Ambani family wedding
ವಿಶ್ವದ ಟಾಪ್ 10 ಶ್ರೀಮಂತರಲ್ಲಿ ಒಬ್ಬರಾದ ಮುಕೇಶ್ ಅಂಬಾನಿ ಹಾಗೂ ಅವರ ನೀತಾ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ, ವಜ್ರದ ಉದ್ಯಮಿಯ ಪುತ್ರಿ ರಾಧಿಕಾ ಮರ್ಚೆಂಟ್ ಅವರನ್ನು ವಿವಾಹವಾಗುತ್ತಿದ್ದಾರೆ. ವಿವಾಹವು ಇದೇ ಜುಲೈ ಹನ್ನೆರಡನೇ ತಾರೀಕು ನಡೆಯಲಿದೆ. ಈಗಾಗಲೇ ಎರಡು ಬಾರಿ ಭಾರಿ ಅದ್ಧೂರಿಯಾಗಿ ಪ್ರೀ ವೆಡ್ಡಿಂಗ್ ಪಾರ್ಟಿ ನಡೆದಿದ್ದು ವಿದೇಶದ ಜನಪ್ರಿಯ ತಾರೆಯರು ಬಂದು ಪ್ರದರ್ಶನ ನೀಡಿ ಹೋಗಿದ್ದಾರೆ.
ಇದೇ ತಿಂಗಳು 12ನೇ ತಾರೀಖಿನಂದು ಅನಂತ್ ಹಾಗೂ ರಾಧಿಕಾ ವಿವಾಹ ನಡೆಯಲಿದ್ದು, ವಿವಾಹ ಕಾರ್ಯಕ್ರಮದ ಆರಂಭ ಜುಲೈ 4 ರಂದೇ ಪ್ರಾರಂಭವಾಗಿದೆ. ಜುಲೈ 12ರ ವರೆಗೆ ಮದುವೆಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳು ನಡೆಯುತ್ತಲೇ ಇರಲಿವೆ. ಅದರ ನಂತರ ಕೂಡ ಹಲವು ದಿನ ವಿವಾಹ ಸಮಾರಂಭಕ್ಕೆ ಸಂಬಂಧಿಸಿದ ಇತರ ಕಾರ್ಯಕ್ರಮಗಳು ನಡೆಯಲಿವೆ. ವಿವಾಹಕ್ಕೆ ಮುಂಚಿತವಾಗಿಯೂ ಹಲವು ಕಾರ್ಯಕ್ರಮಗಳು ನಡೆಯಲಿವೆ. ಅದರ ಆರಂಭವು ಸಾಮೂಹಿಕ ವಿವಾಹ ಕಾರ್ಯಕ್ರಮದೊಂದಿಗೆ ಶುರುವಾಗಿದ್ದರೆ, ಗುಜರಾತಿ ಕುಟುಂಬಗಳು ಅನುಸರಿಸುವ ಸಂಪ್ರದಾಯದಂತೆ, ಮದುವೆಗೆ ಕೆಲ ದಿನಗಳು ಬಾಕಿ ಇರುವಾಗ ‘ಮೊಸಲು’ ಎಂದು ಆಚರಿಸಲಾಗುತ್ತದೆ. ಮದುವೆ ಗಂಡಿನ ತಾಯಿ ಕುಟುಂಬದವರು, ಅಂದರೆ ನೀತಾ ಅಂಬಾನಿಯವರ ಕುಟುಂಬದವರು, ಅದರಲ್ಲಿ ನೀತಾ ಅವರ ತಾಯಿ ಪೂರ್ಣಿಮಾ ದಲಾಲ್ ಹಾಗೂ ನೀತಾ ಅವರ ಸೋದರಿ ಮಮತಾ ದಲಾಲ್ ಅವರು ಅಂಬಾನಿಗಳ ಮನೆಗೆ ಬಂದು, ವಧು- ವರರನ್ನು ಆಶೀರ್ವದಿಸಿದರು. ಇದರ ಜತೆಗೆ ಕೆಲವು ಉಡುಗೊರೆಗಳನ್ನು ಸಹ ನೀಡಿದರು.
GT Mall: ರೈತರಿಗೆ ಅವಮಾನ ಮಾಡಿದ ಬೆಂಗಳೂರಿನ ಪ್ರಸಿದ್ಧ ಮಾಲ್
ಅನಂತ್ ಅಂಬಾನಿ ಅವರ ಸೋದರ ಮಾವಂದಿರು ಹಾಗೂ ಅವರ ಕುಟುಂಬದವರು ಸಹ ಈ ಸಂದರ್ಭದಲ್ಲಿ ಬಂದು, ವಧು- ವರರಿಗೆ ಸಾಂಪ್ರದಾಯಿಕ ಉಡುಗೊರೆಗನ್ನು ನೀಡುತ್ತಾರೆ. ಇದನ್ನು “ಮಮೇರು” ಎಂದು ಕರೆಯಲಾಗುತ್ತದೆ. ಈ ಮೊಸಲು ಹಾಗೂ ಮಮೇರು ಇವೆರಡು ಸಹ ಸಂಪ್ರದಾಯವನ್ನು ಪ್ರತಿನಿಧಿಸುತ್ತವೆ. ಇದು ಮದುವೆ ಸಂದರ್ಭದಲ್ಲಿ ಗೌರವ ನೀಡುವುದನ್ನು ಹಾಗೂ ದೊಡ್ಡ ಕುಟುಂಬಗಳು ಭಾಗೀ ಆಗುವುದನ್ನು ಪ್ರತಿಬಿಂಬಿಸುತ್ತದೆ. ಇನ್ನು ಈ ಕಾರ್ಯಕ್ರಮದ ಸಂದೇಶ ಏನೆಂದರೆ, ವಧು- ವರರ ತಂದೆ- ತಾಯಿ ಹಾಗೂ ಹತ್ತಿರದ ಕುಟುಂಬ ಸದಸ್ಯರಷ್ಟೇ ಅಲ್ಲದೆ, ಅದರ ಹೊರಗಿನ ಸಂಬಂಧಿಗಳು ಸಹ ಈ ವಿವಾಹ ಕಾರ್ಯಕ್ರಮದಲ್ಲಿ ಒಳಗೊಳ್ಳಬೇಕು ಎಂಬುದಾಗಿದೆ.
ಮೊಸಲು ಕಾರ್ಯಕ್ರಮದಲ್ಲಿ ಅನಂತ್ ಅಂಬಾನಿ ಅವರ ತಾಯಿ ನೀತಾ ಕುಟುಂಬದ ಸದಸ್ಯರು ಬಹಳ ದೊಡ್ಡ ಸಂಖ್ಯೆಯಲ್ಲಿ ಭಾಗೀ ಆಗಿದ್ದರು. ಮನೆಯ ಯಾವುದೇ ಸಮಾರಂಭಗಳಲ್ಲಿ ಸಾಂಪ್ರದಾಯಿಕ ಆಚರಣೆ ಹಾಗೂ ದೇವತಾ ಆರಾಧನೆ, ದಾನ- ಧರ್ಮ, ಅನ್ನ ಸಂತರ್ಪಣೆಗೆ ಒತ್ತು ನೀಡುವಂಥ ಸಂಪ್ರದಾಯಬದ್ಧ ಗುಜರಾತಿ ಕುಟುಂಬ ಅಂಬಾನಿಗಳದು. ಈಗಾಗಲೇ ಮಗಳು ಹಾಗೂ ಮಗ ಇಬ್ಬರದೂ ಮದುವೆ ಆಗಿದ್ದು, ಕಿರಿ ಮಗ ಅನಂತ್ ಅಂಬಾನಿಯ ವಿವಾಹ ಈಗ ನಡೆಯುತ್ತಿದೆ.