೆ ಮರೀಚಿಕೆಯಾಗಿತ್ತು. ಆದರೆ ಯಾವಾಗ ಟಾಟಾ ಮೋಟರ್ಸ್, ಮಾರುತಿ ಸುಜುಕಿ ಅಂಥಹಾ ಸಂಸ್ಥೆಗಳು ಭಾರತದ ಮಧ್ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಕಾರು ನಿರ್ಮಿಸಲು ಆರಂಭಿಸಿದವೋ ಮಧ್ಯಮ ವರ್ಗದ ಜನರೂ ಸಹ ಕಾರು ಖರೀದಿ ಮಾಡಬಲ್ಲರು ಎಂದಾಯಿತು. ಆದರೆ ಈಗ ಮಧ್ಯಮ ಅಥವಾ ಮೇಲ್ಮಧ್ಯಮ ವರ್ಗದವರು ಐಶಾರಾಮಿ ಕಾರುಗಳನ್ನು ಖರೀದಿ ಮಾಡಬಲ್ಲರೆ? ಅದರಲ್ಲೂ ಮರ್ಸಿಡೀಸ್ ಬೆನ್ಜ್, ಬಿಎಂಡಬ್ಲು ಮಾದರಿಯ ಸಂಸ್ಥೆಗಳ ಕಾರು ಖರೀದಿ ಮಾಡಬಲ್ಲರೆ? ಇಲ್ಲಿದೆ ಮಾಹಿತಿ.

ಮಧ್ಯಮ ಅಥವಾ ಮೇಲ್ಮಧ್ಯಮ ವರ್ಗದ ಜನ, ಉದಾಹರಣೆಗೆ ಮಹಿಂದ್ರಾ XUV 700, ಇನ್ನೋವಾ, ಫಾರ್ಚುನರ್ ಕಾರುಗಳನ್ನು ಖರೀದಿ ಮಾಡುವ ಜನ ಸುಲಭವಾಗಿ ಬಿಎಂಡಬ್ಲು ಖರೀದಿ ಮಾಡಬಹುದು. ಆದರೆ ಮಾಹಿತಿ ಕೊರತೆಯಿಂದಾಗಿ, ಬಿಎಂಡಬ್ಲುನಲ್ಲಿ ನಾವು ಖರೀದಿ ಮಾಡಬಹುದಾದ ಕಾರು ಇದೆಯೇ ಇದ್ದರೆ ಯಾವುದದು ಎಂಬ ಮಾಹಿತಿ ಇಲ್ಲದ ಕಾರಣ ಐಶಾರಾಮಿ ಕಾರುಗಳ ತಂಟೆಗೆ ಹೋಗುವುದಿಲ್ಲ.

https://samasthanews.com/which-milk-did-ambani-family-people-drink-what-is-the-price-of-milk-per-liter/

ಅಸಲಿಗೆ ಬಿಎಂಡಬ್ಲು ಸಂಸ್ಥೆಯಲ್ಲಿ‌ ಕೆಲವು ಕಾರುಗಳನ್ನು ಮೇಲ್ಮಧ್ಯಮ ವರ್ಗದ ಜನ ಖರೀದಿ ಮಾಡಬಹುದು. ಬಿಎಂಡಬ್ಲು 2 ಸೀರೀಸ್ ಗ್ರಾನ್ ಕೋಪ್ ಕಾರು, ಬಿಎಂಡಬ್ಲು ಸಂಸ್ಥೆಯ ಅತ್ಯಂತ ಕಡಿಮೆ ಬೆಲೆಯ ಕಾರು. ಇನ್ನೋವಾ, XUV 700 ಖರೀದಿ ಮಾಡಲು ಇಚ್ಛಿಸುವವರು ಸುಲಭವಾಗಿ ಬಿಎಂಡಬ್ಲು 2 ಸೀರೀಸ್ ಗ್ರಾನ್ ಕೋಪ್ ಕಾರು ಖರೀದಿ ಮಾಡಬಹುದು ಈ ಕಾರಿನ ಬೆಲೆ 43 ಲಕ್ಷ ರೂಪಾಯಿ. ಇದು ಸೆಡಾನ್ ಮಾದರಿ ಕಾರು.

ಇನ್ನು ಬಿಎಂಡಬ್ಲು ಸಂಸ್ಥೆಯ ಕಡಿಮೆ ದರದ ಎಸ್ ಯುವಿ ಬಿಎಂಡಬ್ಲು ಎಕ್ಸ್ 1 ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಬಿಎಂಡಬ್ಲು ಸಂಸ್ಥೆಯ ಕಾರು ಇದು. ಈ ಕಾರಿನ ಬೆಲೆ 49.50 ಲಕ್ಷ ರೂಪಾಯಿಗಳು.

ಮೇಲ್ಮಧ್ಯಮ ವರ್ಗದವರೂ ಅಲ್ಲದೆ, ಮಧ್ಯಮ ವರ್ಗದ ಜನ ಖರೀದಿ ಮಾಡಬಹುದಾದ ವಾಹನವೊಂದು ಬಿಎಂಡಬ್ಲು ಬಳಿ ಇದೆ. ಅದುವೇ ಬಿಎಂಡಬ್ಲು ಜಿ 310 ಆರ್ ಬೈಕ್. ಈ ಬೈಕ್ ನ ಬೆಲೆ ಕೇವಲ 2.90 ಲಕ್ಷ ರೂಪಾಯಿಗಳು. ಟಿವಿಎಸ್, ಬಜಾಜ್, ಕೆಟಿಎಂ ನ ಕೆಲ ಬೈಕ್ ಗಳ ಬೆಲೆಗಿಂತಲೂ ಕಡಿಮೆ. ಆಯ್ಕೆ ನಿಮ್ಮದು.

LEAVE A REPLY

Please enter your comment!
Please enter your name here