ಸುಲಭವಾಗಿ ಸಿಗುವ ದಾಸವಾಳ ಹೂವಿನ ಹತ್ತು ಉಪಯೋಗಗಳು ಇಲ್ಲಿವೆ
ದಾಸವಾಳದ ಪುಡಿ ಮೈಗೆ ಹಚ್ಚುವುದರಿಂದ ಚರ್ಮ ಸುಕ್ಕುಗಟ್ಟುವುದಿಲ್ಲ. ಬದಲಿಗೆ ನುಣುಪಾಗುತ್ತದೆ.
ದಾಸವಾಳ ಹೂವು ಮತ್ತು ಎಲೆಗಳ ಪುಡಿ ಬಳಕೆಯಿಂದ ಕೂದಲು ಉದುರುವಿಕೆ ಕಡಿಮೆ ಆಗುತ್ತದೆ.
ದಾಸವಾಳದ ಪುಡಿಯ ನಿಯಮಿತ ಸೇವನೆಯಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ತೂಕ ಕಳೆದುಕೊಳ್ಳಲು ಇಚ್ಛಿಸುವರು ಸಹ ದಾಸವಾಳದ ಪುಡಿಯ ಸೇವನೆ ಮಾಡುತ್ತಾರೆ.
ದಾಸವಾಳ ಪುಡಿಯ ಸೇವನೆಯಿಂದ ಮಹಿಳೆಯರ ಮುಟ್ಟಿಗೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆಯಾಗುತ್ತವೆ.
ದಾಸವಾಳ ಹೂವಿನ ಬಳಕೆಯಿಂದ ಪಿತ್ತಜನಕಾಂಗದ ಆರೋಗ್ಯ ವೃದ್ಧಿ ಆಗುತ್ತದೆ. ಜೀರ್ಣಕ್ರಿಯೆ ಉತ್ತಮ ಗೊಳ್ಳುತ್ತದೆ.
ದಾಸವಾಳದ ಪುಡಿ ಹಾಲಿನಲ್ಲಿ ಬೆರೆಸಿ ಸೇವಿಸುವುದರಿಂದ ಶ್ವಾಸಕೋಶದ ಸಮಸ್ಯೆಗಳು ಕಡಿಮೆ ಆಗುತ್ತವೆ.
ದಾಸವಾಳದ ಪುಡಿ ಬಳಕೆ ಕಣ್ಣು, ಕೂದಲು ಹಾಗೂ ಚರ್ಮದ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.