BC Patil
ನಟ, ಮಾಜಿ ಶಾಸಕ ಬಿಸಿ ಪಾಟೀಲ್ ಅಳಿಯ ಪ್ರತಾಪ್ ಕುಮಾರ್ ಕೆಜಿ ಇಂದು (ಜುಲೈ 08) ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. 41 ವರ್ಷ ವಯಸ್ಸಿನ ಪ್ರತಾಪ್, ದಾವಣಗೆರೆಯ ಹೊನ್ನಾಳಿ ತಾಲೂಕಿನ ಅರಕೆರೆ ಸಮೀಪದ ಅರಣ್ಯದ ಬಳಿ ಕಾರು ನಿಲ್ಲಿಸಿ ಕಾರಿನಲ್ಲಿಯೇ ವಿಷ ಸೇವಿಸಿದ್ದಾರೆ. ಪ್ರತಾಪ್ ಕುಮಾರ್ ವಿಷ ಸೇವನೆ ಮಾಡಿರುವ ವಿಷಯ ತಿಳಿದ ಕೂಡಲೇ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯ್ತು. ಆದರೆ ಆಸ್ಪತ್ರೆಯಲ್ಲಿಯೇ ಪ್ರತಾಪ್ ಮೃತಪಟ್ಟಿದ್ದಾರೆ.
ಬಿಸಿ ಪಾಟೀಲ್ ಅವರ ಮೊದಲ ಪುತ್ರಿ ಸೌಮ್ಯ ಅವರನ್ನು ಹದಿನಾರು ವರ್ಷದ ಹಿಂದೆ ಪ್ರತಾಪ್ ವಿವಾಹವಾಗಿದ್ದರು. ದಾವಣಗೆರೆಯ ಕತ್ತಲಗೆರೆ ಗ್ರಾಮದ ನಿವಾಸಿಯಾಗಿದ್ದ ಪ್ರತಾಪ್, ಬಿಸಿ ಪಾಟೀಲ್ ಅವರಿಗೆ ಒಂದು ರೀತಿ ಮನೆ ಅಳಿಯನಾಗಿದ್ದರು. ಬಿಸಿ ಪಾಟೀಲ್ ಅವರ ಹಣದ ವ್ಯವಹಾರಗಳನ್ನು ಪ್ರತಾಪ್ ಅವರೇ ನೋಡಿಕೊಳ್ಳುತ್ತಿದ್ದರು ಎನ್ನಲಾಗುತ್ತಿದೆ.
ಆಸ್ಪತ್ರೆಯಲ್ಲಿ ಅಳಿಯ ಪ್ರತಾಪ್ ನಿಧನವಾದ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಬಿಸಿ ಪಾಟೀಲ್, ‘ಅಳಿಯನಿಗೆ ಮಗು ಆಗಿರಲಿಲ್ಲ. ಇದು ಅವನಿಗೆ ಕೊರಗಿತ್ತು. ಇತ್ತೀಚೆಗೆ ಬೆಂಗಳೂರಿಗೆ ಬಂದಾಗ ಸೆರೋಗಸಿ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ್ದರು ವಕೀಲರನ್ನು ಸಹ ಭೇಟಿ ಆಗಿ ಮಾತನಾಡಿದ್ದರು ಎಂದು ಮಾಹಿತಿ ನೀಡಿದ್ದರು.
ಆತ್ಮಹತ್ಯೆ ಮಾಡಿಕೊಂಡ ನಿರ್ಮಾಪಕನ ಖಾತೆಯಿಂದ ಪವಿತ್ರಾ ಗೌಡಗೆ ಕೋಟಿ-ಕೋಟಿ ಹಣ ವರ್ಗ!
‘ಆತನಿಗೆ ಕುಡಿತದ ಚಟವಿತ್ತು. ಒಮ್ಮೆ ಫ್ಯಾಟಿ ಲಿವರ್ ಸಹ ಆಗಿತ್ತು. ಹಾಗಾಗಿ ಆತನ ಕುಡಿತದ ಚಟ ಬಿಡಿಸಲೆಂದು ಬೆಂಗಳೂರಿನ ಒಂದು ಡಿ ಅಡಿಕ್ಷನ್ ಸೆಂಟರ್ಗೆ ಸೇರಿಸಿ ಎರಡು ತಿಂಗಳು ಚಿಕಿತ್ಸೆ ಕೊಡಿಸಿದೆವು. ಅಲ್ಲಿಂದ ಬಂದಮೇಲೆ ಚೆನ್ನಾಗಿಯೇ ಇದ್ದರು. ಆರೋಗ್ಯವೂ ಸುಧಾರಣೆ ಆಗಿತ್ತು. ಆದರೆ ಇತ್ತೀಚೆಗೆ ಮತ್ತೆ ಕುಡಿತ ಪ್ರಾರಂಭ ಮಾಡಿದ್ದಾರೆ ಎಂಬ ಸುದ್ದಿ ಗೊತ್ತಾಗಿತ್ತು’ ಎಂದು ಬೇಸರ ವ್ಯಕ್ತಪಡಿಸಿದರು ಬಿಸಿ ಪಾಟೀಲ್.
‘ನನಗೆ ಮಗನಂತೆ ಇದ್ದ ಆತ. ನನ್ನ ಜಮೀನು, ವ್ಯವಹಾರ, ರಾಜಕೀಯ ಎಲ್ಲವನ್ನೂ ಆತನೇ ನೋಡಿಕೊಳ್ಳುತ್ತಿದ್ದ. ನಾನು ಹಲವು ಬಾರಿ ಕುಡಿಯಬೇಡ ಎಂದು ಸಲಹೆ ನೀಡಿದ್ದೆ. ಇಲ್ಲ ಅಣ್ಣಾರೆ ಬಿಟ್ಟಿದ್ದೀನಿ ಎಂದಿದ್ದ. ನಿನಗೆ ದೇವರು ಎರಡನೇ ಅವಕಾಶ ಕೊಟ್ಟಿದ್ದಾನೆ ಮತ್ತೆ ಮುಂದುವರೆಸಬೇಡ ಎಂದಿದ್ದೆ ಆದರೆ ಮತ್ತೆ ಪ್ರಾರಂಭ ಮಾಡಿದ. ಈಗ ಹೀಗಾಯ್ತು’ ಎಂದಿದ್ದಾರೆ ಪಾಟೀಲರು.