Darshan:’ಆ ಒಬ್ಬ ವ್ಯಕ್ತಿಯ ಶಾಪದಿಂದಲೇ ದರ್ಶನ್​ಗೆ ಈ ಗತಿ ಬಂದಿದೆ’

0
130
Darshan
Darshan Arrested in Renuka Swamy case

Darshan

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಜೈಲು ಸೇರಿದ್ದಾರೆ. ಕನಿಷ್ಟ ನಾಲ್ಕೈದು ತಿಂಗಳು ಅವರಿಗೆ ಜಾಮೀನು ದೊರಕದು ಎನ್ನಲಾಗುತ್ತಿದೆ. ದರ್ಶನ್ ಆಪ್ತೆ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ ಎಂಬ ಕಾರಣಕ್ಕೆ ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಕರೆತಂದು ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ. ‘ಕಾಟೇರ’ ಸೂಪರ್ ಹಿಟ್ ಆಗಿ ವೃತ್ತಿಯಲ್ಲಿ ಏರು ಗತಿಯಲ್ಲಿ ಸಾಗುತ್ತಿದ್ದ ದರ್ಶನ್ ಹಠಾತ್ತನೆ ಕೊಲೆಯಂಥಹಾ ಗುರುತುರ ಆರೋಪಕ್ಕೆ ಸಿಲುಕಿದ್ದಾರೆ. ಆದರೆ ಇದಕ್ಕೆಲ್ಲ ಆ ಒಬ್ಬ ವ್ಯಕ್ತಿಯ ಶಾಪ ಕಾರಣ ಎನ್ನಲಾಗುತ್ತಿದೆ. ಯಾರು ಆ ವ್ಯಕ್ತಿ? ಆ ವ್ಯಕ್ತಿಗೂ ದರ್ಶನ್​ಗೂ ಏನು ಸಂಬಂಧ? ದರ್ಶನ್​ ಇಂದ ಆ ವ್ಯಕ್ತಿಗೆ ಏನು ಅನ್ಯಾಯವಾಗಿದೆ?

ದರ್ಶನ್ ಮನೆ ಇರುವುದು ರಾಜರಾಜೇಶ್ವರಿ ನಗರದಲ್ಲಿ. ಅಲ್ಲಿ ಅವರೊಬ್ಬರೇ ಇರುತ್ತಾರೆ. ಅಲ್ಲಿ ಅವರ ಗೆಳೆಯರೊಟ್ಟಿಗೆ ಪಾರ್ಟಿಗಳು ಸಹ ಆಗಾಗ್ಗೆ ನಡೆಯುತ್ತಿರುತ್ತವೆ. ದರ್ಶನ್​ರ ಅಭಿಮಾನಿಗಳು ಸಹ ಅವರನ್ನು ಕಾಣಲು ಬರುವುದು ಅಲ್ಲಿಗೇ. ಹೆಚ್ಚು ಜನ ಇಲ್ಲಿಗೆ ಬರುತ್ತಿದ್ದ ಕಾರಣಕ್ಕೆ ದರ್ಶನ್ ಇಲ್ಲಿ ಭದ್ರತೆಯವರನ್ನು ನಿಯೋಜನೆ ಮಾಡಿಕೊಂಡಿದ್ದರು.

ಜಸ್ಟ್ ಡಯಲ್ ಮೂಲಕ ಸಂಪರ್ಕ ಮಾಡಿದ್ದ ದರ್ಶನ್ ಕಡೆಯವರು ಸಂಸ್ಥೆಯೊಂದಕ್ಕೆ ಭದ್ರತಾ ಸಿಬ್ಬಂದಿ ನೇಮಕ ಮಾಡಲು ಒಪ್ಪಂದ ಮಾಡಿಕೊಂಡಿದ್ದರು. ಅಂತೆಯೇ ಇಬ್ಬರು ಭದ್ರತಾ ಸಿಬ್ಬಂದಿಯನ್ನು ದರ್ಶನ್ ಮನೆಯ ಬಳಿ ನೇಮಿಸಲಾಗಿತ್ತಂತೆ. ಒಬ್ಬರು ದಿನದಲ್ಲಿ ಇನ್ನೊಬ್ಬರು ರಾತ್ರಿ. ಆದರೆ ಕೆಲವೇ ತಿಂಗಳಲ್ಲಿ ದರ್ಶನ್​ರ ಭದ್ರತಾ ಸಿಬ್ಬಂದಿಗೆ ದರ್ಶನ್​ ಆಪ್ತರಿಂದ ಕಿರುಕುಳ ಪ್ರಾರಂಭವಾಗಿತ್ತಂತೆ.

ದರ್ಶನ್ ವಿಷಯವಾಗಿ ಕೊನೆಗೂ ಬಾಯ್ಬಿಟ್ಟ ಸುಮಲತಾ ಹೇಳಿದ್ದು ಹೀಗೆ

ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದು, ಅತ್ಯಂತ ಅವಾಚ್ಯ ಶಬ್ದದಿಂದ ಬೈದಿದ್ದು ಎಲ್ಲವೂ ಆಗಿತ್ತು ಎಂದು ಭದ್ರತಾ ಸಂಸ್ಥೆಯ ಮಾಲೀಕ ನೆನಪು ಮಾಡಿಕೊಂಡಿದ್ದಾರೆ. ಕೊನೆಗೆ ನಾವೇ ದರ್ಶನ್ ಸಹವಾಸ ಬೇಡವೆಂದು ಭದ್ರತಾ ಸಿಬ್ಬಂದಿ ಕೆಲಸ ಬಿಟ್ಟು ಬಂದರು. ನಾವೂ ಸಹ ಸಹವಾಸ ಬೇಡವೆಂದು ದೂರಾದೆವು, ಆ ನಂತರವೂ ನಮ್ಮನ್ನು ಬಂದು ಕೇಳಿದರು. ಆದರೆ ಕೋಟಿ ಕೊಟ್ಟರು ದರ್ಶನ್​ಗೆ ಕೆಲಸ ಮಾಡುವುದಿಲ್ಲ ಎಂದು ಹೇಳಿ ಕಳಿಸಿದ್ದೆ ಎಂದು ಹೇಳಿದ್ದಾರೆ ಭದ್ರತಾ ಸಂಸ್ಥೆ ಮಾಲೀಕ.

ಭದ್ರತಾ ಸಿಬ್ಬಂದಿಗೆ ಕಿರುಕುಳ ನೀಡಿದಾಗ ಆ ಸೆಕ್ಯುರಿಟಿ ಬಹಳ ನೊಂದುಕೊಂಡಿದ್ದ, ದರ್ಶನ್​ಗೆ ಅಂದು ಆತ ಶಾಪ ಸಹ ಹಾಕಿದ್ದ. ಅದಕ್ಕೆ ನೋಡಿ, ಇವರು ಮಾಡಿದ ಈ ಪ್ರಕರಣ ಹೊರಗೆ ಬಂದಿದ್ದು ಸಹ ಸೆಕ್ಯುರಿಟಿ ಗಾರ್ಡ್ ಇಂದಲೇ. ರೇಣುಕಾ ಸ್ವಾಮಿ ಶವವನ್ನು ಮೊದಲು ನೋಡಿದ್ದು ಒಬ್ಬ ಸೆಕ್ಯುರಿಟಿ ಗಾರ್ಡ್ ಮತ್ತು ಪೊಲೀಸರಿಗೆ ಮೊದಲು ದೂರು ಕೊಟ್ಟಿದ್ದು ಸಹ ಒಬ್ಬ ಸೆಕ್ಯುರಿಟಿ ಗಾರ್ಡ್ ಎಂದು ಭದ್ರತಾ ಸಂಸ್ಥೆ ಮಾಲೀಕ ಹೇಳಿದ್ದಾರೆ.

LEAVE A REPLY

Please enter your comment!
Please enter your name here