Hathras case: 121 ಮಂದಿ ಸಾವಿಗೆ ಕಾಣವಾದ ಸ್ವಾಮೀಜಿಯ ಐಶಾರಾಮಿ ಜೀವನ ಹೇಗಿದೆ ಗೊತ್ತೆ?

0
152
Narayan Sakar Hari Bhole Baba
Bhole Baba

Hathras case

ಮೂರು ದಿನದ ಹಿಂದಷ್ಟೆ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಭಾರಿ ಅವಘಡ ನಡೆದಿದೆ. ನಾರಾಯಣ ಸಾಕರ್ ಹರಿ ಅಲಿಯಾಸ್ ಭೋಲೆ ಬಾಬನ ಸತ್ಸಂಗ ಕೇಳಲು ಬಂದಿದ್ದ ಲಕ್ಷಾಂತರ ಭಕ್ತರಲ್ಲಿ 121 ಮಂದಿ ಕಾಲ್ತುಳಿತದಿಂದ ಸಾವನ್ನಪ್ಪಿದರು‌. ಈ ಅಮಾಯಕರ ಸಾವಿಗೆ ಭೋಲೆ ಬಾಬನ ಭದ್ರತೆಯವರೇ ಕಾರಣ ಎನ್ನಲಾಗುತ್ತಿದೆ. ಸತ್ಸಂಗದ ಆಯೋಜನೆಯಲ್ಲಿಯೂ ಸಹ ಸುರಕ್ಷತಾ ನಿಯಮಗಳನ್ನು ಪಾಲಿಸಿರಲಿಲ್ಲ ಎನ್ನಲಾಗುತ್ತಿದೆ.

ಅಮಾಯಕರ ಸಾವಿಗೆ ಕಾರಣಕರ್ತರಲ್ಲಿ ಒಬ್ಬರಾಗಿರುವ‌ ಭೋಲೆ ಬಾಬನ ಒಂದೊಂದೆ ವಿಷಯಗಳು ಈಗ ಹೊರಗೆ ಬರುತ್ತಿವೆ. ಭೋಲೆ ಬಾಬ ಇತರರಂತೆ ಕಾವಿ ಧರಿಸುವುದಿಲ್ಲ. ಬದಲಿಗೆ ಸೂಟು-ಬೂಟು, ಕೂಲಿಂಗ್ ಗ್ಲಾಸ್ ತೊಟ್ಟು ಸ್ಟೈಲ್ ಆಗಿ ಕಾಣಿಸಿಕೊಳ್ಳುತ್ತಾರೆ. ಈ ಮೊದಲು ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿ ನಾರಾಯಣ ಅಲಿಯಾಸ್ ಭೋಲೆ ಬಾಬ, ವಿಆರ್ ಎಅ್ ಪಡೆದುಕೊಂಡು ಊರೂರು ತಿರುಗಿ ಪ್ರವಚನ ನೀಡುವ‌ ಕಸುಬು ಆರಂಭಿಸಿದರು. ತಮ್ಮ ಪ್ರವಚನ ಕಾರ್ಯದಿಂದಲೆರ ಇಂದು ನೂರಾರು ಕೋಟಿ ಆಸ್ತಿ‌ಗಳಿಸಿದ್ದಾರೆ, ಯಾವ ಉದ್ಯಮಿ, ಸ್ಟಾರ್ ನಟತಿಗೂ ಕಡಿಮೆ ಇಲ್ಲದಂತೆ ಐಶಾರಾಮಿ ಜೀವನ ನಡೆಸುತ್ತಿದ್ದಾರೆ.

ಉತ್ತರ ಪ್ರದೇಶದ ಮೈನ್ ಪುರಿಯ ಬಿಚವಾ ಎಂಬಲ್ಲಿ 14 ಎಕರೆ ಪ್ರದೇಶದಲ್ಲಿ ಬೃಹತ್ ಬಂಗಲೆ ಕಟ್ಟಿದ್ದಾರೆ. ಈ ಬಂಗಲೆಯನ್ನು ಆಶ್ರಮ ಎಂದು ಕರೆಯುತ್ತಾರಾದರೂ ಅಸಲಿಗೆ ಇದು ಅರಮನೆಯಂತಿದೆ. ಒಂದು ಐಶಾರಾಮಿ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಸಿಗಬಹುದಾದ ಎಲ್ಲ ಸವಲತ್ತುಗಳು ಈ ಆಶ್ರಮ ಕಮ್ ಬಂಗ್ಲೆಯಲ್ಲಿ ಬಾಬಾಗೆ ಸಿಗುತ್ತವೆ. ಆಶ್ರಮಕ್ಕೆ ದೊಡ್ಡ ಬಾಗಿಲು, ಕಾಂಪೌಂಡ್ ನಿರ್ಮಿಸಲಾಗಿದ್ದು, ಬಾಗಿಲನ್ನು‌ ಚಿನ್ನದ ಬಣ್ಣದಲ್ಲಿ ನಿರ್ಮಿಸಲಾಗಿದೆ.

100 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣನಾದ ಭೋಲೆ ಬಾಬ, ಯಾರೀತ? ಹಿನ್ನೆಲೆ ಏನು?

ಈ ಆಶ್ರಮ ನಿರ್ಮಾಣಗೊಂಡಿರುವ ಸ್ಥಳವನ್ನು ವಿನೋದ್ ಬಾಬು ಎಂಬುವರು ಉಡುಗೊರೆ ನೀಡಿದ್ದರಂತೆ. ನೂರಾರು ಜನರಿಂದ ದೇಣಿಗೆ ಪಡೆದು ಈ ಐಶಾರಾಮಿ ಆಶ್ರಮ‌ ಕಮ್ ಬಂಗ್ಲೆ‌ ನಿರ್ಮಾಣ ಮಾಡಲಾಗಿದೆ. 2.50 ಲಕ್ಷದಿಂದ 25 ಸಾವಿರದ ವರೆಗೆ ದೇಣಿಗೆ ಕೊಟ್ಟವರ ಹೆಸರನ್ನು ಆಶ್ರಮದ ಮುಂದೆ ಹಾಕಲಾಗಿದೆ. 25,000 ಕ್ಕಿಂತಲುಯ ಕಡಿಮೆ ಹಣ ಕೊಟ್ಟವರ ಹೆಸರು ಹಾಕಿಸಲಾಗಿಲ್ಲ.

ಇದು ಮಾತ್ರವೇ ಅಲ್ಲದೆ ಉತ್ತರ ಪ್ರದೇಶದ ಆಗ್ರಾ ಸೇರಿದಂತೆ ಕೆಲವು ಪ್ರಮುಖ ನಗರಗಳಲ್ಲಿ ಬಾಬಾ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಸಹ ಹೊಂದಿದ್ದಾರೆ ಎನ್ನಲಾಗುತ್ತಿದೆ. ಉತ್ತರ ಪ್ರದೇಶದ ನೆರೆಯ ರಾಜ್ಯಗಳಲ್ಲಿಯೂ ಸಹ ಆಸ್ತಿ‌ಹೊಂದಿದ್ದಾರಂತೆ ಬಾಬ.

ಘಟನೆ ಬಳಿಕ ಆಶ್ರಮದ ಮುಂದೆ ಪೊಲೀಸರ ನಿಯೋಜನೆ ಮಾಡಲಾಗಿದೆ. ಆದರೆ ಘಟನೆ ನಡೆದ ಬಳಿಕ ಬಾಬಾ ಆಶ್ರಮದಲ್ಲಿ‌ ಇಲ್ಲ ಎನ್ನಲಾಗುತ್ತಿದೆ. ಎಫ್ ಐಆರ್ ನಲ್ಲಿ ಬಾಬಾನ ಹೆಸರು ಈ ವರೆಗೆ ಸೇರಿಸಿಲ್ಲ. ಆದರೆ ಬಾಬಾನ ಕೆಲವು ಆಪ್ತರ ಹೆಸರು ಸೇರಿಸಲಾಗಿದೆ. 80 ಸಾವಿರ ಜನರಕ್ಕೆ ಒಪ್ಪಿಗೆ ಪಡೆದಿದ್ದ ಆಯೋಜಕರು 2.50 ಲಕ್ಷ‌ ಜನರನ್ನು ಸೇರಿಸಿದ್ದರಂತೆ. ಪ್ರಕರಣದ ತನಿಖೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here