Nelamangala: ಸಂಸದರ ಅಭಿನಂಧನಾ ಸಮಾರಂಭದಲ್ಲಿ ಎಣ್ಣೆ‌ ಹಂಚಿಕೆ, ಕುಡಿದು ತೇಲಾಡಿದ ‘ಮತದಾರ’

0
98
Nelamangala

Nelamangala

ಕಳೆದ ಲೋಕಸಭೆ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಭರ್ಜರಿಯಾಗಿ ಮದ್ಯ ವಿತರಣೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದ ಲೋಕಸಭೆ ಅಭ್ಯರ್ಥಿಗಳ ಗೆಲುವಿನ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ್ದ ಜನರಿಗೆ ಭರ್ಜರಿಯಾಗಿ ಮದ್ಯ ವಿತರಣೆ ಮಾಡಲಾಗಿದ್ದು, ಇದಕ್ಕೆ ಪೊಲೀಸರೆ ಕಾವಲಿದ್ದಿದ್ದು ವಿಶೇಷ.

ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಿಂದ ಗೆದ್ದ ಬಿಜೆಪಿ ಅಭ್ಯರ್ಥಿ ಕೆ ಸುಧಾಕರ್ ಅವರಿಗೆ ನೆಲಮಂಗಲದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸಲ್ಲಿಸಲಾಯ್ತು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಆರ್ ಅಶೋಕ್‌ ಸೇರಿದಂತೆ ಕೆಲವು ಜೆಡಿಎಸ್ ಮುಖಂಡರು ಸಹ ಭಾಗವಹಿಸಿದ್ದರು. ಭಾರಿ ಸಂಖ್ಯೆಯಲ್ಲಿ ಜನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಸಂಸದ ಬಿಜೆಪಿಯ ಡಾ ಮಂಜುನಾಥ್ ಇರಲಿಲ್ಲ ಎನ್ನಲಾಗುತ್ತಿದೆ.

DK Shivakumar: ʼಅದೃಷ್ಟದ ಮನೆʼ ಪ್ರವೇಶಿಸಿದ ಡಿಕೆ ಶಿವಕುಮಾರ್, ಬದಲಾಗಲಿದೆಯೇ ಅದೃಷ್ಟ?

ಕಾರ್ಯಕ್ರಮಕ್ಕೆ ಹಾಜರಾದವರಿಗೆ ಭರ್ಜರಿ ಬಾಡೂಟದ ಜೊತೆಗೆ ಮದ್ಯವನ್ನು ಸಹ ಉಚಿತವಾಗಿ ಹಂಚಲಾಗಿದೆ. ಸುಮಾರು 20 ಲಕ್ಷ ಮೌಲ್ಯದ ಮದ್ಯವನ್ನು ಈ ವೇಳೆ ಹಂಚಲಾಗಿದೆ ಎನ್ನಲಾಗಿದೆ. ಉಚಿತ ಮದ್ಯಕ್ಕಾಗಿ ಯುವಕರು, ವೃದ್ಧರೆನ್ನದೆ ಜನ ಸಾಲು ಗಟ್ಟಿದ್ದರು, ಇವರನ್ನು ನಿಯಂತ್ರಿಸುವುದೇ ಪೊಲೀಸರಿಗೆ ಕಷ್ಟವಾಗಿತ್ತು. ಹಲವರು ಎರಡೆರಡು ಬಾರಿ ಬಂದು ಮದ್ಯ ಪಡೆದು ಅಲ್ಲೇ ಮೈದಾನದಲ್ಲಿಯೇ ಕುಡಿದು ತೇಲಾಡಿದ್ದಾರೆ. ಜೊತೆಗೆ ಭರ್ಜರಿ ಬಾಡೂಟವನ್ನೂ ಸವಿಸಿದ್ದಾರೆ.

ಬಹಿರಂಗವಾಗಿ ಮದ್ಯ ವಿತರಣೆ ಮಾಡಿದರ ಬಗ್ಗೆ ಸ್ಪಷ್ಟನೆ ನೀಡಿರುವ ಬೆಂಗಳೂರು ಗ್ರಾಮಾಂತರ ಅಬಕಾರಿ ಡಿಎಸ್ ಪಿ, ‘ಅಭಿನಂದನಾ ಕಾರ್ಯಕ್ರಮ ಇದ್ದ ಕಾರಣ ಕೆಲವು ಷರತ್ತುಗಳೊಟ್ಟಿಗೆ ಒಂದು ದಿನದ ಮಟ್ಟಿಗೆ ಕಾರ್ಯಕ್ರಮದ ಸ್ಥಳದಲ್ಲಿ ಮಾತ್ರ ಮದ್ಯ ಹಂಚಲು ಅನುಮತಿ ಪಡೆಯಲಾಗಿತ್ತು’ ಎಂದಿದ್ದಾರೆ. ಆದರೆ ಕಾರ್ಯಕ್ರಮದ ವೇದಿಕೆಯಿಂದ ಬಲು ದೂರ ಈ ಮದ್ಯ ಹಂಚಿಕೆ ಕಾರ್ಯಕ್ರಮ ನಡೆದಿತ್ತು.

LEAVE A REPLY

Please enter your comment!
Please enter your name here