Hassan
ದೇಶದಾದ್ಯಂತ ಸುದ್ದಿಯಾಗಿರುವ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಬಿಜೆಪಿ ಸದಸ್ಯ ಮತ್ತು ವಕೀಲ ದೇವರಾಜೇ ಗೌಡಗೆ ಬಂಧನದಿಂದ ಮುಕ್ತಿ ದೊರೆತಿದೆ. ಅವರಿಗೆ ಇಂದು ಜಾಮೀನು ದೊರೆತಿದ್ದು, ಜೈಲಿನಿಂದ ಹೊರಬಂದು ಮಾತನಾಡಿದ ದೇವರಾಜೇ ಗೌಡ ಮುಂದೆ ಕಾದು ನೋಡಿ ಎಂದಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ತಾವು ಮಾಡಲಿರುವ ಕಾರ್ಯಕ್ರಗಳ ದೊಡ್ಡ ಪಟ್ಟಿಯಲ್ಲೇ ನೀಡಿದ್ದಾರೆ.
51 ದಿನಗಳ ಬಳಿಕ ಹೊರಗೆ ಬಂದಿದ್ದೇನೆ, ನನ್ನ ಜಿಲ್ಲೆಯ ಲಕ್ಷಾಂತರ ಕಾರ್ಯಕರ್ತರು ನಾಯಕರು, ಸಾವಿರಾರು ವಕೀಲರ ಪ್ರಾರ್ಥನೆ ಭಗವಂತನಿಗೆ ಮುಟ್ಟಿದೆ ಉಸಿರು ಇರುವವರೆಗೆ ಯಾರನ್ನು ಮರೆಯುವುದಿಲ್ಲ, ಪ್ರಕರಣದ ಬಗ್ಗೆ ಈಗ ಹಲವು ಕಾರಣದಿಂದ ಕೆಲವು ವಿಚಾರ ಹೇಳಲ್ಲ, ಅದಕ್ಕೆ ಸಮಯ ಬರುತ್ತದೆ. ನನ್ನ ಬಂಧನ ಅನಿರೀಕ್ಷಿತ ಏನಲ್ಲ ಮೊದಲೇ ಇದನ್ನು ನಿರೀಕ್ಷಿಸಿದ್ದೆ. ಹಾಸನ ಜಿಲ್ಲೆಯ ಮಾನ ಹರಾಜು ಹಾಕೊ ಕೆಲಸ ಆಗಿದೆ ಕುಟುಂಬದ ದ್ಚೇಷಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹಾಸನ ಜಿಲ್ಲೆಯ ಮಾನ ಹರಾಜಾಗಿದೆʼ ಎಂದಿದ್ದಾರೆ.
“ಕೇಂದ್ರದ ಅಧಿವೇಶನ ಮುಗಿದ ಬಳಿಕ ಪ್ರದಾನಿ ಅವರನ್ನು ಭೇಟಿಯಾಗುತ್ತೇನೆ ಎಲ್ಲಾ ಕೇಂದ್ರ ಸಚಿವರನ್ನು ಕರೆದು ಹಾಸನದಲ್ಲಿ ಬೃಹತ್ ಸಮಾವೇಶ ಮಾಡುತ್ತೇನೆ. ಯಾವ ಜಿಲ್ಲೆಗೆ ಕಳಂಕ ತಂದರೊ ಅದೆರ ಜಿಲ್ಲೆಯಿಂದ ಸಂಘಟನೆಗೆ ಮುಂದಾಗುತ್ತೇವೆ, ಸ್ಥಳೀಯ ಸಂಸ್ಥೆ ಚುನಾವಣೆ ಗೆಲ್ಲಲು ಮೈತ್ರಿ ಪಕ್ಷದ ಗೆಲುವಿಗೆ ಪ್ರಯತ್ನ ಮಾಡುತ್ತೆವೆ. ಕುಮಾರಸ್ವಾಮಿ ಅವರು ಶೀಘ್ರವಾಗಿ ಹಾಸನ ಜಿಲ್ಲೆಗೆ ಬರುತ್ತಾರೆ, ಆಗ ನಾನು ಪ್ರತಿನಿಧಿಸುವ ಹೊಳೆನರಸೀಪುರ ಕ್ಷೇತ್ರದಲ್ಲಿ ಬೃಹತ್ ಕೈಗಾರಿಕೆ ಸ್ಥಾಪನೆಗೆ ಕುಮಾರಸ್ವಾಮಿ ಅವರಿಗೆ ಮನವಿ ಮಾಡುತ್ತೇನೆ. ನಾನು ಈ ಜಿಲ್ಲೆಯ ನೇತೃತ್ವ ವಹಿಸುತ್ತೇನೆ. ನಾನು ಪ್ರೀತಂ ಗೌಡ ಒಟ್ಟಾಗಿ ಕೆಲಸ ಮಾಡುತ್ತೇವೆʼ ಎಂದರು ದೇವರಾಜೇ ಗೌಡ.
ಪ್ರಜ್ವಲ್ ರೇವಣ್ಣ ಬಂಧನ, ರಾತ್ರಿ ವಿಮಾನ ನಿಲ್ದಾಣದಲ್ಲಿ ಏನೇನಾಯ್ತು?
ಪೆನ್ ಡ್ರೈವ್ ಪ್ರಕರಣ ಇನ್ನೂ ಬಾಕಿ ಇದೆ, ಅದರ ಬಗ್ಗೆ ಹೆಚ್ಚು ಚರ್ಚೆ ಮಾಡಲ್ಲ, ನಾನು ಪೆನ್‌ಡ್ರೈವ್ ಹಂಚಿಕೆ ಬಗ್ಗೆ ಮಾತನಾಡಿದಾಗ ಎಸ್ಐಟಿ ತನಿಖೆ ಆರಂಭಿಸಿರಲಿಲ್ಲ ಆಮೇಲೆ ಎಸ್ಐಟಿ ತನಿಖೆ ಆರಂಭವಾಗಿದೆ. ಪ್ರಕರಣವನ್ನು ಒಳ್ಳೆಯ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ತಾರ್ಕಿಕವಾಗಿ ಅಂತ್ಯವಾಗುತ್ತೆ, ಅತೀ ಶೀಘ್ರದಲ್ಲೇ ಒಳ್ಳೆಯ ಸುದ್ದಿ ಹೊರ ಬರುತ್ತೆ. ತನಿಖೆಯನ್ನು ಡಿ.ಕೆ.ಶಿವಕುಮಾರ್ ಮಾಡುತ್ತಿಲ್ಲ ಬದಲಿಗೆ ಒಳ್ಳೆಯ ಪೊಲೀಸ್ ಅಧಿಕಾರಿಗಳು ತನಿಖೆ ಮಾಡುತ್ತಿದ್ಧಾರೆ. ಪೆನ್‌ಡ್ರೈವ್ ಪ್ರಕರಣದಲ್ಲಿ ಸಾಕ್ಷಿಯಾಗಿದ್ದೇನೆ. ಎಲ್ಲಾ ರೀತಿಯ ಸಹಕಾರ ಕೊಟ್ಟಿದ್ದೇನೆ. ತನಿಖೆ ಮುಗಿದೆ ಮೇಲೆ ಸತ್ಯಾಂಶ ಹೊರ ಬರುತ್ತದೆ. ಸ್ವಲ್ಪ ದಿನ ಎಲ್ಲಾ ಹೊರಗೆ ಬರುತ್ತದೆ ಆಡಿಯೋ ಬಗ್ಗೆ ಎಫ್‌ಎಸ್‌ಎಲ್‌ನಿಂದ ಸತ್ಯ ಹೊರಗೆ ಬರುತ್ತದೆ” ಎಂದಿದ್ದಾರೆ.